ಉಪ್ಪು ನೀರಿನಿಂದ ಕೂದಲು ಹಾಳಾಗೋದು ಗೊತ್ತು, ಅದರಿಂದಾನೇ ರಕ್ಷಣೆಯೂ ಸಿಗುತ್ತಾ?

First Published Mar 25, 2021, 1:22 PM IST

ಮಹಿಳೆಯರ ಸೌಂದರ್ಯವನ್ನು ಉದ್ದ, ದಟ್ಟ ಕೂದಲುಗಳು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ ಇಂದಿನ ಜೀವನಶೈಲಿಯಿಂದ ಕೂದಲು ಉದುರೋದು, ಸ್ಪ್ಲಿಟ್ ಎಂಡ್ಸ್  ಸಮಸ್ಯೆ ಹೆಚ್ಚುತ್ತಿವೆ. ಕೂದಲಿನ ಆರೈಕೆಗೆ ಹಾನಿಕಾರಕ ಉತ್ಪನ್ನವನ್ನು ಉಪಯೋಗಿಸುವ ಬದಲು ಮನೆಮದ್ದುಗಳನ್ನೇ ಬಳಸಬೇಕು. ಮೊಟ್ಟೆ, ವಿನೆಗರ್, ಮೆಂತೆ, ಸಾಸಿವೆ ಎಣ್ಣೆ ಇತ್ಯಾದಿಗಳನ್ನು ಬಳಸಬಹುದು. ಆದರೆ ಉಪ್ಪು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಎಂದಾದರೂ ಯೋಚಿಸಿದ್ದೀರಾ. ಇದನ್ನು ಸರಿಯಾಗಿ ಬಳಸಿದರೆ, ಕೂದಲಿನ ಅನೇಕ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು. ಅಷ್ಟಕ್ಕೂ ಕೂದಲಿಗೆ ಉಪ್ಪನ್ನು ಬಳಸುವುದು ಹೇಗೆ?
 

ತಲೆಹೊಟ್ಟು ಮತ್ತು ತೇವಾಂಶದಿಂದ ಶಿಲೀಂಧ್ರ ಸೃಷ್ಟಿಯಾಗಿ,ನೆತ್ತಿಮೇಲೆ ಸತ್ತ ಚರ್ಮದ ಕೋಶಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಉಪ್ಪಿನ ಸಹಾಯದಿಂದ ತಲೆಬುರುಡೆಯಿಂದ ಹೆಚ್ಚುವರಿ ಎಣ್ಣೆ ಮತ್ತು ತೇವಾಂಶವನ್ನು ಹೀರಿಕೊಳ್ಳಬಹುದು.
undefined
ತಲೆಹೊಟ್ಟಿನ ಸಮಸ್ಯೆ ನಿವಾರಣೆಗೆ ತಲೆಬುರುಡೆಗೆ ಸ್ವಲ್ಪ ಉಪ್ಪನ್ನು ಚಿಮುಕಿಸಿ ಮೃದುವಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ, ಸಾಮಾನ್ಯವಾಗಿ ಕೂದಲನ್ನು ತೊಳೆಯುವಂತೆ ಅದನ್ನು ತೊಳೆಯಿರಿ.ಮತ್ತೆ ಫಲಿತಾಂಶ ಏನು ಬರುತ್ತೆ ನೋಡಿ...
undefined
ದಟ್ಟವಾದ ಕೂದಲಿನ ಎಕ್ಸ್ ಫೋಲಿಯೇಶನ್ ಬಹಳ ಮುಖ್ಯವಾಗಿದ್ದು, ನಾವು ಸಾಮಾನ್ಯವಾಗಿ ಕೂದಲಿನ ಆರೈಕೆಗೆ ಹೆಚ್ಚಿನ ಗಮನವನ್ನು ನೀಡುವುದಿಲ್ಲ. ಕೂದಲಿಗೆ ಬಳಸುವ ರಾಸಾಯನಿಕ ಮತ್ತು ಕೂದಲಿನ ಉತ್ಪನ್ನಗಳು ಕೂದಲಕಾಂತಿಯನ್ನು ಕಳೆದುಕೊಂಡು, ತಲೆಹೊಟ್ಟು ಕೂಡ ಒಣಗುವಂತೆ ಮಾಡುತ್ತದೆ.
undefined
ಕೂದಲು ಕಳೆಗುಂದಿದರೆ ಶಾಂಪೂಗೆ ಉಪ್ಪು ಸೇರಿಸಿ ತಲೆಹೊಟ್ಟು ನಿವಾರಣೆ ಮಾಡಬಹುದು. ಇದು ಕೂದಲನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಹೆಚ್ಚು ಸಾಂದ್ರವಾಗುತ್ತದೆ.
undefined
ಎಷ್ಟು ಶಾಂಪೂ ಬೇಕು ಅದಕ್ಕೆಶಾಂಪೂವಿನ ಅರ್ಧಭಾಗ ಉಪ್ಪು ಸೇರಿಸಿ. ನಂತರ ನಿಧಾನವಾಗಿ ಮಸಾಜ್ ಮಾಡಿ. ಸ್ವಲ್ಪ ಹೊತ್ತು ಕೂದಲನ್ನು ಹಾಗೆ ಬಿಡಿ. ಹೆಚ್ಚು ಹೊಳೆಯುವ ಮತ್ತು ದಪ್ಪಕಾಣುವ ಕೂದಲನ್ನು ನೋಡಲು ತಣ್ಣೀರಿನಿಂದ ಕೂದಲನ್ನು ತೊಳೆಯಿರಿ.
undefined
ಕೂದಲು ಉದುರುವ ಸಮಸ್ಯೆ ಮತ್ತು ತಲೆಹೊಟ್ಟು ನಿವಾರಿಸಲು ಪ್ರಯತ್ನಿಸುವವರಲ್ಲಿ ನೀವಿದ್ದರೆ, ಸಮುದ್ರದ ಉಪ್ಪು ಸಮಸ್ಯೆಯನ್ನು ಪರಿಹರಿಸಲು ಅತ್ಯಂತ ನೈಸರ್ಗಿಕ ಮತ್ತು ಅಗ್ಗದ ಪದಾರ್ಥ.
undefined
ಉಪ್ಪು ತಲೆ ಬುರುಡೆಯಲ್ಲಿ ಬ್ಲಾಕ್ ಆದ ರಂಧ್ರಗಳನ್ನು ತೆರೆಯುತ್ತದೆ ಮತ್ತು ಇದರಿಂದ ಕೂದಲು ಸರಿಯಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ. ವಾರಕ್ಕೆ ಎರಡು ಬಾರಿ ಎಣ್ಣೆ ಮತ್ತು ಉಪ್ಪು ಬಳಸಿ ಕೂದಲಿಗೆ ಮಸಾಜ್ ಮಾಡಿ. ಕೂದಲು ಮೊದಲಿಗಿಂತ ವೇಗವಾಗಿ ಬೆಳೆಯುವುದನ್ನು ನೋಡಲು ಸಾಧ್ಯವಾಗುತ್ತದೆ!!
undefined
click me!