ಗರ್ಭಾವಸ್ಥೆಯಲ್ಲಿ ಬ್ಲಡ್ ಸ್ಪಾಟಿಂಗ್ ಆಗುತ್ತೆ, ಹಾಗಂದ್ರೆ ಏನು ಗೊತ್ತಾ?

First Published Feb 21, 2021, 1:42 PM IST

ಗರ್ಭಾವಸ್ಥೆಯಲ್ಲಿ ಯೋನಿಯಿಂದ ರಕ್ತಸ್ರಾವ ಮತ್ತು ಗುರುತುಗಳು ಸಾಮಾನ್ಯವಾಗಿ ಕಂಡುಬರುವವು. ಗರ್ಭಿಣಿ ಮಹಿಳೆಯರಲ್ಲಿ 4 ರಲ್ಲಿ ಒಬ್ಬರು  (25%ರವರೆಗೆ)  ತಮ್ಮ ಗರ್ಭಾವಸ್ಥೆಯಲ್ಲಿ ಕೆಲವು ರಕ್ತಸ್ರಾವ ಅಥವಾ ಸ್ಪಾಟ್ಗಳನ್ನು ಹೊಂದಿರುತ್ತಾರೆ.

ಗರ್ಭಾವಸ್ಥೆಯಲ್ಲಿ ರಕ್ತಸ್ರಾವ ಮತ್ತು ಗುರುತುಗಳು ಯಾವಾಗಲೂ ಸಮಸ್ಯೆಯನ್ನು ಉಂಟುಮಾಡುವುದಿಲ್ಲ, ಆದರೆ ಅವು ಗರ್ಭಪಾತ ಅಥವಾ ಇತರ ಗಂಭೀರ ತೊಡಕುಗಳ ಸಂಕೇತವಾಗಿರಬಹುದು. ಗರ್ಭಾವಸ್ಥೆಯ 20 ವಾರಗಳ ಮೊದಲು ಗರ್ಭದಲ್ಲಿ ಮಗುವು ಸತ್ತಾಗ ಗರ್ಭಪಾತವಾಗಿರುತ್ತದೆ. ಈ ಸಂದರ್ಭದಲ್ಲಿ ಹೆಚ್ಚಾಗಿ ರಕ್ತಸ್ರಾವವಾಗುತ್ತದೆ.
undefined
ಗರ್ಭಾವಸ್ಥೆಯಲ್ಲಿ ಸ್ಪಾಟ್ಟಿಂಗ್ ಆಗುವುದು ಎಷ್ಟು ಸಾಮಾನ್ಯ?ಮೊದಲ ಟ್ರಿಮಿಸ್ಟರ್ನಲ್ಲಿ ಮತ್ತು ಎರಡನೇ ಟ್ರಿಮಿಸ್ಟರ್ನಲ್ಲಿ ಶೇ.20-25ರಷ್ಟು ಮಹಿಳೆಯರು ಸ್ಪಾಟಿಂಗ್ಅನುಭವವನ್ನು ಅನುಭವಿಸುತ್ತಾರೆ.
undefined
ಗರ್ಭಾವಸ್ಥೆಯಲ್ಲಿ ಸ್ಪಾಟಿಂಗ್ ಎಂದರೇನು?ಇದು ನಿಯಮಿತ ಋತುಸ್ರಾವದಂತಿಲ್ಲ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಮಗುವಿಗೆ ಯಾವುದೇ ಅಪಾಯವಿರುವುದಿಲ್ಲ.
undefined
ಸಂಭೋಗದ ನಂತರ ರಕ್ತಸ್ರಾವಕೆಲವು ಮಹಿಳೆಯರಿಗೆ ಸಂಭೋಗದ ನಂತರ ರಕ್ತಸ್ರಾವವಾಗಬಹುದು ಅಥವಾ ಕೆಲವರಿಗೆ ಇದು ಅನುಭವಕ್ಕೆ ಬಾರದಿರಬಹುದು. ಸ್ಪಾಟಿಂಗ್ ಅನ್ನು ಲಘುವಾಗಿ ತೆಗೆದುಕೊಳ್ಳಬಾರದು, ಯಾಕೆ ಅನ್ನೋದನ್ನು ತಿಳಿದುಕೊಳ್ಳಿ.
undefined
ರಕ್ತಸ್ರಾವವು ಅಧಿಕವಾಗಿದ್ದರೆಸ್ಪಾಟ್ಟಿಂಗ್ ಎಂದರೆ ಲಘು ರಕ್ತಸ್ರಾವ, ಅಧಿಕ ರಕ್ತ ಸಂಚಾರ. ಇದು ಕೇವಲ ಕಲೆಯಾಗಿದ್ದು, ಯಾವುದೇ ಪ್ಯಾಡ್‌‍ಗಳು ಅಥವಾ ಟ್ಯಾಂಪೂನ್‌ಗಳ ಅವಶ್ಯಕತೆಯಿಲ್ಲ. ಸಾಧಾರಣಕ್ಕಿಂತ ಅಧಿಕ ರಕ್ತಸ್ರಾವವನ್ನು ಹೊಂದಿದ್ದರೆ, ತಕ್ಷಣ ವೈದ್ಯರನ್ನು ಭೇಟಿಮಾಡಿ
undefined
ಸ್ಪಾಟಿಂಗ್‌ನೊಂದಿಗೆ ತೀವ್ರವಾದ ಬೆನ್ನು ನೋವುತೀವ್ರವಾದ ಬೆನ್ನು ನೋವು ಇರುವುದನ್ನು ಕಂಡು ಬಂದರೆ ಗರ್ಭಿಣಿಯಾಗಿರುವಾಗ ಇದು ಒಳ್ಳೆಯ ಲಕ್ಷಣವಲ್ಲ. ಸೆಳೆತ ಮತ್ತು ನೋವು ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿಲ್ಲ, ಇದು ಹೆಚ್ಚು ಗಂಭೀರವಾದುದು ಎಂದು ಅರ್ಥಮಾಡಬಹುದು.
undefined
ಜ್ವರವಿದ್ದರೆಜ್ವರ ಮತ್ತು ಶೀತದ ಜೊತೆಗೆ ಸ್ಪಾಟಿಂಗ್ ಇದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.
undefined
ಬಣ್ಣವು ಪ್ರಕಾಶಮಾನವಾದ ಕೆಂಪು ಬಣ್ಣದ್ದಾಗಿದ್ದರೆಕಂದು ಬಣ್ಣಕ್ಕೆ ಬದಲಾಗಿ ರಕ್ತಬಣ್ಣವು ಕೆಂಪು ಬಣ್ಣದಲ್ಲಿದ್ದರೆ, ಅಥವಾ ರಕ್ತ ಹೆಪ್ಪುಗಟ್ಟುವಿಕೆ ಅಥವಾ ಅಂಗಾಂಶಗಳಿಂದ ಕೂಡಿದ್ದರೆ, ಅದು ಸಾಮಾನ್ಯವಲ್ಲ.
undefined
ತಲೆ ಸುತ್ತುವಿಕೆಯನ್ನು ಅನುಭವಿಸುತ್ತಿದ್ದರೆತಲೆಸುತ್ತುವಿಕೆಯೊಂದಿಗೆ ಅತಿಯಾದ ರಕ್ತಸ್ರಾವವಾಗುತ್ತಿದ್ದರೆ,ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯ. ತಲೆಸುತ್ತುವಿಕೆ ಮತ್ತು ಕಡಿಮೆ ಗರ್ಭಾವಸ್ಥೆಯ ಲಕ್ಷಣಗಳು ಗರ್ಭಪಾತದ ಸೂಚನೆ ನೀಡುತ್ತದೆ.
undefined
click me!