ಮದುವೆ ಸೀಸನ್‌ಗೆ ಹೇಳಿ ಮಾಡಿಸಿದ ಲೇಟೆಸ್ಟ್ ಮೆಹಂದಿ ಡಿಸೈನ್‌ಗಳು!

Published : Feb 26, 2025, 07:10 PM ISTUpdated : Feb 26, 2025, 07:15 PM IST

ಮದುವೆ, ನಿಶ್ಚಿತಾರ್ಥ, ಸೀಮಂತ ಅಂತ ಸಾಲು ಸಾಲಾಗಿ ಬರುವ ಶುಭ ಕಾರ್ಯಗಳು ಅಂದ್ರೆ ಸಾಕು ಹೆಣ್ಣುಮಕ್ಕಳು ಕೈ ತುಂಬಾ ಮೆಹಂದಿ ಹಾಕಿಸ್ಕೊಳ್ಳೋಕೆ ಇಷ್ಟಪಡ್ತಾರೆ.. ಹೀಗಾಗಿ ಇಲ್ಲಿ ಇತ್ತೀಚಿನ ಡಿಸೈನ್‌ನ ಕೆಲವು ಮೆಹಂದಿ ಡಿಸೈನ್ ಮಾಡೆಲ್ಸ್ ನೋಡೋಣ ಬನ್ನಿ..

PREV
16
ಮದುವೆ ಸೀಸನ್‌ಗೆ ಹೇಳಿ ಮಾಡಿಸಿದ ಲೇಟೆಸ್ಟ್ ಮೆಹಂದಿ ಡಿಸೈನ್‌ಗಳು!

ಬೇಸಿಗೆ ಬಂತು ಅಂದ್ರೆ ಮದುವೆ ಸೀಸನ್ ಶುರು. ಮದುವೆ ಅಂದ್ರೆ ಎಷ್ಟೊಂದು ಸಂಭ್ರಮ ಇರುತ್ತೆ ಅಂತ ಬೇರೆ ಹೇಳಬೇಕಾಗಿಲ್ಲ. ಅದರಲ್ಲೂ ಹೆಣ್ಣುಮಕ್ಕಳು ಕೈ ತುಂಬಾ ಮೆಹಂದಿ ಹಾಕಿಸ್ಕೊಳ್ಳೋಕೆ ತುಂಬಾ ಇಷ್ಟಪಡ್ತಾರೆ. ನೀವು ಕೂಡ ಈ ವೆಡ್ಡಿಂಗ್ ಸೀಸನ್‌ನಲ್ಲಿ ಕೈ ತುಂಬಾ ಮೆಹಂದಿ ಹಾಕಿಸ್ಕೋಬೇಕು ಅಂದ್ರೆ ಈ ಡಿಸೈನ್ಸ್‌ಗಳ ಮೇಲೆ ಒಂದು ರೌಂಡ್ ಹಾಕಿ..

26
ಫುಲ್ ಹ್ಯಾಂಡ್ ಮೆಹಂದಿ ಡಿಸೈನ್

ನಿಮಗೆ ಈ ರೀತಿ ಮೆಹಂದಿ ಅಂದ್ರೆ ಇಷ್ಟ ಆದ್ರೆ, ಈ ಡಿಸೈನ್ ಟ್ರೈ ಮಾಡಬಹುದು. ಕೈ ತುಂಬಾ ಇರೋ ಈ ಡಿಸೈನ್ ಹಾಕೋದು ತುಂಬಾನೇ ಸುಲಭ. ಒಂದ್ಸಲ ನೋಡಿ ಟ್ರೈ ಮಾಡಿ.ಒಣಗಿದ ಮೇಲೆ ಕೈಗಳು ಇನ್ನಷ್ಟು ಚೆನ್ನಾಗಿ ಕಾಣ್ತಾವೆ.

36
ಚಕ್ರ ಮೆಹಂದಿ ಡಿಸೈನ್

ಸಿಂಪಲ್ ಆಗಿ, ಸ್ಟೈಲಿಶ್ ಆಗಿ ಇರಬೇಕು ಅಂದ್ರೆ ಈ ಡಿಸೈನ್ ಚೆನ್ನಾಗಿರುತ್ತೆ. ಚಕ್ರದ ತರ ಇರೋ ಈ ಡಿಸೈನ್‌ನಲ್ಲಿ ಚಿಕ್ಕ ಚಿಕ್ಕ ಡೀಟೈಲಿಂಗ್ಸ್ ಇವೆ. ಚುಕ್ಕೆಗಳಿಂದ ಲೈನ್ಸ್ ಹಾಕಿ ಇದನ್ನ ಪೂರ್ತಿ ಮಾಡಿದ್ದಾರೆ.

46
ಹಾಫ್ ಹ್ಯಾಂಡ್ ಮೆಹಂದಿ ಡಿಸೈನ್

ಇಲ್ಲಿ ಎರಡು ಡಿಸೈನ್‌ಗಳಿವೆ. ಮೊದಲು ಕೈಗೆ ಹೂವಿನ ಡಿಸೈನ್ ಹಾಕಿ, ಬೆರಳುಗಳಿಗೆ ತುಂಬುವಂತೆ ಡಿಸೈನ್ ಹಾಕಬಹುದು. ಕೈ ಹಿಂಬದಿಗೆ ಹೂವುಗಳನ್ನು ಸೇರಿಸುತ್ತಾ ಬೆರಳುಗಳವರೆಗೆ ಗೆರೆಗಳನ್ನು ಎಳೆಯಬಹುದು.

56
ಹೂವುಗಳು, ಎಲೆಗಳ ಡಿಸೈನ್

ಹೂವುಗಳು, ಎಲೆಗಳು ಸೇರಿಸಿ ಮಾಡಿದ ಈ ಡಿಸೈನ್ ಕೈ ಮೇಲೆ ಹಾಗೂ ಅಂಗೈಗೆ ಚೆನ್ನಾಗಿರುತ್ತೆ. ನಿಮಗೆ ಮೆಹಂದಿ ಹಾಕೋಕೆ ಬಂದ್ರೆ ಮನೆಯಲ್ಲೇ ಹಾಕಬಹುದು. ಇಲ್ಲಾಂದ್ರೆ ಪ್ರೊಫೆಷನಲ್ ಹೆಲ್ಪ್ ತಗೋಬಹುದು.

66
ಸಿಂಪಲ್ ಮೆಹಂದಿ ಡಿಸೈನ್

ಇಲ್ಲಿ ಎರಡು ಡಿಸೈನ್‌ಗಳಿವೆ. ಒಂದು ಕ್ರಿಯೇಟಿವ್ ಆಗಿ ಮೋಟಿಫ್ಸ್ ಡಿಸೈನ್, ಇನ್ನೊಂದು ಸಿಂಪಲ್ ಡಿಸೈನ್. ಚತುರಸ್ರಾಕಾರದ ಬ್ಲಾಕ್ಸ್‌ಗಳಲ್ಲಿ ಬೇರೆ ಬೇರೆ ಡೀಟೈಲಿಂಗ್ಸ್ ಇವೆ. ಈ ಎರಡು ಡಿಸೈನ್‌ಗಳು ಚೆನ್ನಾಗಿರ್ತಾವೆ.

Read more Photos on
click me!

Recommended Stories