10ನೇ ವಯಸ್ಸಲ್ಲಿ ಮಗುವಿಗೆ ಕಲಿಸಬೇಕಾದ 10 ಜೀವನ ಕೌಶಲ್ಯಗಳು!

First Published Apr 21, 2021, 7:02 PM IST

ಅನೇಕ ಪೋಷಕರು ತಮ್ಮ ಮಕ್ಕಳಿಗೆ ಸ್ವತಂತ್ರವಾಗಿರಲು ಕಲಿಯಲು ಬಿಡುವ ಬದಲು ಎಲ್ಲವನ್ನೂ ತಾವೇ ಮಾಡುತ್ತಾರೆ. ಮಗುವಿಗೆ ಮಾರ್ಗವನ್ನಲ್ಲ, ಹಾದಿಗಾಗಿ ಮಗುವನ್ನು ಸಿದ್ಧಗೊಳಿಸಿ. ಇದರಿಂದ ಮಾತ್ರ ಮಗು ಜೀವನದಲ್ಲಿ ಸ್ವತಂತ್ರ್ಯವಾಗಿ ಉತ್ತಮ ಮೌಲ್ಯಗಳನ್ನು ರೂಢಿಸಿ ಬದುಕಲು ಸಾಧ್ಯವಾಗುತ್ತದೆ. ಆರಂಭದಲ್ಲಿಯೇ ಈ 10 ಜೀವನ ಕೌಶಲ್ಯಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಅದನ್ನು ಸಾಧಿಸಬಹುದು.

ಅಡುಗೆಯಲ್ಲಿ ಸಹಾಯಊಟ ತಯಾರಿಸಲು ಸಹಾಯ ಮಾಡುವಂತೆ ಮಗುವಿಗೆ ತಿಳಿಸಿ. ಅವರು ಏನನ್ನಾದರೂ ಚೆಲ್ಲಿದರೆ ಅಥವಾ ಅವ್ಯವಸ್ಥೆಯನ್ನು ಸೃಷ್ಟಿಸಿದರೆ ಶಾಂತವಾಗಿರಿ. ಪ್ಲಾಸ್ಟಿಕ್ ಚಾಕುವಿನಿಂದ ಬಾಳೆಹಣ್ಣನ್ನು ಕತ್ತರಿಸಲು ಬಿಡುವ ಮೂಲಕಪ್ರಾರಂಭಿಸಿ.
undefined
ಇಂಟರ್ನೆಟ್ ಸರಿಯಾದ ಬಳಕೆಮಕ್ಕಳು ಹಿಂದೆಂದಿಗಿಂತಲೂ ಹೆಚ್ಚು ಸಮಯವನ್ನು ಸ್ಕ್ರೀನ್ ಮೇಲೆ ಕಳೆಯುತ್ತಿದ್ದಾರೆ. ಹೀಗಾಗಿ, ಡಿಜಿಟಲ್ ಜಗತ್ತನ್ನು ಸುರಕ್ಷಿತವಾಗಿ ನ್ಯಾವಿಗೇಟ್ ಮಾಡಲು ಸಹಾಯ ಮಾಡಲು ಕೆಲವು ನಿಯಮಗಳನ್ನು ಬಲಪಡಿಸುವುದು ಮುಖ್ಯ.
undefined
ಲಾಂಡ್ರಿ ಮಾಡುವುದುಅನೇಕ ಹದಿಹರೆಯದವರು ತಮ್ಮ ಬಟ್ಟೆಗಳನ್ನು ಹೇಗೆ ತೊಳೆಯಬೇಕು ಎಂಬುದರ ಬಗ್ಗೆ ಯಾವುದೇ ಸುಳಿವು ಇಲ್ಲದೆ ಕಾಲೇಜಿಗೆ ಹೋಗುತ್ತಾರೆ. ಮಗು ಅವುಗಳಲ್ಲಿ ಒಂದಾಗಲು ಬಿಡಬೇಡಿ. ಮಕ್ಕಳು 6 ವರ್ಷದರಾಗಿದ್ದಾಗ ಲಾಂಡ್ರಿ ಪಾಠಗಳನ್ನು ಪ್ರಾರಂಭಿಸಬಹುದು.
undefined
ಸಸಿ ನೆಡುವುದುಅನೇಕ ಮಕ್ಕಳು ಬೀಜವನ್ನು ಹೇಗೆ ನೆಡಬೇಕೆಂದು ಕಲಿಯುತ್ತಾರೆ ಆದರೆ ಅವರೆಲ್ಲರಿಗೂ ಮೊಳಕೆ ಕಾಳುಗಳನ್ನು ತೋಟಕ್ಕೆ ಹೇಗೆ ವರ್ಗಾಯಿಸುವುದು ಎಂದು ತಿಳಿದಿಲ್ಲ. ಅಂತಹ ಚಟುವಟಿಕೆಗಳು ಮಕ್ಕಳು ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತವೆ, ಹೀಗಾಗಿ ಅದನ್ನು ಕಲಿಯಲು ಅವರಿಗೆ ಸಹಾಯ ಮಾಡಿ .
undefined
ಪತ್ರ ಬರೆಯುವುದುಕೈಬರಹದ ಪತ್ರಗಳು ಈಗ ಗತಕಾಲದ ವಿಷಯ. ಆದರೆ ಪತ್ರ ಅಥವಾ ಅರ್ಜಿ ಬರೆಯುವುದು ಮಕ್ಕಳು ತಿಳಿದುಕೊಳ್ಳಬೇಕಾದ ಕೆಲವು ಮೂಲಭೂತ ವಿಷಯಗಳಾಗಿವೆ.
undefined
ಸಿಪಿಆರ್ ಬಗ್ಗೆ ಮಗುವಿಗೆ ತಿಳಿಸಿಕೊಡಿಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, 9 ವರ್ಷ ವಯಸ್ಸಿನ ಮಕ್ಕಳು ಸಿಪಿಆರ್ ಕಲಿಯಬಹುದು. ಅವರು ಟೆಡ್ಡಿ ಬೇರ್ ಗಳಲ್ಲಿ ಅಭ್ಯಾಸ ಮಾಡಬಹುದು.
undefined
ಗಾಯಕ್ಕೆ ಚಿಕಿತ್ಸೆಮಗು ರಕ್ತವನ್ನು ನೋಡಿದಾಗ ವಿಚಲಿತವಾಗದಂತೆ ನೋಡಿಕೊಳ್ಳಲು, ನೀವು ಅತಿಯಾಗಿ ಪ್ರತಿಕ್ರಿಯಿಸುವುದನ್ನು ತಪ್ಪಿಸಿ. ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕೆಂಬುದನ್ನು ಅವರು ಕಲಿಯುವಂತೆ ಮಾಡಿ.
undefined
ಗಿಫ್ಟ್ ಪ್ಯಾಕ್ಉಡುಗೊರೆಯನ್ನು ಹೇಗೆ ಪ್ಯಾಕ್ ಮಾಡುವುದು ಎಂಬುದನ್ನು ಕಲಿಯಲು ಮಗುವಿಗೆ ಸಹಾಯ ಮಾಡಿ. ಮಗು ಉಡುಗೊರೆಗಳನ್ನು ನೀಡಲು ಮತ್ತು ಅವುಗಳನ್ನು ಸುತ್ತಲು ಇಷ್ಟಪಡುತ್ತದೆ.
undefined
click me!