Washing clothes tips: ಬಟ್ಟೆ ತೊಳೆಯುವ ಮೊದಲು ಎಷ್ಟು ಸಮಯ ನೆನೆಸಬೇಕು ಮತ್ತು ಯಾವಾಗ ತೊಳೆಯಬೇಕು ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯ. ಏಕೆಂದರೆ ಕೆಲವು ಬಟ್ಟೆಗಳು ತುಂಬಾ ಸಾಫ್ಟ್ ಆಗಿರುತ್ತವೆ ಅಥವಾ ಲಾಂಗ್ ಟೈಂ ನೆನೆಸಿದರೆ ಬಣ್ಣಗಳು ಮಸುಕಾಗಿ ಕಾಣುತ್ತವೆ.
ಬಟ್ಟೆ ತೊಳೆಯುವ ಮೊದಲು ಎಷ್ಟು ಹೊತ್ತು ನೆನೆಸಬೇಕು ಮತ್ತು ಯಾವಾಗ ತೊಳೆಯಬೇಕು ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯ. ಮನೆಯಲ್ಲಿ ವಾಷಿಂಗ್ ಮಷಿನ್ ಇರುವವರು ನೇರವಾಗಿ ತಮ್ಮ ಬಟ್ಟೆಗಳನ್ನು ಅದರಲ್ಲಿ ಹಾಕುತ್ತಾರೆ. ಆದರೆ ಕೈಯಿಂದ ಬಟ್ಟೆ ಒಗೆಯುತ್ತಿದ್ದರೆ ತೊಳೆಯುವ ಮೊದಲು ಎಷ್ಟು ಹೊತ್ತು ನೆನೆಸಬೇಕೆಂದು ತಿಳಿದುಕೊಳ್ಳಬೇಕಾಗುತ್ತದೆ.
26
ತಜ್ಞರು ಹೇಳುವುದೇನು?
ಇದು ಚಳಿಗಾಲ. ಗಾಳಿಯಲ್ಲಿ ತೇವಾಂಶ ಹೆಚ್ಚಾಗಿರುತ್ತದೆ. ಆದ್ದರಿಂದಲೇ ಬಟ್ಟೆಗಳು ಬೇಗನೆ ಒಣಗಲ್ಲ. ಇದೆಲ್ಲವೂ ಗೊತ್ತಿರುವುದೇ. ಆದರೆ ಬಟ್ಟೆ ತೊಳೆಯುವ ಮೊದಲು ಎಷ್ಟು ಸಮಯ ನೆನೆಸಬೇಕು ಮತ್ತು ಯಾವಾಗ ತೊಳೆಯಬೇಕು ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯ. ಏಕೆಂದರೆ ಕೆಲವು ಬಟ್ಟೆಗಳು ತುಂಬಾ ಸಾಫ್ಟ್ ಆಗಿರುತ್ತವೆ ಅಥವಾ ಲಾಂಗ್ ಟೈಂ ನೆನೆಸಿದರೆ ಬಣ್ಣಗಳು ಮಸುಕಾಗಿ ಕಾಣುತ್ತವೆ ಎಂದು ತಜ್ಞರು ಹೇಳುತ್ತಾರೆ.
36
ಡಿಟರ್ಜೆಂಟ್ ನೀರಿನಲ್ಲಿ ನೆನೆಸಿದಾಗ
ನಿಜ ಹೇಳಬೇಕೆಂದರೆ ಡಿಟರ್ಜೆಂಟ್ ನೀರಿನಲ್ಲಿ ಬಟ್ಟೆಗಳನ್ನು ದೀರ್ಘಕಾಲ ನೆನೆಸುವುದು ತಪ್ಪು. ಹೀಗೆ ನೆನೆಸಿಟ್ಟಾಗ ಇದು ಬಟ್ಟೆಗಳನ್ನು ಕ್ಲೀನ್ ಮಾಡಿದ್ರೂ ಡ್ಯಾಮೇಜ್ ಮಾಡುತ್ತದೆ. ಅಷ್ಟೇ ಅಲ್ಲ, ಬಟ್ಟೆಗಳನ್ನು ದೀರ್ಘಕಾಲ ನೆನೆಸುವುದರಿಂದ ಅವು ಸಡಿಲವಾಗಬಹುದು, ಕುಗ್ಗಬಹುದು, ಲಿಂಟ್ ಹೊರಬರಬಹುದು, ಬಣ್ಣಗಳು ಮಸುಕಾಗಬಹುದು.
ಕೆಲವರು ಬಟ್ಟೆಗಳನ್ನು ರಾತ್ರಿಯಿಡೀ ಅಥವಾ ಇಡೀ ದಿನ ನೆನೆಸಿಡುತ್ತಾರೆ. ಇದರಿಂದ ಬಟ್ಟೆ ಕೆಟ್ಟ ವಾಸನೆ ಬರಬಹುದು. ತೊಳೆದ ನಂತರವೂ ಈ ವಾಸನೆ ಹಾಗೇ ಇರುತ್ತದೆ. ಆದ್ದರಿಂದ ಬಟ್ಟೆಯ ಪ್ರಕಾರವನ್ನು ಅವಲಂಬಿಸಿ ನೀವು ಬಟ್ಟೆಗಳನ್ನು ನೆನೆಸಬೇಕು.
56
ಇದು ಸುರಕ್ಷಿತ ವಿಧಾನ
ಬಟ್ಟೆಗಳನ್ನ ತೊಳೆಯುವ ಅರ್ಧ ಗಂಟೆ ಮೊದಲು ನೀರು ಮತ್ತು ಡಿಟರ್ಜೆಂಟ್ ಲಿಕ್ವಿಡ್‌ನಲ್ಲಿ ನೆನೆಸುವುದು ಸುರಕ್ಷಿತ ವಿಧಾನ. ಆದರೆ ಇದು ಬಟ್ಟೆ ಮತ್ತು ಕೊಳೆಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ರೇಷ್ಮೆ, ಉಣ್ಣೆ ಬಟ್ಟೆಯನ್ನು ಅರ್ಧ ಗಂಟೆ ಮತ್ತು ಹತ್ತಿ ಮತ್ತು ಇತರ ಕಡಿಮೆ ಸೂಕ್ಷ್ಮ ಬಟ್ಟೆಗಳನ್ನು ಒಂದು ಗಂಟೆ ನೆನೆಸಬಹುದು.
66
ನೀರಿನಲ್ಲಿ ನೆನೆಸುವ ಮೊದಲು ...
ಬಟ್ಟೆಗಳನ್ನು ನೀರಿನಲ್ಲಿ ನೆನೆಸುವ ಮೊದಲು ಕೊಳೆಯಿದ್ದ ಜಾಗದಲ್ಲಿ ಬ್ರಷ್ ಮಾಡಿ ಹಾಕಿ. ಅಲ್ಲದೆ ತಿಳಿ ಬಣ್ಣದ ಬಟ್ಟೆಗಳನ್ನು ಎಂದಿಗೂ ಗಾಢ ಬಣ್ಣದ ಬಟ್ಟೆಗಳೊಂದಿಗೆ ನೆನೆಸಬೇಡಿ. ಒರಟಾದ ಬಟ್ಟೆಗಳೊಂದಿಗೆ ಸೂಕ್ಷ್ಮವಾದ ಬಟ್ಟೆಗಳನ್ನು ಎಂದಿಗೂ ನೆನೆಸಬೇಡಿ.