ಡ್ರೈ ಸ್ಕಿನ್ ಸಮಸ್ಯೆಯೇ? ಹಾಗಿದ್ರೆ ಈ ಆಹಾರಗಳನ್ನು ಇವತ್ತಿಂದಲೇ ಅವಾಯ್ಡ್ ಮಾಡಿ...

First Published | Feb 19, 2021, 2:35 PM IST

ಚರ್ಮ ಕೇವಲ ಪೋಷಣೆಯಿಂದಷ್ಟೇ ಸುಂದರ ಹಾಗೂ ಹೊಳಪಿನಿಂದ ಕೂಡಿರಲು ಸಾಧ್ಯವಿಲ್ಲ. ಇದು ತಿನ್ನುವ ಆಹಾರ ಹಾಗೂ ಸೇವಿಸುವ ಪಾನೀಯಗಳ ಮೇಲೂ ಅವಲಂಬಿತವಾಗಿರುತ್ತದೆ. ಚರ್ಮವನ್ನು ತೇವಗೊಳಿಸಿ ಶುದ್ಧಿಗೊಳಿಸಿ ಸರಿಯಾದ ಆಹಾರ ಪದ್ಧತಿ ಪಾಲಿಸುವುದರಿಂದ ಚರ್ಮವನ್ನು ಆರೋಗ್ಯ ಪೂರ್ಣಗೊಳಿಸುವಾಗ ತಪ್ಪಿಸಬಹುದಾದದ ಕೆಲ ಸಂಗತಿಗಳು ಹೀಗಿವೆ.
 

ಮದ್ಯಪಾನ: ಮದ್ಯಪಾನವು ಸಾಮಾಜಿಕವಾಗಿ ಎಲ್ಲರೂಇಷ್ಟಪಡುವ ಪಾನೀಯ. ಆದರೆ ಇದು ಚರ್ಮದ ಮೇಲೆ ಅತ್ಯಂತ ದುಷ್ಪರಿಣಾಮ ಬೀರುತ್ತದೆ. ಇದು ಹೆಚ್ಚು ಡೈಯುರಿಟಿಕ್ ಆಗಿ ವರ್ತಿಸುವುದಲ್ಲದೆ ಅತೀ ಹೆಚ್ಚು ಮೂತ್ರ ವಿಸರ್ಜನೆ ಮಾಡುವಂತೆ ಪ್ರಚೋದಿಸುತ್ತದೆ.
undefined
ಆಲ್ಕೋಹಾಲ್ ದೇಹದಲ್ಲಿನ ನೀರಿನಾಂಶವನ್ನೆಲ್ಲ ನಿರ್ಮೂಲನೆ ಮಾಡಿ, ನಿಮ್ಮ ದೇಹದ ಒಳ ಭಾಗದ ಆವಯವಗಳನ್ನು ಹಾನಿಗೀಡುಮಾಡುತ್ತದೆ. ಅಲ್ಲದೇ ಸ್ನಾಯುಗಳು ಹಾಗೂ ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಮದ್ಯಪಾನ ಮಾಡಿದ ನಂತರ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಿದರೆ ಅದು ದೇಹದಲ್ಲಿನ ನೀರಿನಾಂಶದ ಕೊರತೆಯನ್ನು ನೀಗಿಸುತ್ತದೆ.
undefined
Tap to resize

ಕೆಫೈನ್ : ಹೆಚ್ಚಿನ ಸೋಡಾ ಹಾಗೂ ಶಕ್ತಿವರ್ಧಕ ಪಾನೀಯಗಳು ಕೆಫೈನ್ ಹೊಂದಿರುತ್ತದೆ.ದಿನಂಪ್ರತಿ 4 ರಿಂದ 7 ಬಾರಿ ಇಂತಹ ಕೆಫೈನ್ ಹೊಂದಿರುವ ಪಾನೀಯಗಳನ್ನು ಸೇವಿಸುತ್ತಿದ್ದಲ್ಲಿ ಕೂಡಲೇ ನಿಲ್ಲಿಸಿ.
undefined
ಅಲ್ಕೋಹಾಲ್ ನಂತೆಯೇ ಕೆಫೆನ್‌ಯುಕ್ತ ಆಹಾರ ಪದಾರ್ಥಗಳೂ ಡೈಯುರಿಟಿಕ್ ಆಗಿದ್ದು ದೇಹದ ನೀರಿನ ಅಂಶವನ್ನೆಲ್ಲಾ ಕಡಿಮೆಗೊಳಿಸಿ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
undefined
ಸ್ಯಾಚುರೇಟೆಡ್ ಫ್ಯಾಟ್ಸ್: ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳು ಚರ್ಮವಷ್ಟೇ ಅಲ್ಲದೆ ಸಾಮಾನ್ಯ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಂತಹ ಆಹಾರಗಳು ಸ್ಯಾಚುರೇಟೆಡ್ ಕೊಬ್ಬಿನಿಂದ ಕೂಡಿದ್ದು ಚರ್ಮದಲ್ಲಿನ ಎಣ್ಣೆ ಅಂಶದ ಮೇಲೆ ಕೆಟ್ಟ ಪರಿಣಾಮ ಬೀರಿ ಚರ್ಮವನ್ನು ಬಿಸಿಗೊಳಿಸುತ್ತದೆ.
undefined
ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳಬದಲಾಗಿ ಓಮೇಗಾ – 3 ಎಂಬ ಫ್ಯಾಟಿ ಆ್ಯಸಿಡ್‌ ಇರುವಂತಹ ಆಹಾರ ಪದಾರ್ಥಗಳ ಮೊರೆ ಹೋಗಿ. ಇದು ದೇಹದ ಆರೋಗ್ಯ ಮತ್ತು ಚರ್ಮವನ್ನು ಉತ್ತಮಗೊಳಿಸುತ್ತದೆ.
undefined
ಸಾಲ್ಮನ್ ಮೀನು, ಟೋಪು, ಅಕ್ರೋಟ, ನಾರಿನಾಂಶವಿರುವ ಬೀಜಗಳು, ಸೋಯಾಬೀನ್‌ಗಳು ಮತ್ತು ಕಿತ್ತಳೆ ರಸ, ಮುಂತಾದುವುದಗಳು ದೇಹಕ್ಕೆ ಅವಶ್ಯವಿರುವಂತಹ ಒಳ್ಳೆಯ ಕೊಬ್ಬಿನ ಅಂಶವಿರುವಂತ ಆಹಾರಗಳು.
undefined
ಚರ್ಮವು ತುರಿಕೆಯಿಂದ ಕೂಡಿದ್ದರೆ ಪ್ರಿಮ್ ರೂಸ್ ಎಣ್ಣೆ ಉತ್ಪನ್ನಗಳನ್ನು ಸಾಯಂಕಾಲದ ಸಮಯದಲ್ಲಿ ಬಳಸಿ ಇದರಿಂದ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.
undefined
ಈ ಮೇಲ್ಕಂಡ ಸಲಹೆಗಳನ್ನು ಪಾಲಿಸಿ ಆಹಾರ ಪದ್ಧತಿಯನ್ನು ನಿಯಂತ್ರಿಸಿ. ಒಣ ಹಾಗೂ ಶುಷ್ಕ ಚರ್ಮದಿಂದ ದೂರವಿರಿ. ಹಾಗೂ ಆರೋಗ್ಯಯುತ ಸುಂದರ ಚರ್ಮವನ್ನು ಪಡೆಯಿರಿ.
undefined

Latest Videos

click me!