ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ 2023ನ್ನು ರಾಜಸ್ಥಾನದ ನಂದಿನಿ ಗುಪ್ತಾ ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಅಪ್ ಮತ್ತು ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷ ಮಿಸ್ ಇಂಡಿಯಾ ಕಿರೀಟವನ್ನು ಸಿನಿಶೆಟ್ಟಿ ಧರಿಸಿದ್ದರು.
ಭಾರತದ ಪ್ರತಿಷ್ಠಿತ ಸ್ಪರ್ಧೆಯ 59ನೇ ಆವೃತ್ತಿಯು ಮಣಿಪುರದ ಇಂಫಾಲ್‌ನ ಖುಮಾನ್ ಲಂಪಾಕ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಐತಿಹಾಸಿಕ ಸಮಾರಂಭದಲ್ಲಿ ಗ್ರಾಂಡ್ ಫಿನಾಲೆಯನ್ನು ಯಶಸ್ವಿಯಾಗಿ ಆಯೋಜಿಸಿತ್ತು. 30 ರಾಜ್ಯ ವಿಜೇತರಲ್ಲಿ, ಈ ಮಹಿಳೆಯರನ್ನು ಮೊದಲ ಮೂರು ಸ್ಥಾನಗಳಲ್ಲಿ ಆಯ್ಕೆ ಮಾಡಲಾಗಿದೆ.
ನಂದಿನಿ ಗುಪ್ತಾ ರಾಜಸ್ಥಾನದ ಕೋಟಾ ಮೂಲದವರು. ಈ ಕಾರ್ಯಕ್ರಮದಲ್ಲಿ ಹಲವು ಸಿನಿ ಗಣ್ಯರು ಭಾಗವಹಿಸಿದ್ದರು. ಇತ್ತೀಚೆಗೆ ನಡೆದ 59ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ 29 ರಾಜ್ಯಗಳ ಸುಂದರಿಯರು ಸ್ಪರ್ಧಿಸಿದ್ದರು
ಈ ವರ್ಷ ತೆಲುಗು ರಾಜ್ಯಗಳ ಗೋಮತಿ (ಎಪಿ) ಮತ್ತು ಊರ್ಮಿಳಾ ಚೌಹಾಣ್ (ತೆಲಂಗಾಣ) ಸಹ ನಂದಿನಿಗೆ ಕಠಿಣ ಸ್ಪರ್ಧೆ ನೀಡಿದರು. 19ರ ವರ್ಷದ ನಂದಿನಿ ಗುಪ್ತಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸಂಚಲನ ಮೂಡಿಸಿದರು. ಸೌಂದರ್ಯವಷ್ಟೇ ಅಲ್ಲ ಬುದ್ದಿವಂತಿಕೆಯಿಂದಲೂ ಜಡ್ಜ್‌ಗಳ ಮೆಚ್ಚುಗೆಗೆ ಪಾತ್ರರಾದರು.
ಮಾಜಿ ಫೆಮಿನಾ ಮಿಸ್ ಇಂಡಿಯಾ 2022 ವಿಜೇತ ಕರ್ನಾಟಕದ ಸಿನಿ ಶೆಟ್ಟಿ ಅವರು ಈಗ ಮಿಸ್ ವರ್ಲ್ಡ್ 2024 ನಲ್ಲಿ ಭಾರತವನ್ನು ಪ್ರತಿನಿಧಿಸುವ ನಂದಿನಿ(19 ವರ್ಷ) ಅವರಿಗೆ ಕಿರೀಟವನ್ನು ತೊಡಿಸಿದರು., ಮಾಜಿ 1 ಮತ್ತು 2 ನೇ ರನ್ನರ್ ಅಪ್ ರಾಜಸ್ಥಾನದ ರೂಬಲ್ ಶೇಖಾವತ್ ಮತ್ತು ಉತ್ತರ ಪ್ರದೇಶದ ಶಿನಾತಾ ಚೌಹಾನ್ ಕ್ರಮವಾಗಿ ಶ್ರೇಯಾ ಮತ್ತು ತೌನೋಜಮ್ ಕಿರೀಟವನ್ನು ಪಡೆದರು.
ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಮತ್ತು ನಟಿ ಅನನ್ಯಾ ಪಾಂಡೆ ಈ ಇವೆಂಟ್‌ನ ಸೆಂಟರ್ ಅಕ್ರ್ಯಾಕ್ಷನ್ ಆಗಿದ್ದರು. ಮಾಜಿ ವಿಜೇತೆ ಸಿನೆ ಶೆಟ್ಟಿ, ರುಬಲ್ ಶೇಖಾವತ್, ಶಿನಾಥ ಚೌಹಾಣ್, ಮಾನಸ ವಾರಣಾಸಿ, ಮಣಿಕಾ ಶಿಯೋಕಂದ್, ಮಾನ್ಯ ಸಿಂಗ್, ಸುಮನ್ ರಾವ್ ಮತ್ತು ಶಿವಾನಿ ಜಾಧವ್ ಅವರು ಸಹ ಭಾಗವಹಿಸಿದ್ದರು.
ಸೆಲೆಬ್ರಿಟಿಗಳು ಲೆಹೆಂಗಾಗಳನ್ನು ಧರಿಸಿ ಅದ್ಭುತ ಪ್ರದರ್ಶನ ನೀಡಿದರು. ಮನೀಶ್ ಪಾಲ್ ಮತ್ತು ಭೂಮಿ ಪೆಡ್ನೇಕರ್ ಸೇರಿದಂತೆ ಇತರ ತಂಡವು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು.