Summer Gardening Guide How to Water Plants Correctly ಬೇಸಿಗೆಯಲ್ಲಿ ಗಿಡಗಳಿಗೆ ಹೆಚ್ಚು ನೀರು ಹಾಕಿದರೆ ಅವು ಹಾಳಾಗಬಹುದು. ಗಿಡಗಳನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಇಲ್ಲಿ ವಿವರವಾಗಿ ನೋಡೋಣ.
ಬೇಸಿಗೆ ಬಂತೆಂದರೆ 'ಗಿಡಗಳಿಗೂ ಬಾಯಾರಿಕೆ ಆಗಿರುತ್ತೆ' ಎಂದುಕೊಂಡು ಹೆಚ್ಚು ನೀರು ಹಾಕುವುದು ಹಲವರ ಅಭ್ಯಾಸ. ಆದರೆ ಇದೇ ಗಿಡಗಳಿಗೆ ದೊಡ್ಡ ಹಾನಿ ಉಂಟುಮಾಡುತ್ತದೆ. ಕೆಲವೇ ದಿನಗಳಲ್ಲಿ ಎಲೆಗಳು ಹಳದಿಯಾಗಿ ಉದುರುವುದು, ಗಿಡ ಬಾಡಿಹೋಗುವುದು ಹೆಚ್ಚುವರಿ ನೀರಿನ ಪರಿಣಾಮವೇ. ಆದ್ದರಿಂದ, ಬಿಸಿಲಿನಲ್ಲಿ ಗಿಡವನ್ನು ಉಳಿಸಲು ನೀರು ಅಗತ್ಯವಾದರೂ, ಅದನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸಮಯದಲ್ಲಿ ನೀಡಬೇಕು. ಗಿಡಗಳಿಗೆ ನೀರು ಹಾಕಲು ಮುಂಜಾನೆ ಅತ್ಯುತ್ತಮ ಸಮಯ. ಬೆಳಗ್ಗೆ 6 ರಿಂದ 8 ಗಂಟೆಯೊಳಗೆ ನೀರು ಹಾಕಿದರೆ, ಮಣ್ಣು ನಿಧಾನವಾಗಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಗಿಡ ದಿನವಿಡೀ ತಾಜಾವಾಗಿರುತ್ತದೆ. ಬೆಳಗ್ಗೆ ಸಾಧ್ಯವಾಗದಿದ್ದರೆ, ಸಂಜೆ ಸೂರ್ಯ ಮುಳುಗಿದ ನಂತರ ನೀರು ಹಾಕಬಹುದು. ಆದರೆ ಎಲೆಗಳು ಒದ್ದೆಯಾಗದಂತೆ ನೋಡಿಕೊಳ್ಳಿ, ಇಲ್ಲದಿದ್ದರೆ ಫಂಗಸ್ ರೋಗ ಬರುವ ಅಪಾಯವಿದೆ.
23
ನೀರು ಹಾಕುವ ಸಮಯ
ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಗಿಡಗಳಿಗೆ ನೀರು ಹಾಕುವುದು ದೊಡ್ಡ ತಪ್ಪು. ಈ ಸಮಯದಲ್ಲಿ ಮಣ್ಣು ತುಂಬಾ ಬಿಸಿಯಾಗಿರುತ್ತದೆ. ತಣ್ಣೀರು ಹಾಕಿದರೆ ಬೇರುಗಳಿಗೆ ಶಾಕ್ ಆಗಬಹುದು. ಎಲೆಗಳ ಮೇಲೆ ನೀರು ಬಿದ್ದರೆ, ಸೂರ್ಯನ ಕಿರಣಗಳು ಅದನ್ನು ಭೂತಗನ್ನಡಿಯಂತೆ ಬಳಸಿ ಎಲೆಗಳನ್ನು ಸುಡಬಹುದು. ಹಾಗೆಯೇ, ರಾತ್ರಿ ನೀರು ಹಾಕಿದರೆ ಮಣ್ಣು ಹೆಚ್ಚು ಹೊತ್ತು ತೇವವಾಗಿದ್ದು, ಬೇರು ಕೊಳೆಯುವ ಅಪಾಯ ಹೆಚ್ಚಾಗುತ್ತದೆ. ಗಿಡಕ್ಕೆ ನಿಜವಾಗಿಯೂ ನೀರು ಬೇಕೇ ಎಂದು ತಿಳಿಯಲು, ಮಣ್ಣಿನಲ್ಲಿ ಬೆರಳು ಹಾಕಿ ನೋಡಿ. ಒಣಗಿದ್ದರೆ ಮಾತ್ರ ನೀರು ಹಾಕಿ. ಎಲೆಗಳು ಬಾಡಿದರೆ ನೀರಿನ ಕೊರತೆ, ಹಳದಿಯಾದರೆ ಹೆಚ್ಚು ನೀರು ಎಂದರ್ಥ.
33
ತೋಟದ ಟಿಪ್ಸ್
ನೀರು ಹಾಕುವ ವಿಧಾನವೂ ಮುಖ್ಯ. ಯಾವಾಗಲೂ ಗಿಡದ ಬುಡಕ್ಕೆ ನಿಧಾನವಾಗಿ ನೀರು ಹಾಕಿ; ಎಲೆಗಳ ಮೇಲೆ ನೇರವಾಗಿ ಸುರಿಯಬೇಡಿ. ಪ್ರತಿದಿನ ಸ್ವಲ್ಪ ಸ್ವಲ್ಪ ಹಾಕುವ ಬದಲು, 2-3 ದಿನಗಳಿಗೊಮ್ಮೆ ಚೆನ್ನಾಗಿ ನೀರು ಹಾಕಿದರೆ ಬೇರುಗಳು ಆಳವಾಗಿ ಬೆಳೆಯುತ್ತವೆ. ಮಣ್ಣಿನ ಮೇಲೆ ಒಣ ಎಲೆಗಳನ್ನು ಹರಡುವುದು (ಮಲ್ಚಿಂಗ್), ಗಿಡಗಳನ್ನು ನೆರಳಿನಲ್ಲಿ ಇಡುವುದು, ಮತ್ತು ಪಾಟ್‌ಗಳನ್ನು ಒಟ್ಟಿಗೆ ಇಡುವುದರಿಂದ ಬೇಸಿಗೆಯಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.