ಅನೇಕ ಯಶಸ್ವಿ ಭಾರತೀಯ ವಾಣಿಜ್ಯೋದ್ಯಮಿಗಳು ತಮ್ಮದೇ ಆದ ಸಂಸ್ಥೆಗಳನ್ನು ಪ್ರಾರಂಭಿಸುವ ಮೊದಲು ವಿವಿಧ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಭಾರತದ ಹೊರಗೆ ಅಧ್ಯಯನ ಮಾಡಿ ಹಲವು ಬೃಹತ್ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದಾರೆ. ಆ ನಂತರ ಸ್ವ ಉದ್ಯಮ ಆರಂಭಿಸಿ ಸಕ್ಸಸ್ ಅಗಿದ್ದಾರೆ.
ಅಂಥಾ ವ್ಯಕ್ತಿಗಳಲ್ಲಿ ಒಬ್ಬರು ಸಾಕ್ಷಿ ಛಾಬ್ರಾ ಮಿತ್ತಲ್, ಫುಡ್‌ಹಕ್‌ನ ಸಂಸ್ಥಾಪಕ ಮತ್ತು ಸಿಇಒ. ಸಂಸ್ಥೆಯು ವಿಜ್ಞಾನ, ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ಆಯುರ್ವೇದ ತತ್ವಗಳನ್ನು ಸಂಯೋಜಿಸಿ ಆರೋಗ್ಯಕರ ಊಟವನ್ನು ಎಲ್ಲರಿಗೂ ಸುಲಭವಾಗಿ ದೊರಕುವಂತೆ ಮಾಡುವ ಉದ್ಯಮ ಕಟ್ಟಿದವರು. ಸಾಕ್ಷಿ, ಬರೋಬ್ಬರಿ 12 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಊಟ ವಿತರಣಾ ಸೇವೆಯಾದ ಸಂಸ್ಥೆಯನ್ನು ಸ್ಥಾಪಿಸಿದರು.
ಸಾಕ್ಷಿ ಫೆಬ್ರವರಿ 2021 ರಲ್ಲಿ ಲಂಡನ್‌ನಲ್ಲಿ FoodHakನ್ನು ಸ್ಥಾಪಿಸಿದರು. ಅವರು ಭಾರತೀಯ ಬಿಲಿಯನೇರ್ ಸುನಿಲ್ ಮಿತ್ತಲ್ ಅವರ ಸೊಸೆ. ಫೋರ್ಬ್ಸ್ ಪ್ರಕಾರ ಸಾಕ್ಷಿ ಛಾಬ್ರಾ ಮಿತ್ತಲ್, ಏಪ್ರಿಲ್ 2ರ ಹೊತ್ತಿಗೆ 76730 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಸಾಕ್ಷಿ, ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಿಂದ ಜೈವಿಕ ತಂತ್ರಜ್ಞಾನದಲ್ಲಿ ವಿಜ್ಞಾನದಲ್ಲಿ (BSc) ಪದವಿ ಪಡೆದಿದ್ದಾರೆ. ವಾರ್ಟನ್ ಸ್ಕೂಲ್ (MBA) ನ ಹಳೆಯ ವಿದ್ಯಾರ್ಥಿಯೂ ಆಗಿದ್ದಾರೆ. ಫಿಜರ್ ಮತ್ತು ಲಂಡನ್ ಮೂಲದ EPIC ಪ್ರೈವೇಟ್ ಇಕ್ವಿಟಿ ಸೇರಿದಂತೆ ಹಲವಾರು ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.
ಪದವಿಯ ನಂತರ, ಆರಂಭಿಕ ಹಂತದ ಟೆಕ್ VCಗೆ ಸೇರಿದರು. ಅಲ್ಲಿ ಬ್ಯಾಬಿಲೋನ್, ಡೆಲಿವೆರೂ ಮತ್ತು ಡಾರ್ಕ್ಟ್ರೇಸ್‌ನಲ್ಲಿ ಹೂಡಿಕೆ ಮಾಡಿದರು. ನಂತರ ಆಕೆಯನ್ನು ಸಿಲಿಕಾನ್ ವ್ಯಾಲಿಯಲ್ಲಿರುವ ಸಾಫ್ಟ್‌ಬ್ಯಾಂಕ್‌ಗೆ ಸೇರಲು ಆಹ್ವಾನಿಸಲಾಯಿತು.
ಭಾರತಿ ಗ್ಲೋಬಲ್ ನಡೆಸುತ್ತಿರುವ ಶ್ರವಿನ್ ಮಿತ್ತಲ್ ಅವರನ್ನು ಸಾಕ್ಷಿ ವಿವಾಹವಾಗಿದ್ದಾರೆ. ದಂಪತಿಗಳು ದೆಹಲಿಯ ಬ್ರಿಟಿಷ್ ಶಾಲೆಯಲ್ಲಿ ಬ್ಯಾಚ್‌ಮೇಟ್‌ಗಳಾಗಿದ್ದರು. ಇಬ್ಬರೂ 2015ರಲ್ಲಿ ವಿವಾಹವಾದರು.
ಸಾಕ್ಷಿ, ತನ್ನ ಮೊದಲ ಗರ್ಭಾವಸ್ಥೆಯಲ್ಲಿ ಅಪರೂಪದ ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿದ್ದರು. ಈ ಸಂದರ್ಭದಲ್ಲಿ ಸಸ್ಯ ಆಧಾರಿತ ಆಯುರ್ವೇದ ಆಹಾರಕ್ರಮಕ್ಕೆ ಔಷಧದ ರೂಪವಾಗಿ ಬದಲಾಯಿತು. ಆಹಾರವು ಸಾಕ್ಷಿಯ ಅನಾರೋಗ್ಯವನ್ನು ಹಿಮ್ಮೆಟ್ಟಿಸಿತು. ಆರೋಗ್ಯದಿಂದ ಓಡಾಡುವಂತೆ ಮಾಡಿತು.
ಇದು ಸಾಕ್ಷಿ ಮಿತ್ತಲ್‌ಗೆ ಆಹಾರ ಸೇವೆಯಾದ ಫುಡ್‌ಹಾಕ್‌ನ ಕಲ್ಪನೆಯನ್ನು ನೀಡಿತು. ಸದ್ಯ ಫುಡ್ ಹಾಕ್ ಆರೋಗ್ಯಕರ ಆಹಾರವನ್ನು ಎಲ್ಲರಿಗೂ ದೊರೆಯುವಂತೆ ಮಾಡುತ್ತಿದೆ.