ಅರ್ಧ ಕಪ್ ಹೆಸರುಕಾಳನ್ನ (50-100 ಗ್ರಾಂ) ರಾತ್ರಿ ನೆನೆಸಿ. ಮರುದಿನ ನೀರು ತೆಗೆದು, ಕಾಳನ್ನ ರುಬ್ಬಿ. ಅಲೋವೆರಾ ಜೆಲ್, ಮೊಸರು, ಸ್ವಲ್ಪ ಅರಿಶಿನ ಹಾಕಿ ಮಿಕ್ಸ್ ಮಾಡಿ. ಮುಖ ತೊಳೆದು ಈ ಪೇಸ್ಟ್ ಹಚ್ಚಿ. 20 ನಿಮಿಷ ಬಿಟ್ಟು ತೊಳೆಯಿರಿ. ಒಣ ಚರ್ಮಕ್ಕೆ ತೇವಾಂಶ ಸಿಗುತ್ತೆ. ವಾರಕ್ಕೆ ಎರಡು ಬಾರಿ ಹಚ್ಚಿದ್ರೆ ಮುಖ ಅಂದವಾಗಿ ಕಾಣುತ್ತೆ.