ಹೆರಿಗೆ ನಂತರ ಮೂತ್ರ ತಡೆಯಲಾಗಲ್ವಾ? ಕಾರಣ ತಿಳಿದುಕೊಳ್ಳಿ

Published : Apr 13, 2023, 06:24 PM ISTUpdated : Apr 13, 2023, 06:30 PM IST

ಯೂರಿನರಿ ಇಂಕಾಂಟಿನೆನ್ಸ್  ಪ್ರಸವಾನಂತರದ ಸ್ಥಿತಿಯಾಗಿದ್ದು, ಅನೇಕ ಮಹಿಳೆಯರಲ್ಲಿ ಇದು ಹೆರಿಗೆಯ ಕೆಲವು ವಾರಗಳ ನಂತರ ತಾನಾಗಿಯೇ ಹೋಗುತ್ತೆ. ಆದರೆ, ಕೆಲವರು ದೀರ್ಘಕಾಲದವರೆಗೆ ತಲೆಕೆಡಿಸಿಕೊಳ್ಳುತ್ತಾರೆ. ಹಾಗಾದರೆ, ನೀವು ತಕ್ಷಣ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಬೇಕು.

PREV
110
ಹೆರಿಗೆ ನಂತರ ಮೂತ್ರ ತಡೆಯಲಾಗಲ್ವಾ? ಕಾರಣ ತಿಳಿದುಕೊಳ್ಳಿ

ಹೆರಿಗೆಯ ನಂತರ ಹೆಚ್ಚಿನ ಮಹಿಳೆಯರು ಯೂರಿನರಿ ಇಂಕಾಂಟಿನೆನ್ಸ್ ನಿಂದ(Urinary incontinence) ಬಳಲುತ್ತಿದ್ದಾರೆ ಎಂದು ನಿಮಗೆ ತಿಳಿದಿದ್ಯಾ? ಮಗುವಿನ ಜನನದ ಕೆಲವೇ ವಾರಗಳಲ್ಲಿ ಈ ಸಮಸ್ಯೆ ಪ್ರಾರಂಭವಾಗುತ್ತೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಯೂರಿನರಿ ಇಂಕಾಂಟಿನೆನ್ಸ್ ಪ್ರಸವಾ ನಂತರದ ಸ್ಥಿತಿಯಾಗಿದ್ದು, ಇದರಲ್ಲಿ ಮಹಿಳೆಯರು ಹೆರಿಗೆಯ ನಂತರ ಮೂತ್ರಕೋಶದ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಇದು ದಿನಕ್ಕೆ ಅನೇಕ ಬಾರಿ ಮೂತ್ರ ಸೋರಿಕೆಗೆ ಕಾರಣವಾಗುತ್ತೆ. 

210

ಯೂರಿನರಿ ಇಂಕಾಂಟಿನೆನ್ಸ್ ಎಂದರೇನು?
ಈ ಸಮಸ್ಯೆಯಲ್ಲಿ, ಮೂತ್ರದ(Urine) ಮೇಲೆ ಯಾವುದೇ ನಿಯಂತ್ರಣವಿರೋದಿಲ್ಲ ಮತ್ತು ಕೆಲವು ಹನಿ ಮೂತ್ರವು ಇದ್ದಕ್ಕಿದ್ದಂತೆ ಹೊರಬರುತ್ತೆ. ಯೂರಿನರಿ ಇಂಕಾಂಟಿನೆನ್ಸ್ ನಲ್ಲಿ ಎರಡು ವಿಧಗಳಿವೆ. ಮೊದಲನೆಯದಾಗಿ, ಇದು ನಗುವಾಗ, ಸೀನುವಾಗ, ಕೆಮ್ಮುವಾಗ ಅಥವಾ ನಡೆಯುವಾಗ ಪೆಲ್ವಿಕ್ ಪ್ರದೇಶದ ಮೇಲಿನ ಒತ್ತಡದಿಂದ ಮೂತ್ರ ಉಂಟಾಗುತ್ತೆ. ಇದನ್ನು ಸ್ಟ್ರೆಸ್ ಇಂಕಾಂಟಿನೆನ್ಸ್ ಎಂದು ಕರೆಯಲಾಗುತ್ತೆ . 

310

ಎರಡನೆಯದು ವೃದ್ಧಾಪ್ಯದಲ್ಲಿ, ಮೂತ್ರಕೋಶ ಮತ್ತು ಮೂತ್ರಪಿಂಡಗಳ(Kidney) ಸ್ನಾಯುಗಳು ಎಷ್ಟು ದುರ್ಬಲವಾಗುತ್ತವೆ ಎಂದರೆ ಅವು ಮೂತ್ರದ ಒತ್ತಡವನ್ನು ಸ್ವಲ್ಪ ಸಮಯದವರೆಗೆ ಸಹ ತಡೆದುಕೊಳ್ಳಲು ಸಾಧ್ಯವಾಗೋದಿಲ್ಲ ಮತ್ತು ಟಾಯ್ಲೆಟ್ ತಲುಪುವ ಮೊದಲು ಮೂತ್ರ ಬಿಡುಗಡೆಯಾಗುತ್ತೆ. ಇದನ್ನು ಆರ್ಜ್ ಇಂಕಾಂಟಿನೆನ್ಸ್ ಎಂದು ಕರೆಯಲಾಗುತ್ತೆ. ಕೆಲವು ಮಹಿಳೆಯರಲ್ಲಿ ಇದು ಕಂಡು ಬರುತ್ತೆ.

410

ಯೂರಿನರಿ ಇಂಕಾಂಟಿನೆನ್ಸ್ ಏಕೆ ಸಂಭವಿಸುತ್ತೆ ?
ತಜ್ಞರು ಹೇಳುವ ಪ್ರಕಾರ ಗರ್ಭಾವಸ್ಥೆಯಲ್ಲಿ(Pregnancy), ಪ್ರೊಜೆಸ್ಟರಾನ್ ಎಂಬ ಹಾರ್ಮೋನ್ ಹೆಚ್ಚಾಗಲು ಪ್ರಾರಂಭಿಸುತ್ತೆ. ಇದು ಗರ್ಭಾಶಯ ಮತ್ತು ಮೂತ್ರಕೋಶದ ಸ್ನಾಯುಗಳನ್ನು ಸಡಿಲಗೊಳಿಸುತ್ತೆ. ಇದು ಅಗತ್ಯ ಸ್ನಾಯುಗಳಲ್ಲಿ ಉದ್ವೇಗವನ್ನು ಉಂಟುಮಾಡುತ್ತೆ. ಆದರೆ ನಾರ್ಮಲ್ ಹೆರಿಗೆಯ ಸಮಯದಲ್ಲಿ, ಮಗು ಯೋನಿ ಕಾಲುವೆಯ ಮೂಲಕ ನಿರ್ಗಮಿಸಿದಾಗ, ಪೆಲ್ವಿಕ್‌ನ ಎಲ್ಲಾ ಸ್ನಾಯುಗಳು ಹಿಗ್ಗುತ್ತವೆ ಮತ್ತು ಆಗ ಮಾತ್ರ ಯೋನಿಯನ್ನು ಸಹ ಹಿಗ್ಗಿಸಲಾಗುತ್ತೆ. ಹಾರ್ಮೋನುಗಳು ಮತ್ತು ಹಿಗ್ಗುವಿಕೆಗಳೆರಡರ ಪರಿಣಾಮ ಯೂರಿನರಿ ಇಂಕಾಂಟಿನೆನ್ಸ್ ಗೆ ಕಾರಣವಾಗುತ್ತೆ. ಹೆರಿಗೆಯ ನಂತರ ಕೆಲವು ದಿನಗಳು ಅಥವಾ ಕೆಲವು ವಾರಗಳ ನಂತರ ಈ ಸಮಸ್ಯೆ ಉಂಟಾಗುತ್ತೆ.

510

ಯೂರಿನರಿ ಇಂಕಾಂಟಿನೆನ್ಸ್ಗೆ ಚಿಕಿತ್ಸೆ(Treatment)
ಹೆರಿಗೆ ನಂತರ, ಮಹಿಳೆ ಪೆಲ್ವಿಕ್ ಫ್ಲೋರ್ ಅಥವಾ ಕೆಗೆಲ್ ವ್ಯಾಯಾಮವನ್ನು ಮಾಡಬೇಕು. ಹೆರಿಗೆಯ ನಂತರ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋ ಮೊದಲು ಮಹಿಳೆಯರಿಗೆ ಫಿಸಿಯೋಥೆರಪಿಸ್ಟ್ನಿಂದ ಈ ವ್ಯಾಯಾಮದಲ್ಲಿ ತರಬೇತಿ ನೀಡಲಾಗುತ್ತೆ. ಈ ವ್ಯಾಯಾಮಗಳನ್ನು ಪ್ರತಿದಿನ ಮಾಡಬೇಕು. ಅವು ಪೆರಿನಿಯಂನ ಸ್ನಾಯುಗಳನ್ನು ಬಲಪಡಿಸುತ್ತವೆ ಮತ್ತು ಕಾಲಾನಂತರದಲ್ಲಿ ಯೂರಿನರಿ ಇಂಕಾಂಟಿನೆನ್ಸ್ ಸಮಸ್ಯೆಯನ್ನು ನಿವಾರಿಸಲು ಇವು ಸಹಾಯ ಮಾಡುತ್ತವೆ.

610

ಸರಳ ಜೀವನಶೈಲಿ ಬದಲಾವಣೆಗಳು ಯೂರಿನರಿ ಇಂಕಾಂಟಿನೆನ್ಸ್‌ಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತೆ. ಹೆರಿಗೆ ನಂತರ ತೂಕ ಕಳೆದುಕೊಳ್ಳುವುದು, ಹೆಚ್ಚು ಫೈಬರ್ ಭರಿತ ಆಹಾರ  ಸೇವಿಸೋದು, ಹೆಚ್ಚು ನೀರು(Water) ಕುಡಿಯೋದು ಮತ್ತು ಹೆಚ್ಚಿನ ತೂಕ ಎತ್ತುವುದನ್ನು ತಪ್ಪಿಸೋದು ಇತ್ಯಾದಿಗಳು ಇದರಲ್ಲಿ ಸೇರಿವೆ.

710

ಗರ್ಭಾವಸ್ಥೆಯಲ್ಲಿ, ಮಗು ಬೆಳೆಯುತ್ತಿದಂತೆ ಮೂತ್ರಕೋಶದ ಮೇಲೆ ಒತ್ತಡ(Stress) ಹೇರುತ್ತೆ, ಅದಕ್ಕಾಗಿಯೇ  ಮತ್ತೆ ಮತ್ತೆ ಮೂತ್ರ ವಿಸರ್ಜಿಸಬೇಕು ಎಂದನಿಸುತ್ತೆ. ಆದರೆ, ಮಗುವಿನ ಜನನದ ನಂತರ, ಮೂತ್ರವಿಸರ್ಜನೆಯನ್ನು ತಡೆಯಲು ಮೂತ್ರಕೋಶಕ್ಕೆ ತರಬೇತಿ ನೀಡಬೇಕು. 

810

ಹೊಸ ತಾಯಿಗೆ(New mother) ಈ ಯಾವುದೇ ಚಿಕಿತ್ಸೆಗಳು ಕೆಲಸ ಮಾಡದಿದ್ದರೆ, ಯೂರಿನರಿ ಇಂಕಾಂಟಿನೆನ್ಸ್‌ಗೆ ಚಿಕಿತ್ಸೆ ನೀಡಲು ಔಷಧಿಗಳನ್ನು ತೆಗೆದುಕೊಳ್ಳಬೇಕು. ವಿಶೇಷವಾಗಿ ಸ್ಟ್ರೆಸ್ ಇಂಕಾಂಟಿನೆನ್ಸ್ಗೆ ಔಷಧಿಗಳು ಬೇಕಾಗುತ್ತವೆ.

910

ಗರ್ಭಾವಸ್ಥೆಯಲ್ಲಿ ಫಿಸಿಯೋಥೆರಪಿ(Physiotherapy) ತೆಗೆದುಕೊಳ್ಳುವುದು ಮಹಿಳೆಯರಿಗೆ ಪೆಲ್ವಿಕ್ ಫ್ಲೋರ್ನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತೆ, ಇದು ಹೆರಿಗೆಯ ನಂತರ ಯೂರಿನರಿ ಇಂಕಾಂಟಿನೆನ್ಸ್ ತಡೆಯಲು ಸಹಾಯ ಮಾಡುತ್ತೆ.ಆದರೆ, ಗರ್ಭಾವಸ್ಥೆಯಲ್ಲಿ, ಮಹಿಳೆಯರು ಭಾರವಾದ ತೂಕವನ್ನು ಎತ್ತುವುದನ್ನು ಮತ್ತು ವೇಗದ ವ್ಯಾಯಾಮಗಳನ್ನು ಮಾಡೋದನ್ನು ತಪ್ಪಿಸಬೇಕು. 

1010

ಹೀಗೆ ಮಾಡೋದ್ರಿಂದ ಯೂರಿನರಿ ಇಂಕಾಂಟಿನೆನ್ಸ್  ಸಮಸ್ಯೆಯನ್ನು ಕೆಲವೇ ವಾರಗಳಲ್ಲಿ ಗುಣಪಡಿಸಲಾಗುತ್ತೆ. ಹೆರಿಗೆಯ ಎರಡು-ಮೂರು ತಿಂಗಳ ನಂತರವೂ ಇದು ಸಂಭವಿಸದಿದ್ದರೆ ಮತ್ತು ಸಮಸ್ಯೆ ಹೋಗದಿದ್ದರೆ, ತಕ್ಷಣ ವೈದ್ಯರನ್ನು(Doctor) ಸಂಪರ್ಕಿಸಿ.

Read more Photos on
click me!

Recommended Stories