Life Lessons: ಸುಧಾಮೂರ್ತಿಯವರ ಅದ್ಭುತ ಜೀವನ ಪಾಠಗಳು

First Published | Jun 28, 2023, 8:41 AM IST

ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನಾಡಿನ ಹೆಮ್ಮೆ ಸುಧಾಮೂರ್ತಿಯವರ ಜೀವನ ಪಾಠಗಳು ಎಂಥವರ ಕಣ್ಣನ್ನೂ ತೆರೆಸುವಂತಿರುತ್ತೆ. ಖುಷಿಯ ಬದುಕಿಗೆ ಸುಧಾಮೂರ್ತಿ ಅವರ ಸ್ಫೂರ್ತಿದಾಯಕ ಮಾತುಗಳು ಇಲ್ಲಿವೆ.

-ಉತ್ತಮ ಸಂಬಂಧಗಳನ್ನು ಹೊಂದಿರುವುದು ಮತ್ತು ಮನಸ್ಸಿನ ನೆಮ್ಮದಿ ಯಾವುದೇ ಸಾಧನೆ, ಅವಾರ್ಡ್, ಡಿಗ್ರಿ, ಹಣಕ್ಕಿಂತಲೂ ಮಿಗಿಲಾಗಿದೆ.

-ನೀವು ಎಲ್ಲರ ಮನಸ್ಸನ್ನೂ ಒಲಿಸಲು ಯತ್ನಿಸುತ್ತಿದ್ದರೆ, ಯಾರಿಗೂ ನೀವು ಇಷ್ಟವಾಗುವುದಿಲ್ಲ.

-ಭಾವನಾತ್ಮಕವಾಗಿರುವ ಜನರಿಗೆ ಈ ಪ್ರಪಂಚವನ್ನು ತಿಳಿದುಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. 

-ಹಣ ಎಂಬುದು ಜನರನ್ನು ಒಗ್ಗೂಡಿಸುವ ಅಲ್ಲ ಜನರನ್ನು ವಿಭಜಿಸುವ ಒಂದು ವಸ್ತುವಾಗಿದೆ. 

Tap to resize

-ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಹಣವನ್ನು ಸಂಪಾದಿಸುವುದು ಅತಿಯಾದ ಮದ್ಯಸೇವನೆಯಷ್ಟೇ ಹಾನಿಕರವಾಗಿದೆ. 

-ಕೋಗಿಲೆ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲ, ಹಾಗೆಯೇ ನವಿಲು ಕುಣಿಯಲು ಸಹ ಯತ್ನಿಸಬಾರದು

-ಜೀವನ ಒಂದು ಪರೀಕ್ಷೆ. ಆದರೆ ಸಿಲಬಸ್‌ ಯಾರಿಗೂ ಗೊತ್ತಿಲ್ಲ. ಕೊಶ್ಚನ್‌ ಪೇಪರ್ ಸಹ ಸೆಟ್ ಮಾಡಿರುವುದಿಲ್ಲ.

-ಬೆಂಕಿಯನ್ನು ಇನ್ನೊಂದು ಬೆಂಕಿಯಿಂದ ನಂದಿಸಲು ಆಗುವುದಿಲ್ಲ. ಬದಲಿಗೆ ನೀರಿನಿಂದ ಬೆಂಕಿಯನ್ನು ನಂದಿಸಬಹುದು.

-ಹೋರಾಟವೇ ಜೀವನ

-ಪುರುಷ ಮತ್ತು ಮಹಿಳೆಗೆ ಉತ್ತಮ ಸ್ನೇಹಿತ ಯಾರು ಎಂಬುದಕ್ಕೆ ಉತ್ತರ ಹೆಂಡತಿ ತನ್ನ ಪತಿಗೆ ಮತ್ತು ಪತಿ ತನ್ನ ಹೆಂಡತಿಗೆ ಉತ್ತಮ ಫ್ರೆಂಡ್

-ನಾವು ಯಾವಾಗಲೂ ಜೀವನದಲ್ಲಿ ಕೆಲವು ಗುರಿಗಳನ್ನು ಹೊಂದಿರಬೇಕು. ಅದನ್ನು ನಾವು ಇತರರಿಗೆ ಸಹಾಯ ಮಾಡುವಾಗ ಸಾಧಿಸಲು ಪ್ರಯತ್ನಿಸಬೇಕು.

-ಜೀವನದಲ್ಲಿ ಮೇಲಕ್ಕೆ ಬರಲು ನಿಮಗೆ ಪ್ರತಿಭೆ, ಕಠಿಣ ಪರಿಶ್ರಮ, ಆಕ್ರಮಣಶೀಲತೆ ಮತ್ತು ಸಂಪರ್ಕಗಳು ಬೇಕಾಗುತ್ತವೆ.

-ಪ್ರತಿಯೊಬ್ಬ ರೋಗಿ ಅಮೂಲ್ಯ. ಜಾಗರೂಕರಾಗಿರಿ. ರೋಗಿಯು ಸತ್ತರೆ, ವೈದ್ಯರಿಗೆ ಇದು ಕೇವಲ ಒಂದು ಆಸ್ಪತ್ರೆಯ ಸಾವು. ಆದರೆ ದುರದೃಷ್ಟಕರ ಕುಟುಂಬಕ್ಕೆ ಇದು ಶಾಶ್ವತ ನಷ್ಟವಾಗಿದೆ.

Latest Videos

click me!