ಕಂಪ್ಯೂಟರ್ ವಿಕಿರಣದಿಂದ ಚರ್ಮವನ್ನು ರಕ್ಷಿಸೋದು ಹೇಗೆ?

Suvarna News   | Asianet News
Published : Apr 22, 2021, 05:11 PM IST

ಕಂಪ್ಯೂಟರ್ ಪರದೆ ಮತ್ತು ಮೊಬೈಲ್ ಫೋನ್‌ಗಳಿಂದ ಹೊರ ಸೂಸುವ ನೀಲಿ ಬೆಳಕಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಚರ್ಮವು ಅಕಾಲಿಕ ವಯಸ್ಸಾಗುವಿಕೆ ಮತ್ತು ಪಿಗ್ಮೆಂಟೇಷನ್‌ಗೆ ಕಾರಣವಾಗಬಹುದು. ಸೌಂದರ್ಯ ಬ್ರಾಂಡ್‌ಗಳು ಈಗಾಗಲೇ ಹಲವು ಶ್ರೇಣಿಯ ನೀಲಿ ಬೆಳಕಿನ ರಕ್ಷಣಾ ಕ್ರೀಮ್‌ಗಳೊಂದಿಗೆ ಹೊರಬಂದಿದ್ದು, ಅದು ಚರ್ಮಕ್ಕೆ ಅಗತ್ಯ ಉತ್ಕರ್ಷಣ ನಿರೋಧಕವನ್ನು ಒದಗಿಸುತ್ತದೆ ಮತ್ತು ಅದನ್ನು ಹಾನಿಯಾಗದಂತೆ ರಕ್ಷಿಸುತ್ತದೆ. ಆದರೆ ಈ ಹಾನಿಯಿಂದ ಚರ್ಮವನ್ನು ರಕ್ಷಿಸಲು ಕೆಲವು ನ್ಯಾಚುರಲ್ ವಿಧಾನಗಳಿಲ್ಲಿವೆ.

PREV
15
ಕಂಪ್ಯೂಟರ್ ವಿಕಿರಣದಿಂದ ಚರ್ಮವನ್ನು ರಕ್ಷಿಸೋದು ಹೇಗೆ?

ಆಂಟಿಆಕ್ಸಿಡೆಂಟ್ ಸಮೃದ್ಧವಾಗಿರುವ ಆಹಾರ ಸೇವಿಸಿ
ಉತ್ಕರ್ಷಣ ನಿರೋಧಕಗಳು ಚರ್ಮದಲ್ಲಿ ಫ್ರೀ-ರಾಡಿಕಲ್ ಉತ್ಪಾದನೆಯನ್ನು ಮಿತಿಗೊಳಿಸುತ್ತವೆ. ಆದ್ದರಿಂದ ಆವಕಾಡೊಗಳು, ಟೊಮ್ಯಾಟೊ ಮತ್ತು ವಾಲ್‌ನಟ್‌ನಂಥ ಉತ್ಕರ್ಷಣ ನಿರೋಧಕಗಳಿರುವ ಆಹಾರವನ್ನು ಸೇವಿಸಬೇಕು. ಇದು ಚರ್ಮದ ವಯಸ್ಸಾಗುವಿಕೆ ಮತ್ತು ಪಿಗ್ಮೆಂಟೇಷನ್ ಕಡಿಮೆ ಮಾಡುತ್ತದೆ.

25

ಒಳಾಂಗಣದಲ್ಲಿ ಎಸ್ಪಿಎಫ್ ಕ್ರೀಮ್ ಬಳಸಿ
ಪರದೆಯಿಂದ ಹೊರಸೂಸುವ ನೀಲಿ ಬೆಳಕು ಸೂರ್ಯನಿಂದ ಹೊರಸೂಸುವ ಯುವಿ ಕಿರಣಗಳಂತೆ ಹಾನಿಕಾರಕ. ಆದ್ದರಿಂದ ದೀರ್ಘಕಾಲ ಕುಳಿತುಕೊಳ್ಳುವಾಗ ಮತ್ತು ಪರದೆ ಮುಂದೆ ಕೆಲಸ ಮಾಡುವಾಗ ಎಸ್ಪಿಎಫ್ ಇರುವ ಮಾಯಿಶ್ಚರೈಸರ್ ಬಳಸಬೇಕು. ಮುಖಕ್ಕೆ ಪ್ರತಿ ಗಂಟೆಗೆ ಅದನ್ನು ಹಚ್ಚಲು ಮರೆಯಬೇಡಿ.

35

ನಿಯಮಿತವಾಗಿ ಮುಖ ತೊಳೆಯಿರಿ
ಪರದೆಯಿಂದ ಆಗಾಗ್ಗೆ ವಿರಾಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ನಿಯಮಿತವಾಗಿ ಮುಖ ತೊಳೆಯಬೇಕು. ಪರದೆ ಮುಂದೆ ಹೆಚ್ಚು ಹೊತ್ತು ಕುಳಿತಾಗ radicals ಕಣಗಳು ಮುಖದ ಮೇಲೆ ನೆಲೆಗೊಳ್ಳುತ್ತವೆ. ಮುಖ ತೊಳೆಯುವುದು ರಿಫ್ರೆಶ್ ಮತ್ತು ಶಕ್ತಿಯುತವಾಗಿದೆ. ಪರದೆಯನ್ನು ದೇಹದಿಂದ 18 ಇಂಚು ದೂರದಲ್ಲಿರುವಂತೆ ನೋಡಿಕೊಂಡರೆ ಬೆಸ್ಟ್.

45

ಅಂಡರ್ ಐ ಜೆಲ್ ಬಳಸಿ
ಕಣ್ಣುಗಳ ಸುತ್ತ ಸುಕ್ಕುಗಳನ್ನು ತಡೆಗಟ್ಟಲು, ಕಣ್ಣಿನ ಕೆಳಗೆ ಜೆಲ್ ಅನ್ನು ಹಚ್ಚಿ. ಪ್ರತಿ ಬಾರಿ ಪರದೆ ನೋಡುವಾಗ ನಿಮ್ಮ ಕಣ್ಣುಗಳನ್ನು ಕಿರಿದಾಗಿಸುತ್ತೀರಿ ಮತ್ತು ಇದು ಅದರ ಸುತ್ತ ಸುಕ್ಕುಗಳಿಗೆ ಕಾರಣವಾಗಬಹುದು. ಆದ್ದರಿಂದ ಕಣ್ಣುಗಳಿಗೆ ಜೆಲ್ ಅಥವಾ ಕ್ರೀಮ್ ಹಚ್ಚುವುದರಿಂದ ಅಂತಹ ಯಾವುದೇ ಸಮಸ್ಯೆಯನ್ನು ತಡೆಯುತ್ತದೆ.

55

ಕನಿಷ್ಠ 2 ಲೀಟರ್ ನೀರು ಕುಡಿಯಿರಿ
ಕಂಪ್ಯೂಟರ್ನಿಂದ ಬರುವ ಶಾಖವು ಚರ್ಮದ ಶುಷ್ಕತೆಗೆ ಕಾರಣವಾಗುತ್ತದೆ. ಪ್ರತಿದಿನ ಸಾಕಷ್ಟು ನೀರು ಕುಡಿಯುತ್ತಿದ್ದರೆ ಇದನ್ನು ಕಡಿಮೆ ಮಾಡಬಹುದು. ಚರ್ಮವನ್ನು ಪೋಷಿಸಲು ಮುಖದ ಮಾಯಿಶ್ಚರೈಸರ್ ಅನ್ನು ಸಹ ಬಳಸಬಹುದು.

click me!

Recommended Stories