ಇತ್ತೀಚಿಗೆ ಮಾಡರ್ನ್ ಡ್ರೆಸ್‌ಗಳಿಗಿಂತಲೂ ಸೀರೆಯತ್ತ ನೀರೆಯರ ಒಲವು ಹೆಚ್ಚಾಗಿದೆ. ಆದ್ರೆ ಸೀರೆ ಉಡೋಕೆ ಮಾತ್ರ ಎಲ್ಲರಿಗೂ ಬರಲ್ಲ. ನೀಟಾಗಿ ಸೀರೆಯುಟ್ಟರೆ ಮಾತ್ರ ನೋಡಲು ಸೂಪರ್ ಆಗಿ ಕಾಣುತ್ತದೆ. ಕೆಲವೊಬ್ಬರು ಸೀರೆಯುಟ್ಟ ರೀತಿ ಸುಮ್ನೆ ಸುತ್ತಿಕೊಂಡ ಹಾಗೇ ಇರುತ್ತೆ. ಇದು ಸಂಪೂರ್ಣ ಲುಕ್‌ನ್ನೇ ಹಾಳು ಮಾಡುತ್ತದೆ.
ಆದ್ರೆ ಸೀರೆಯುಡಿಸಿ ಲಕ್ಷ ಲಕ್ಷ ಸಂಪಾದಿಸ್ಬೋದು ಅನ್ನೋದು ನಿಮ್ಗೆ ಗೊತ್ತಿದ್ಯಾ? ಸೆಲೆಬ್ರಿಟಿ ಸ್ಯಾರಿ ಡ್ರಾಪಿಂಗ್ ಆರ್ಟಿಸ್ಟ್ ಡಾಲಿ ಜೈನ್ ಒಂದು ಬಾರಿ ಸೀರೆ ಉಡಿಸೋಕೆ ಭರ್ತಿ ಎರಡು ಲಕ್ಷ ರೂ. ಚಾರ್ಜ್ ಮಾಡ್ತಾರೆ.
ಆಲಿಯಾ ಭಟ್ ತಮ್ಮ ಮದುವೆಯಲ್ಲಿ ಉಟ್ಟಿದ್ದ ಶ್ವೇತ ವರ್ಣದ ಸೀರೆಯನ್ನು ಡಾಲಿ ಜೈನ್ ಉಡಿಸಿದ್ದರು. ಕಿಯಾರಾ ಅಡ್ವಾಣಿಯ ವೆಡ್ಡಿಂಗ್ ಲುಕ್ ಸಹ ಸೆಲೆಬ್ರಿಟಿ ಸ್ಯಾರಿ ಡ್ರಾಪಿಂಗ್ ಆರ್ಟಿಸ್ಟ್ ಡಾಲಿ ಜೈನ್ ಸಿದ್ಧಪಡಿಸಿದ್ದಾರೆ.
ನೀತಾ ಅಂಬಾನಿ ಕಾರ್ಯಕ್ರಮದಲ್ಲಿ ಹಾಲಿವುಡ್ ನಟಿ ಗೀಗಿ ಹಡೀದ್‌ಗೂ ಸಹ ಡಾಲಿ ಜೈನ್ ಸೀರೆ ಉಡಿಸಿದ್ದರು. ಸರಳವಾದ ಸ್ಯಾರಿ ಡ್ರಾಪಿಂಗ್‌ಗೆ ಡಾಲಿ ಜೈನ್ ಮೂವತ್ತೈದು ಸಾವಿರ ರೂ. ಚಾರ್ಜ್ ಮಾಡುತ್ತಾರೆ. ಸಾಧಾರಣವಾಗಿ ಸೀರೆ ಉಡಿಸಲು ಡಾಲಿ ಜೈನ್ ಒಂದೂವರೆ ಲಕ್ಷ ಚಾರ್ಜ್ ಮಾಡುತ್ತಾರೆ ಎಂದು ತಿಳಿದುಬಂದಿದೆ.
ದೀಪಿಕಾ ಪಡುಣೋಣೆ, ಕತ್ರೀನಾ ಕೈಫ್, ಸೋನಂ ಕಪೂರ್ ಮೊದಲಾದ ಸೆಲೆಬ್ರಿಟಿಗಳು ಸಹ ಡಾಲಿ ಜೈನ್ ಸ್ಯಾರಿ ಡ್ರಾಪಿಂಗ್ ಇಷ್ಟ ಪಡುತ್ತಾರೆ. ಅತ್ಯದ್ಭುತವಾಗಿ ಸಾರಿ ಉಡಿಸುವುದಾದರೂ ಇವರು ಕೇವಲ ಹತ್ತರಿಂದ ಹದಿನೈದು ನಿಮಿಷವಷ್ಟೇ ತೆಗೆದುಕೊಳ್ಳುತ್ತಾರೆ. ಆದ್ರೆ ಕೇವಲ ಹದಿನೆಂಟೇ ನಿಮಿಷದಲ್ಲಿ ಸಹ ಡಾಲಿ ಜೈನ್ ಸೀರೆ ಉಡಿಸಬಲ್ಲರು.
ಅಂಬಾನಿ ಕುಟುಂಬದ ಮಹಿಳೆಯರು ಸಹ ಡಾಲಿ ಜೈನ್ ಸೀರೆ ಉಡಿಸುವಿಕೆಯನ್ನು ಇಷ್ಟಪಡುತ್ತಾರೆ. ಫಟಾಫಟ್ ಸೀರೆ ಉಡಿಸೋ ಕಲೆಯಿಂದ ಡಾಲಿ ಜೈನ್ ಅವರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಹ ಸೇರಿದೆ.
ಈಗ ಸೆಲೆಬ್ರಿಟಿ ಸ್ಯಾರಿ ಡ್ರಾಪಿಂಗ್ ಆರ್ಟಿಸ್ಟ್ ಆಗಿದ್ದರು ಸಹ ಡಾಲಿ ಜೈನ್ ಒಂದು ಕಾಲದಲ್ಲಿ ಹೋಮ್ ಮೇಕರ್ ಆಗಿದ್ದರು. ಮದುವೆಯಾದ ಬಳಿಕ ಅವರು ಮನೆಯಲ್ಲಿ ಅವರು ಸೀರೆಯನ್ನಷ್ಟೇ ಉಡಬೇಕಿತ್ತು. ಡಾಲಿ ಅದನ್ನು ತುಂಬಾ ದ್ವೇಷಿಸುತ್ತಿದ್ದರು. ಸೀರೆಯನ್ನು ಬಿಟ್ಟು ಕುರ್ತಾವನ್ನು ಧರಿಸಲು ಇಷ್ಟಪಡುತ್ತಿದ್ದರು. ಆದ್ರೆ ಅವರ ಅತ್ತೆ ಸೀರೆ ಮಾತ್ರ ಉಡುವಂತೆ ತಾಕೀತು ಮಾಡಿದ್ದರು.