ಬೇಸಿಗೆ: ತ್ವಚೆಯಲ್ಲಿ ಉರಿ, ತಂಪನ್ನು ಕಾಪಾಡಿಕೊಳ್ಳಲು ಈ ಫೇಸ್ ಪ್ಯಾಕ್ ಟ್ರೈ ಮಾಡಿ

Suvarna News   | Asianet News
Published : Mar 24, 2021, 06:48 PM IST

ಅಂತೂ ಇಂತೂ ಸುಡು ಸುಡು ಬೇಸಿಗೆ ಕಾಲ ಆರಂಭವಾಗಿದೆ. ಇದರಿಂದ ಸ್ಕಿನ್ ಸಮಸ್ಯೆಗಳೂ ಸಾಲು ಸಾಲಾಗಿ ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಕ್ರೀಮ್ ಹಚ್ಚುವ ಬದಲು, ಮನೆಯಲ್ಲಿಯೇ ಏನಾದರೂ ಟ್ರೈ ಮಾಡಬಹುದಲ್ಲವೇ? ಫೇಸ್ ಪ್ಯಾಕ್ಸ್ ಚರ್ಮವನ್ನು ಸ್ವಚ್ಛ, ಮತ್ತು ಕಾಂತಿಯುತವಾಗಿಸಲು ಸಹಾಯ ಮಾಡುತ್ತದೆ.ಮನೆಯಲ್ಲಿ ಪ್ರಯತ್ನಿಸಬಹುದಾದ ಕೆಲವೊಂದು ಫೇಸ್ ಪ್ಯಾಕ್ಸ್ ಇಲ್ಲಿವೆ...   

PREV
18
ಬೇಸಿಗೆ: ತ್ವಚೆಯಲ್ಲಿ ಉರಿ, ತಂಪನ್ನು ಕಾಪಾಡಿಕೊಳ್ಳಲು ಈ ಫೇಸ್ ಪ್ಯಾಕ್ ಟ್ರೈ ಮಾಡಿ

ಜೇನು ಮತ್ತು ನಿಂಬೆ
ಸಾಮಾನ್ಯ ಮತ್ತು ಎಣ್ಣೆಯ ತ್ವಚೆಗಾಗಿ
ಏನು ಬೇಕು - ಜೇನು-1 ಚಮಚ, ನಿಂಬೆ ರಸ-3-4 ಹನಿ.

28

ತಯಾರಿಸುವ ವಿಧಾನ - 3-4 ಹನಿ ಜೇನು ತುಪ್ಪವನ್ನು ಬೆರೆಸಿ, ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಕಣ್ಣಿನ ಸುತ್ತಲಿನ ಭಾಗಕ್ಕೆ ಹಚ್ಚಬಾರದು ಎಂಬುದನ್ನು ನೆನಪಿನಲ್ಲಿಡಿ. ಸುಮಾರು 20 ನಿಮಿಷಗಳ ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಈ ಪ್ಯಾಕ್ ಅನ್ನು ವಾರದಲ್ಲಿ 2-3 ಬಾರಿ ಹಾಕಬಹುದು.

38

ಬೇವು-ತುಳಸಿ-ಅರಿಶಿನ
ಪ್ರತಿಯೊಂದು ಬಗೆಯ ಚರ್ಮಕ್ಕೂ
ಏನು ಬೇಕು - ತುಳಸಿ ಎಲೆಗಳು-4, ಬೇವಿನ ಎಲೆಗಳು-3-4, ಅರಿಶಿನ-1 ಚಮಚ ಮತ್ತು ಮೊಸರು-1 ಚಮಚ.

48

ಹೇಗೆ ಮಾಡುವುದು- ತುಳಸಿ ಮತ್ತು ಬೇವಿನ ಎಲೆಗಳ ಪೇಸ್ಟ್ ಮಾಡಿ. ಒಂದು ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಮೊಸರು ಹಾಕಿ ಪೇಸ್ಟ್ ತಯಾರಿಸಿ. ಈ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಚೆನ್ನಾಗಿ ಹಚ್ಚಿ ಮತ್ತು ಒಣಗಿದ ನಂತರ ತೊಳೆಯುವುದು. ಒಂದು ದಿನ ಬಿಟ್ಟು ಈ ಪ್ಯಾಕ್ ಅನ್ನು ಮತ್ತೆ ಹಚ್ಚಬಹುದು.

58

ಅಕ್ಕಿ ಮತ್ತು ಶ್ರೀಗಂಧ
ಸಾಮಾನ್ಯ ಮತ್ತು ಎಣ್ಣೆಯ ತ್ವಚೆಗಾಗಿ
ಏನು ಬೇಕು - ಅಕ್ಕಿ ಹಿಟ್ಟು-1 ಚಮಚ, ಶ್ರೀಗಂಧದ ಎಣ್ಣೆ-2-3 ಹನಿ ಅಥವಾ ಶ್ರೀಗಂಧದ ಪುಡಿ-1/2 ಚಮಚ, ರೋಜ್ ವಾಟರ್ -1 ಚಮಚ.

68

ತಯಾರಿಸುವ ವಿಧಾನ - ಎಲ್ಲಾ ಸಾಮಾಗ್ರಿಗಳನ್ನು ಒಂದು ಬಟ್ಟಲಿನಲ್ಲಿ ಸೇರಿಸಿ ಪೇಸ್ಟ್ ತಯಾರಿಸಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 5 ರಿಂದ 10 ನಿಮಿಷ ಮಸಾಜ್ ಮಾಡಿ. ನಂತರ ಮುಖಗಳನ್ನು ತೊಳೆದು ಮಾಯಿಶ್ಚರೈಸ್  ಹಚ್ಚಬಹುದು.

78

ಹಾಲು-ಅರಿಶಿನ-ಕಡಲೆ
ಪ್ರತಿಯೊಂದು ಬಗೆಯ ಚರ್ಮಕ್ಕೂ
ಏನು ಬೇಕು - 1 ಚಮಚ ಕಡಲೆ ಹಿಟ್ಟು, 2 ಚಮಚ ಹಾಲು, 1/2 ಚಮಚ ಅರಿಶಿನ ಪುಡಿ.

88

ತಯಾರಿಸುವ ವಿಧಾನ - ಎಲ್ಲಾ ಪದಾರ್ಥಗಳನ್ನು ಒಂದು ಬೌಲ್ನಲ್ಲಿ  ಸೇರಿಸಿ ಪ್ಯಾಕ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮತ್ತು 5 - 10 ನಿಮಿಷಗಳ ಕಾಲ ಮುಖದ ಮೇಲೆ ಮಸಾಜ್ ಮಾಡಿ. ಪ್ಯಾಕ್ ಒಣಗಲು ಪ್ರಾರಂಭಿಸಿದಾಗ ಮುಖವನ್ನು ತೊಳೆಯಬೇಕು. ಇದನ್ನು ವಾರಕ್ಕೊಮ್ಮೆ ಹಾಕಬಹುದು.

click me!

Recommended Stories