ಪ್ರತಿ ತಿಂಗಳು ಮಹಿಳೆಯರು ಋತುಚಕ್ರವನ್ನು ಎದುರಿಸಬೇಕಾಗುತ್ತೆ ಮತ್ತು ಈ ಸಮಯದಲ್ಲಿ ಅವರು ಸುಮಾರು 5 ರಿಂದ 6 ದಿನಗಳವರೆಗೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತೆ. ಈ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ದೇಶದಲ್ಲಿ ದೀರ್ಘಕಾಲದಿಂದ ಪಿರಿಯಡ್ಸ್ ಲೀವ್(Periods leave) ಬೇಡಿಕೆ ಇದೆ. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಕಾನೂನು ರೂಪಿಸಲಾಗಿಲ್ಲ.
ಮಹಿಳೆಯರ ಆರೋಗ್ಯವನ್ನು(Women health) ಪರಿಗಣಿಸಿ ಪಿರಿಯಡ್ಸ್ ಲೀವ್ ನೀಡುವ ಕೆಲವು ಕಂಪನಿಗಳಿವೆ. ಮಹಿಳೆಯರಿಗೆ ಮೆನ್’ಸ್ಟ್ರುವಲ್ ಲೀವ್ ನೀಡುವ ಅಗತ್ಯವಿದೆಯೇ ಎಂಬುದು ಈಗ ಪ್ರಶ್ನೆಯಾಗಿದೆ. ಈ ಲೇಖನದಲ್ಲಿ ಈ ವಿಷಯದ ಬಗ್ಗೆ ಡಾಕ್ಟರ್ ಏನು ಹೇಳುತ್ತಾರೆಂದು ತಿಳಿಯೋಣ ...
ಈ ಕಾರಣದಿಂದಾಗಿ, ಮೆನ್’ಸ್ಟ್ರುವಲ್ ಲೀವ್ ಅವಶ್ಯಕ.
1. ಪಿರಿಯಡ್ಸ್ ಲೀವ್ ಅಗತ್ಯ ಎಂದು ತಜ್ಞರು ಕೂಡ ಹೇಳುತ್ತಾರೆ. ಪಿರಿಯಡ್ಸ್ ಲೀವ್ ಮಹಿಳೆಯರ ಋತುಚಕ್ರದ ಸಮಯದಲ್ಲಿ ಅವರ ಆರೋಗ್ಯ ಅಗತ್ಯಗಳನ್ನು ಅಂಗೀಕರಿಸುತ್ತೆ ಮತ್ತು ಮೌಲ್ಯೀಕರಿಸುತ್ತೆ . ಋತುಚಕ್ರವು ನೋವು(Pain), ಆಯಾಸ, ಮನಸ್ಥಿತಿಯ ಬದಲಾವಣೆಗಳು ಮತ್ತು ಕೆಲಸದ ಮೇಲೆ ಪರಿಣಾಮ ಬೀರುವ ಇತರ ದೈಹಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಉಂಟುಮಾಡುತ್ತೆ, ಈ ಸಮಯದಲ್ಲಿ ಕೆಲಸ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತೆ.
2. ಪಿರಿಯಡ್ಸ್ ಲೀವ್ ಪಡೆದ ನಂತರ, ಮಹಿಳೆಯರು ಈ ಕಷ್ಟದ ಸಮಯದಲ್ಲಿ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬಹುದು ಮತ್ತು ವಿಶ್ರಾಂತಿ(Rest) ಪಡೆಯಬಹುದು. ಇದು ಅವರ ಕೆಲಸ ಮಾಡುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತೆ.
3. ಪಿರಿಯಡ್ಸ್ ಲೀವ್ ಮಹಿಳೆಯರಿಗೆ ಆರೋಗ್ಯಕರ ವರ್ಕ್ ಲೈಫ್ (Work life) ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತೆ. ಈ ದಿನಗಳಲ್ಲಿ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಹಾಗಾಗಿ, ಮುಟ್ಟಿನ ರಜೆಗಳನ್ನು ಪಡೆಯುವ ಮೂಲಕ, ಮಹಿಳೆಯರು ಈ ಸಮಸ್ಯೆಗಳಿಂದಾಗಿ ಕಚೇರಿ ಕೆಲಸಗಳನ್ನು ಮಾಡುವಲ್ಲಿನ ಸಮಸ್ಯೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತೆ.
4. ಪಿರಿಯಡ್ಸ್ ಲೀವ್ ಪಡೆಯುವುದು ಮುಟ್ಟಿನ ನೈರ್ಮಲ್ಯವನ್ನು(Menstrual Hygiene) ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ಈ ಸಮಯದಲ್ಲಿ, ಮಹಿಳೆಯರು ತಮ್ಮ ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆದ್ದರಿಂದ, ರಜೆ ಲಭ್ಯವಿದ್ದಾಗ, ಮಹಿಳೆಯರು ಕೆಲಸದ ಜವಾಬ್ದಾರಿಗಳಿಂದ ದೂರ ಸರಿಯುವ ಮೂಲಕ ಪಿರಿಯಡ್ಸ್ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತೆ.
5. ಕಚೇರಿಗೆ ಹೋಗಲು ಋತುಚಕ್ರದ ಸಮಯದಲ್ಲಿ ಗಂಟೆಗಳ ಕಾಲ ಪ್ರಯಾಣಿಸೋದು ಕಷ್ಟ. ಈ ಸಮಯದಲ್ಲಿ, ಪ್ಯಾಡ್ ಲೀಕ್(Pad leakage) ಆಗೋ ಭಯವೂ ಇದೆ. ಅಲ್ಲದೆ, ಕಚೇರಿಯ ವಾಶ್ ರೂಮ್ ನಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಒಯ್ಯುವುದು ಸಹ ಸ್ವಲ್ಪ ಮುಜುಗರದ ಸಂಗತಿಯಾಗಿದೆ. ಹಾಗೆಯೇ, ಭಾರಿ ರಕ್ತಸ್ರಾವವಿದ್ದರೆ, ಮಹಿಳೆಯರು ದುರ್ಬಲರಾಗುತ್ತಾರೆ. ಹಾಗಾಗಿ ಪಿರಿಯಡ್ಸ್ ಲೀವ್ ಅತಿ ಅವಶ್ಯಕವಾಗಿದೆ.