ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಸಮಸ್ಯೆ: ಪರಿಹಾರವೇನು?
First Published | Feb 18, 2021, 3:00 PM ISTಗರ್ಭಾವಸ್ಥೆಯ ಮಲಬದ್ಧತೆಯು ಸಾಮಾನ್ಯವಾಗಿ ಕಂಡುಬರುತ್ತದೆ. ಗರ್ಭಾವಸ್ಥೆಯ ಮಲಬದ್ಧತೆಯು ಹಾರ್ಮೋನ್ ಗಳ ಬದಲಾವಣೆಯಿಂದ ಪ್ರಚೋದಿಸುತ್ತದೆ. ಇದು ಮೊದಲ ಮೂರು ತಿಂಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ದೇಹದಲ್ಲಿ ಪ್ರೊಜೆಸ್ಟರಾನ್ ಮಟ್ಟವು ಹೆಚ್ಚಾದರೆ ಮಲಬದ್ಧತೆಗೆ ಕಾರಣವಾಗುತ್ತದೆ. ಮೊದಲ ಮೂರು ತಿಂಗಳಲ್ಲಿ ಪ್ರೋಜೆಸ್ಟರಾನ್ ಮಟ್ಟವು ಹೆಚ್ಚಾಗುತ್ತದೆ, ಆಹಾರವು ಜೀರ್ಣಾಂಗಗಳ ಮೂಲಕ ಹಾದು ಹೋಗುವ ದರವನ್ನು ಕಡಿಮೆ ಮಾಡುತ್ತದೆ ಮತ್ತು ಮಲಬದ್ಧತೆಯ ಅಪಾಯವನ್ನು ಹೆಚ್ಚಿಸುತ್ತದೆ.