ಮೊಡವೆ ತಡೆಯುತ್ತದೆಮಾವಿನಲ್ಲಿ ವಿಟಮಿನ್ ಸಿ ಮತ್ತು ಮೆಗ್ನೀಷಿಯಮ್ ಇದೆ, ಇದು ಮೊಡವೆಗಳಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಮತ್ತು ಮೊಡವೆಗಳನ್ನು ಉಂಟು ಮಾಡುವ ಚರ್ಮದ ಮೇಲಿನ ಎಣ್ಣೆಯನ್ನು ಕಡಿಮೆ ಮಾಡುತ್ತದೆ.
ಚರ್ಮದ ಗುಣಮಟ್ಟ ಹೆಚ್ಚಿಸುತ್ತದೆಇದರಲ್ಲಿ ಮ್ಯಾಂಗಿಫೆರಿನ್ ಎಂಬ ಪರಿಣಾಮಕಾರಿ ಆಂಟಿ ಆಕ್ಸಿಡೆಂಟ್ ಇದೆ ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸಿ ಉತ್ತಮ ಚರ್ಮ ನೀಡುತ್ತದೆ.
ಕೊಲಾಜನ್ ಉತ್ಪಾದನೆಮಾವಿನಲ್ಲಿ ವಿಟಮಿನ್ ಎ ಇದೆ, ಇದು ಕೊಲಾಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ಚರ್ಮದ ಗುಣಮಟ್ಟವನ್ನು ಉತ್ತೇಜಿಸುತ್ತದೆ.
ಸ್ಕಿನ್ ಬ್ರೈಟನಿಂಗ್ ಏಜೆಂಟ್ಮಾವಿನ ಬಣ್ಣವು ಚರ್ಮದ ಮೇಲಿನ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ನೈಸರ್ಗಿಕವಾಗಿ ಪ್ರಕಾಶಮಾನಗೊಳಿಸುತ್ತದೆ.
ಸೂರ್ಯನಿಂದ ಕಿರಣಗಳಿಂದ ರಕ್ಷಣೆಮಾವಿನಲ್ಲಿ ಇರುವ ವಿಟಮಿನ್ ಸಿ ಸೂರ್ಯನ ಕಿರಣಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ.
ಸ್ಕಿನ್ ಸಾಫ್ಟ್ಸ್ವಲ್ಪ ಮಾವಿನ ತಿರುಳನ್ನು ಚರ್ಮದ ಮೇಲೆ ಹಚ್ಚಿ ಮತ್ತು ಚರ್ಮವು ಎಷ್ಟು ಮೃದುವಾಗುತ್ತದೆ ನೀವೇ ನೋಡಬಹುದು.
ಚರ್ಮದ ಬಣ್ಣ ಹೆಚ್ಚಿಸುತ್ತದೆಮುಖದ ಸ್ಕಿನ್ ಡಲ್ ಆಗಿದ್ದರೆ ಮಾವಿನ ರಸವು ಚರ್ಮಕ್ಕೆ ಮಕರಂದವಾಗಬಹುದು. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾದ, ರಸದ ಲೇಪನವು ಚರ್ಮದ ಟೋನ್ ಅನ್ನು ಸಮಗೊಳಿಸುತ್ತದೆ.
ನೈಸರ್ಗಿಕ ಮಾಯೀಶ್ಚರೈಸರ್ಮಾವಿನಲ್ಲಿ ಇರುವ ಆಂಟಿ ಆಕ್ಸಿಡೆಂಟುಗಳು ಇದನ್ನು ನೈಸರ್ಗಿಕ ಮಾಯೀಶ್ಚರೈಸರ್ ಆಗಿ ಮಾಡುತ್ತವೆ, ಇದು ತ್ವಚೆಗೆ ಉತ್ತಮವಾಗಿದೆ.