ಗೂಗಲ್ ಮ್ಯಾಪಲ್ಲಿ ರಸ್ತೆ ಹೇಳ್ತಾಳಲ್ಲ, ಆ ಮಹಿಳೆ ವಾಯ್ಸ್‌ ಯಾರದ್ದು ಹೇಳಿ ನೋಡೋಣ?

First Published | Nov 29, 2023, 4:59 PM IST

ಗೂಗಲ್ ಮ್ಯಾಪ್ ನಲ್ಲಿ ನಮಗೆ ದಾರಿ ಹೇಳಲು ಮಾರ್ಗದರ್ಶನ ನೀಡುವ ಹುಡುಗಿಯ ಧ್ವನಿಯನ್ನು ಹೆಚ್ಚಿನ ಜನ ಇಷ್ಟಪಟ್ಟಿದ್ದಾರೆ. ಯಾರಪ್ಪಾ ಇದು ಎಂದು ಸಹ ಪ್ರಶ್ನೆ ಮಾಡಿದ್ದಾರೆ. ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಇವರೇ ನೋಡಿ ಸಿರಿ ಅಥವಾ ಗೂಗಲ್ ಮ್ಯಾಪ್ ನಲ್ಲಿ ಬರುವ ಧ್ವನಿಯ ಒಡತಿ. 
 

ಇತ್ತೀಚಿನ ದಿನಗಳಲ್ಲಂತೂ ಜನರು ಗೊತ್ತಿಲ್ಲದ ಪ್ರದೇಶಗಳಿಗೂ ಒಬ್ಬರೇ ಸವಾರಿ ಹೋಗುತ್ತಾರೆ, ಗೂಗಲ್ ಮ್ಯಾಪ್ ತಮ್ಮ ಜೊತೆಗಿರುವ ಧೈರ್ಯದಿಂದ. ಈ ಗೂಗಲ್ ಮ್ಯಾಪ್ ನಲ್ಲಿ ಪ್ರತಿಬಾರಿ ಒಬ್ಬ ಮಹಿಳೆಯ ಧ್ವನಿ (Voice of women) ಕೇಳಿ ಬರುತ್ತೆ ಅಲ್ವ? ಬಲಕ್ಕೆ ಹೋಗಿ, ಎಡಕ್ಕೆ ತಿರುಗಿ ಹೀಗೆಲ್ಲಾ ಮಾರ್ಗದರ್ಶನ ನೀಡುವ ಆ ಮಹಿಳೆ ಯಾರು ಗೊತ್ತಾ? 
 

ಭವಿಷ್ಯದ ಒಲಿವಿಯಾ ನ್ಯೂಟನ್-ಜಾನ್ ಅಂದರೆ ಜನಪ್ರಿಯ ಗಾಯಕಿ ಆಗಲು ಬಯಸಿದ ಆಸ್ಟ್ರೇಲಿಯಾದ ಮಹಿಳೆ ಹೇಗೆ ಸಿರಿಯ ಧ್ವನಿಯಾದರು ಮತ್ತು 400 ದಶಲಕ್ಷಕ್ಕೂ ಹೆಚ್ಚು ಜಿಪಿಎಸ್ (GPS) ಮತ್ತು ಸ್ಮಾರ್ಟ್-ಡಿವೈಸ್ ಗಳಲ್ಲಿ ನಿರ್ದೇಶನ ನೀಡುವ ಮೆಚ್ಚಿನ ಧ್ವನಿಯಾದರು ಗೊತ್ತಾ? 
 

Tap to resize

'ಜಿಪಿಎಸ್ ಗರ್ಲ್' (GPS Girl) ಎಂದೂ ಕರೆಯಲ್ಪಡುವ ಕರೆನ್ ಜಾಕೋಬ್ಸನ್ ಬಗ್ಗೆ ನೀವು ತಿಳಿಯಲೇಬೇಕು? ಕರೆನ್ ಜಾಕೋಬ್ಸನ್ ಬಗ್ಗೆ ನಾವೇಕೆ ತಿಳಿಯಬೇಕು ಎಂದು ನೀವು ಅಂಡುಕೊಂಡಿರಬಹುದು. ಆದರೆ ಈಕೆ ನಮಗೆ ತುಂಬಾನೆ ಹತ್ತಿರದವಳು, ಅಂದರೆ, ಜಿಪಿಎಸ್ ಅಂದರೆ ಗೂಗಲ್ ಮ್ಯಾಪ್ ನಲ್ಲಿ ನಮಗೆ ದಾರಿ ತೋರುವ ಧ್ವನಿ ಇದೆಯಲ್ಲ, ಅದನ್ನು ಹೇಳುವವರು ಇದೇ ಕರೆನ್ ಜಾಕೋಬ್ಸನ್. 
 

ತನ್ನ ಧ್ವನಿ ಡಿವೈಸ್ ನಲ್ಲಿ ಬರುವುದೆಂದು ಕರೆನ್ ಗೆ ಗೊತ್ತಿರಲಿಲ್ಲವಂತೆ. ಇದು ಸಂಪೂರ್ಣವಾಗಿ ಸೀಕ್ರೆಟ್ ಆಗಿ ನಡೆಯಿತು. ಕರೆನ್ (Karen Jacobson) ಆಯ್ಕೆ ಮಾಡಿದ ಕೆಲಸ ಹೇಗಿತ್ತೆಂದರೆ, ದಿನಪೂರ್ತಿ ಸ್ಟುಡಿಯೋದಲ್ಲಿ ಕುಳಿತು ಟನ್ ಗಟ್ಟಲೆ ನುಡಿಗಟ್ಟುಗಳನ್ನು ಓದುವ ಕೆಲಸ ಮಾಡುತ್ತಿದ್ದರಂತೆ., ಆದರೆ ಏಕೆ ಇದನ್ನು ಮಾಡಲಾಗುತ್ತೆ ಎಂದು ಅವರಿಗೆ ತಿಳಿದಿರಲಿಲ್ಲವಂತೆ. ವರ್ಷಗಳ ನಂತರ ಒಬ್ಬ ಸ್ನೇಹಿತೆ ಕರೆ ಮಾಡಿ 'ನೀವು ನಮ್ಮ ಜಿಪಿಎಸ್ ನಲ್ಲಿ ಇದ್ದೀರಿ' ಎಂದು ಹೇಳಿದಾಗಲೇ ಇವರಿಗೆ ತನ್ನ ಕೆಲಸ ಏನೆಂದು ತಿಳಿಯಿತು. 
 

ಕರೆನ್ ಜಾಕೋಬ್ಸನ್ ಅದ್ಭುತ ಕಂಠ ಹೊಂದಿದ ಮಹಿಳೆ. ಹೃದಯದಲ್ಲಿ, ಕರೆನ್ ಗೀತರಚನೆಗಾರ್ತಿ ಮತ್ತು ಗಾಯಕಿ. ಯುನೈಟೆಡ್ ಸ್ಟೇಟ್ಸ್ನಲ್ಲಿ ಮುಂದಿನ ಒಲಿವಿಯಾ ನ್ಯೂಟನ್-ಜಾನ್ ಆಗುವ ಮೂಲಕ ಪಾಪ್ ಸಂಗೀತ ಲೋಕವನ್ನೇ ಆಳಬೇಕು ಎನ್ನುವುದು ಅವರ ಕನಸಾಗಿತ್ತು. ಆದರೆ ಆದದ್ದು ಮಾತ್ರ ಬೇರೆ. 

ಕರೆನ್ ಅವರ ಧ್ವನಿ ಕೇವಲ ಸಿರಿ ಮತ್ತು ಜಿಪಿಎಸ್ ಸಾಧನಗಳ (GPS Device) ಧ್ವನಿಯಾಗಿ ಮಾತ್ರವಲ್ಲದೆ, ಟಿವಿಯಲ್ಲಿ ಬೃಹತ್ ಕ್ರೀಡಾಂಗಣಗಳ ಮುಂದೆ ರಾಷ್ಟ್ರಗೀತೆಯನ್ನು ಹಾಡುವುದು, ಹಿಟ್ ಶೋಗಳಲ್ಲಿ ಹಾಡುಗಳನ್ನು ಹೇಳುವುದು ಮತ್ತು ವಿಶೇಷ ಮುಖ್ಯ ಭಾಷಣಕಾರರಾಗಿ ವೃತ್ತಿಜೀವನವನ್ನು (Career) ಒಳಗೊಂಡಂತೆ ಸಂಗೀತದಲ್ಲಿ ಸಹ ಕರಿಯರ್ (career) ರೂಪಿಸಲು ಕಾರಣವಾಯಿತು. 
 

ಆದರೆ ಸಿರಿಯಾಗಿ ವಾಯ್ಸ್ ನೀಡುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಇದು ನಿಜಕ್ಕೂ ಕಠಿಣ ಮಾರ್ಗವಾಗಿತ್ತು, ಇದರ ಬಗ್ಗೆ ಮತ್ತೆ ಮತ್ತೆ ಯೋಚಿಸಲು ಅವರಿಗೆ ಭಯವಾಗಿತ್ತಂತೆ. ಒಂದು ಸಲ ಎಲ್ಲಾ ಬಿಟ್ಟು ಮನೆಗೆ ಹೋಗಿ ಬಿಡಲೇ ಎಂದು ಸಹ ನಿರ್ಧಾರ ಮಾಡಿದ್ದರಂತೆ. 
 

ಇಂದು, ಕರೆನ್ ತನ್ನ ವೃತ್ತಿ ಜೀವನದಲ್ಲಿ ಅದ್ಭುತ ಜರ್ನಿ ಮಾಡಿದ್ದಾರೆ. ವಾಯ್ಸ್-ಓವರ್ ಗಿಗ್ ತೆಗೆದುಕೊಳ್ಳುವುದು ತನ್ನ ಜೀವನವನ್ನು ಹೇಗೆ ಸಂಪೂರ್ಣವಾಗಿ ಬದಲಾಯಿಸಿತು ಮತ್ತು ಅದು ಅಂತಿಮವಾಗಿ ತನ್ನ ಜೀವನ ಮತ್ತು ವೃತ್ತಿಜೀವನದ ಮೇಲೆ ನಿರೀಕ್ಷಿಸಿದ್ದಕ್ಕಿಂತ ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಹೇಗೆ ಪ್ರತಿಫಲಿಸಿತು ಎಂಬುದನ್ನು ಅವರು ಖುಷಿಯಿಂದಲೇ ಹೇಳುತ್ತಾರೆ.
 

Latest Videos

click me!