ಈ ಅಭ್ಯಾಸಗಳು ನಿಮಗೂ ಇದ್ರೆ ನೀವಾಗುವಿರಿ Super Mom

Published : Apr 17, 2023, 05:37 PM IST

ಕೆಲವೊಂದು ತಾಯಂದಿರು ಸಣ್ಣ ಪುಟ್ಟ ವಿಚಾರಕ್ಕೂ ಮಕ್ಕಳ ಮೇಲೆ ಕೋಪಗೊಳ್ಳುತ್ತಾರೆ. ಆದರೆ ಕೆಲವು ತಾಯಂದಿರು ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ. ಈ ಕೆಳಗೆ ನೀಡಿರುವ ಚಿಹ್ನೆಗಳು ನಿಮ್ಮಲ್ಲಿ ಕಾಣಿಸಿದರೆ, ನೀವು ಕೂಲೆಸ್ಟ್ ಅಮ್ಮ ಅನ್ನೋದು ಸತ್ಯ. 

PREV
18
ಈ ಅಭ್ಯಾಸಗಳು ನಿಮಗೂ ಇದ್ರೆ ನೀವಾಗುವಿರಿ Super Mom

ತಮ್ಮ ಮೇಲೆ ಫೋಕಸ್ ಆಗಿರೋದು (focus on her)
ಯಾವುದೇ ತಾಯಿ ತನ್ನನ್ನು ನೋಡಿಕೊಳ್ಳುವುದನ್ನು ನಿಲ್ಲಿಸಿದರೆ ಮತ್ತು ಮಕ್ಕಳು ಮತ್ತು ಮನೆಯ ಬಗ್ಗೆ ಚಿಂತಿಸುತ್ತಾ ತನ್ನ ಸಮಯವನ್ನು ಕಳೆದರೆ ಸಂತೋಷವಾಗಿರಲು ಸಾಧ್ಯವಿಲ್ಲ. ಅದರ ಬದಲಾಗಿ, ತಮ್ಮ ಮೇಲೆ ಹೆಚ್ಚಿನ ಫೋಕಸ್ ಮಾಡಿಕೊಂಡು ಬೇರೆಲ್ಲಾ ವಿಷ್ಯಗಳನ್ನು ಮ್ಯಾನೇಜ್ ಮಾಡುವ ತಾಯಿ ಕೂಲ್ ಆಗಿರುತ್ತಾರೆ.    

28

ಗಡಿಗಳನ್ನು ನಿಗದಿಪಡಿಸುತ್ತಾರೆ
ಶಾಂತ ತಾಯಿ ಮನೆಯ ಸುತ್ತಲೂ ನಿಯಮಗಳನ್ನು ರೂಪಿಸುತ್ತಾಳೆ ಮತ್ತು ಅವಳು ಸಹ ಅವುಗಳನ್ನು ಅನುಸರಿಸುತ್ತಾಳೆ. ತಾಯಿಯೂ ಅದೇ ರೂಲ್ಸ್ ಫಾಲೋ ಮಾಡೊದರಿಂದ ಮಕ್ಕಳು ಅದನ್ನು ವಿರೋಧಿಸಲು ಹೋಗದೇ ಅದನ್ನೇ ಫಾಲೋ ಮಾಡಿಕೊಂಡು ಬರುತ್ತಾರೆ. 

38

ಹೆಚ್ಚು ಒತ್ತಡ ನೀಡೋದಿಲ್ಲ (do not give stress to children)

ಪ್ರಪಂಚದಾದ್ಯಂತದ ಮಕ್ಕಳು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ ಆದರೆ ನಿಮ್ಮ ಮಗುವೂ ಮಾಡಬೇಕು ಸಹ ಮಾಡಬೇಕು ಎಂದು ಇದರ ಅರ್ಥವಲ್ಲ. ನಿಮ್ಮ ಮಗುವಿಗೆ ವಿಶ್ರಾಂತಿ ಪಡೆಯಲು ಸಮಯ ನೀಡಿ ಮತ್ತು ಅವರಿಗೆ ಕೆಲಸ ಮಾಡಲು ಸುಲಭವಾಗುವಂತದ್ದನ್ನು ನೀಡಿ.

48

ಮಗುವಿನ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಕಲಿಯುತ್ತಾರೆ 
ಮಗುವಿಗೆ ಸಮಯಕ್ಕೆ ಸರಿಯಾಗಿ ಸಂಜೆ ತಿಂಡಿ ಸಿಗದಿದ್ದರೆ ಅವರು ಕೋಪಗೊಳ್ಳುತ್ತಾರೆ. ನಿಮ್ಮ ಮಗುವಿಗೆ ಮಧ್ಯಾಹ್ನ ಒಂದು ಗಂಟೆ ವಿಶ್ರಾಂತಿ ಬೇಕು. ಇವುಗಳ ಬಗ್ಗೆ ನೀವು ಸರಿಯಾಗಿ ತಿಳಿದಿರಬೇಕು. ಇದರಿಂದ ಮಕ್ಕಳ ಕಡೆಗೆ ಗಮನ ಹರಿಸಲು ಸುಲಭವಾಗುತ್ತೆ. 

58

ಹವ್ಯಾಸಗಳನ್ನು ಅನುಸರಿಸೋದು (follow your passion)
ನೀವು ಪ್ರೀತಿಸುವ ಮತ್ತು ನಿಮ್ಮ ಹೃದಯ ಬಯಸುವ ಕೆಲಸವನ್ನು ನೀವು ಮಾಡದಿದ್ದರೆ, ದಯವಿಟ್ಟು ನಿಮ್ಮ ಜೀವನವನ್ನು ಬದಲಿಸಿ. ನೀವು ಯಾವ ಕೆಲಸವನ್ನು ಇಷ್ಟಪಡುತ್ತೀರಿ ಅದನ್ನು ಮಾಡಿ. ಇದರಿಂದ ಖಂಡಿತವಾಗಿಯೂ ನೀವು ಕೂಲೆಸ್ಟ್ ತಾಯಿ ಆಗುವಿರಿ. 

68

ತುಂಬಾ ಇಮೋಷನಲ್ ಆಗಿರೋದಿಲ್ಲ
ಮಗುವಿಗೆ ಶಾಲೆಯಲ್ಲಿ ಕೆಟ್ಟ ದಿನವಿದ್ದರೆ, ಮಗು ಇಂದು ಚೆನ್ನಾಗಿ ತಿನ್ನದೇ ಇದ್ದರೆ ಅದರ ಬಗ್ಗೆ ಯೋಚನೆ ಮಾಡಿಕೊಂಡು ಕೂರುವ ಬದಲು, ಅದನ್ನು ನಿಭಾಯಿಸುತ್ತಾರೆ. ಕಠಿಣ ಸಮಯವನ್ನು ನೀಡುವ ಸರಳ ಸಮಸ್ಯೆಗಳಿಂದ ದೂರವಿದ್ದು, ತರ್ಕಬದ್ಧವಾಗಿ ಯೋಚಿಸಲು ಸಾಧ್ಯವಾದರೆ ಅದೇ ಬೆಸ್ಟ್.

78

ಕೋಪದ ಪರಿಸ್ಥಿತಿಯಿಂದ ದೂರವಿರುತ್ತಾರೆ (control angry)
ಕೂಲ್ ತಾಯಂದಿರುವ ಪ್ರತಿಕ್ರಿಯಿಸುವ ಬದಲು  ಅದನ್ನು ಶಾಂತ ರೀತಿಯಲ್ಲಿ ಹ್ಯಾಂಡಲ್ ಮಾಡ್ತಾರೆ. ಮಕ್ಕಳು ತಪ್ಪು ಮಾಡಿದಾಗ, ಹಾಗೆ ಮಾಡೋದ್ರಿಂದ ಏನಾಗುತ್ತೆ ಅನ್ನೋದನ್ನು ಮಕ್ಕಳಿಗೆ ತಿಳಿಸಿ ಕೊಡುತ್ತಾರೆ. 

88

ಸಾಕಷ್ಟು ವಿಶ್ರಾಂತಿ (relaxing)
ಮಕ್ಕಳ ಕೆಲಸಗಳು ಎಂದಿಗೂ ಕೊನೆಗೊಳ್ಳುವುದಿಲ್ಲ ಆದರೆ ಅದಕ್ಕಾಗಿ ನಿಮ್ಮ ನಿದ್ರೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ. ಮಕ್ಕಳ ಕೆಲಸದಲ್ಲಿ ನೀವು ನಿಮ್ಮ ಊಟ ನಿದ್ರೆ ಮರೆತರೆ ಇದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳೊದು ಮುಖ್ಯ. 

Read more Photos on
click me!

Recommended Stories