ಮಸಾಲೆ ಆಹಾರ ತಿಂದು ಯೋನಿ ಉರಿ ಹೆಚ್ಚಾಗಿದ್ಯಾ? ಪರಿಹಾರ ಇಲ್ಲಿದೆ ನೋಡಿ

First Published | Mar 30, 2024, 5:02 PM IST

ಮಹಿಳೆಯರಲ್ಲಿ ಮಸಾಲೆಯುಕ್ತ ಅಥವಾ ಸ್ಪೈಸಿ ಆಹಾರಗಳು ಪೆಲ್ವಿಕ್ ನೋವು ಸೇರಿದಂತೆ ಯೋನಿ ಉರಿಗೆ ಕಾರಣವಾಗಬಹುದು. ಈ, ಮಸಾಲೆಯುಕ್ತ ಆಹಾರದ ಸೇವನೆಯು ಪೆಲ್ವಿಕ್ ನೋವು ಮತ್ತು ಯೋನಿ ಉರಿಯನ್ನು ಏಕೆ ಉಂಟುಮಾಡುತ್ತದೆ ಎಂಬುದರ ಬಗ್ಗೆ ಇಂದು ನಾವು ಮಾತನಾಡೋಣ?
 

ಮಸಾಲೆಗಳು ಅನೇಕ ಭಕ್ಷ್ಯಗಳ(spicy food) ಪ್ರಮುಖ ಭಾಗ. ಭಾರತೀಯ ಪಾಕಪದ್ಧತಿಯಿಂದ ಮೆಕ್ಸಿಕನ್ ಸಾಲ್ಸಾವರೆಗೆ, ಮಸಾಲೆಗಳು ಯಾವುದೇ ಊಟವನ್ನು ಹೆಚ್ಚು ವಿಶೇಷ ಮತ್ತು ರುಚಿಕರವನ್ನಾಗಿ ಮಾಡುತ್ತದೆ. ಆದರೆ ಮಸಾಲೆಯುಕ್ತ ಆಹಾರ ಆರೋಗ್ಯಕರವಾಗಿದ್ದರೂ, ಅವು ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟುಮಾಡಬಹುದು. ಮಸಾಲೆಯುಕ್ತ ಆಹಾರ ಕೆಲವು ಜನರ ಜೀರ್ಣಾಂಗ ವ್ಯವಸ್ಥೆ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಬೀರುತ್ತದೆ, ಇದು  ಹೃದಯ ಮತ್ತು ಮೂತ್ರಪಿಂಡಗಳ ಮೇಲೆ ಸಹ ಪರಿಣಾಮ ಬೀರುತ್ತಾರೆ. ಇವೆಲ್ಲದರ ಜೊತೆಗೆ, ಮಹಿಳೆಯರಲ್ಲಿ ಮಸಾಲೆಯುಕ್ತ ಆಹಾರವು ಪೆಲ್ವಿಕ್ ನೋವು (Pelvic Pain) ಸೇರಿದಂತೆ ಯೋನಿ ಉರಿಗೆ ಕಾರಣವಾಗಬಹುದು. ಮಸಾಲೆಯುಕ್ತ ಆಹಾರದ ಸೇವನೆಯು ಪೆಲ್ವಿಕ್ ನೋವು (pelvic pain)ಮತ್ತು ಯೋನಿ ಉರಿಯನ್ನು ಏಕೆ ಉಂಟುಮಾಡುತ್ತದೆ ಎಂಬುದರ ಬಗ್ಗೆ ತಿಳಿಯೋಣ.

ಪಕೋಡಾ ಮತ್ತು ಚಾಟ್ ನಂತಹ ಮಸಾಲೆಯುಕ್ತ ಆಹಾರಗಳು ತಿನ್ನೋದಕ್ಕೆ ತುಂಬಾ ಮಜವಾಗಿರುತ್ತೆ, ಆದರೆ ಅವು ನಿಮ್ಮ ಯೋನಿಯ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಏಕೆಂದರೆ ಮಸಾಲೆಯುಕ್ತ ಆಹಾರವನ್ನು ಅತಿಯಾಗಿ ಸೇವಿಸುವುದರಿಂದ ಯೋನಿಯ ಪಿಎಚ್ ಮಟ್ಟವು ಕಡಿಮೆಯಾಗುತ್ತದೆ ಮತ್ತು ಸಮತೋಲನವನ್ನು ತೊಂದರೆಗೊಳಿಸುತ್ತದೆ, ಇದರಿಂದಾಗಿ ಯೋನಿ ಕಿರಿ ಕಿರಿ, ಯೋನಿ ಇನ್ ಫೆಕ್ಷನ್ (vaginal infection)ಉಂಟಾಗುವ ಸಾಧ್ಯತೆ ಇದೆ. 
 

Latest Videos


ಮಸಾಲೆಯುಕ್ತ ಆಹಾರಗಳು ಮೂತ್ರಕೋಶ ಮತ್ತು ಮೂತ್ರದ ಒಳಪದರಗಳನ್ನು ಕಿರಿಕಿರಿಗೊಳಿಸಬಹುದು. ಕ್ಯಾಪ್ಸೈಸಿನ್ ಸಂಯುಕ್ತವು ಮೆಣಸಿನಕಾಯಿಯನ್ನು ಖಾರವಾಗಿಸುತ್ತದೆ, ಇದು ಕಿರಿಕಿರಿಯನ್ನು ಮತ್ತಷ್ಟು ಪ್ರಚೋದಿಸುತ್ತದೆ. ಇವುಗಳ ಅತಿಯಾದ ಸೇವನೆಯು ಮೂತ್ರಕೋಶ ಮತ್ತು ಮೂತ್ರನಾಳದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ, ಇದು ಪೆಲ್ವಿಕ್ ನೋವು (pelvic pain) ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.

ಎರಡನೆಯ ಕಾರಣವೆಂದರೆ ಮಸಾಲೆಯುಕ್ತ ಆಹಾರಗಳು ಜಠರಗರುಳಿನ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ, ನಿಮ್ಮ ದೇಹವು ಆಹಾರವನ್ನು ವಿಭಜಿಸಲು ಹೊಟ್ಟೆಯಲ್ಲಿ ಹೆಚ್ಚಿನ ಆಮ್ಲವನ್ನು ಉತ್ಪಾದಿಸುತ್ತದೆ. ಇದು ಆಸಿಡ್ ರಿಫ್ಲಕ್ಸ್ ಗೆ (acid reflex) ಕಾರಣವಾಗಬಹುದು, ಇದು ಪೆಲ್ವಿಕ್ ಪ್ರದೇಶದಲ್ಲಿ ನೋವು ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಹೆಚ್ಚುವರಿಯಾಗಿ, ಮಸಾಲೆಯುಕ್ತ ಆಹಾರಗಳು ಅತಿಸಾರ ಅಥವಾ ಮಲಬದ್ಧತೆಗೆ ಕಾರಣವಾಗಬಹುದು, ಇದು ಪೆಲ್ವಿಕ್ ನೋವಿಗೆ ಕಾರಣವಾಗಬಹುದು. ಅದೇ ಸಮಯದಲ್ಲಿ, ಈ ಎಲ್ಲಾ ಅಂಶಗಳು ಯೋನಿ ಉರಿಯಿಗೆ ಕಾರಣವಾಗುತ್ತವೆ.
 

ಸಾಕಷ್ಟು ನೀರು ಕುಡಿಯಿರಿ
ಮಸಾಲೆಯುಕ್ತ ಆಹಾರದಿಂದಾಗಿ ಯೋನಿ ಉರಿಯುತ್ತಿದ್ದರೆ,  ನೀವು ಸಾಕಷ್ಟು ನೀರು ಕುಡಿಯಬೇಕು. ಸಾಕಷ್ಟು ನೀರು ಕುಡಿಯುವುದರಿಂದ (drink water) ಹೊಟ್ಟೆ ತಂಪಾಗುತ್ತದೆ ಮತ್ತು ಆಗಾಗ್ಗೆ ಮೂತ್ರ ವಿಸರ್ಜಿಸಲು ಅನುವು ಮಾಡಿಕೊಡುತ್ತದೆ, ಇದು ಯೋನಿ ಉರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ನೀರನ್ನು ಕುಡಿಯೋ ಮೂಲಕ, ಯೋನಿ ಉರಿಯನ್ನು ಕಡಿಮೆ ಮಾಡಬಹುದು. 

ತಂಪಾದ ಮತ್ತು ಹೈಡ್ರೇಟಿಂಗ್ ಡ್ರಿಂಕ್ಸ್ ಸೇವಿಸಿ
ಮಸಾಲೆಯುಕ್ತ ಆಹಾರ ತಿಂದ ನಂತರ ಯೋನಿ ಉರಿಯುವುದನ್ನು ತಪ್ಪಿಸಲು ನೀವು ಬಯಸಿದರೆ, ಮೊದಲನೆಯದಾಗಿ ನಿಮ್ಮ ಹೊಟ್ಟೆಗೆ ಸಾಕಷ್ಟು ತಂಪನ್ನು ನೀಡಿ. ಇದಕ್ಕಾಗಿ, ಎಳನೀರು, ನಿಂಬೆರಸ, ಸೌತೆಕಾಯಿ ರಸ, ಕಲ್ಲಂಗಡಿ ರಸ ಮುಂತಾದ ಹೈಡ್ರೇಟಿಂಗ್ (hydrating) ಮತ್ತು ತಂಪು ಪಾನೀಯಗಳನ್ನು ತೆಗೆದುಕೊಳ್ಳಿ. ಇದು ಹೊಟ್ಟೆ ತಂಪು ಮಾಡುತ್ತೆ. ನೀವು ಮೂತ್ರ ವಿಸರ್ಜಿಸುವಾಗ ಕಿರಿಕಿರಿ ಕಡಿಮೆಯಾಗುತ್ತದೆ. ಈ ತಂಪು ಪಾನೀಯಗಳನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸುವುದರಿಂದ ಉತ್ತಮ ಅನುಭವ ಉಂಟಾಗುತ್ತೆ.
 

ತಂಪು ವಸ್ತು ಬಳಸಿ
ಯೋನಿಯಲ್ಲಿ ನೀವು ಹೆಚ್ಚು ಕಿರಿಕಿರಿಯನ್ನು ಅನುಭವಿಸುತ್ತಿದ್ದರೆ, ಯೋನಿಯನ್ನು ತಂಪಾದ ವಸ್ತುವನ್ನು ಬಳಸಿ ಕೂಲ್ ಆಗಿರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ, ನೀವು ಹತ್ತಿ ಬಟ್ಟೆಯನ್ನು ತಣ್ಣೀರಿನಲ್ಲಿ ಒದ್ದೆ ಮಾಡಿ ಅದನ್ನು ಯೋನಿ ಮೇಲೆ ಇಡಬಹುದು. ಇದಲ್ಲದೆ, ಐಸ್ ಪ್ಯಾಕ್ ಬಳಸಬಹುದು. ಆದರೆ ಐಸ್ ಪ್ಯಾಕ್ ಅನ್ನು ಹತ್ತಿ ಬಟ್ಟೆಯಲ್ಲಿ ಸುತ್ತಲು ಮರೆಯಬೇಡಿ, ಇಲ್ಲದಿದ್ದರೆ ಅದು ಯೋನಿಯ ಚರ್ಮವನ್ನು ಸುಡಬಹುದು ಹುಷಾರು.

ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿ
ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸಿದ್ರೆ, ಜೊತೆಗೆ ನಿಮಗೆ ಮಲಬದ್ಧತೆ (constipation), ಆಮ್ಲೀಯತೆ ಮುಂತಾದ ಜೀರ್ಣಕಾರಿ ಸಮಸ್ಯೆ ಇದ್ರೆ ಮತ್ತು ಯೋನಿಯಲ್ಲಿ ಕಿರಿಕಿರಿಯನ್ನು ಹೊಂದಿದ್ದರೆ, ಮೊದಲು ನೀವು ನಿಮ್ಮ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡೋ ಬಗ್ಗೆ ಗಮನ ಹರಿಸಬೇಕು. ಜೀರ್ಣಕ್ರಿಯೆ ಮತ್ತು ಸಕ್ರಿಯವಾಗಿರುವುದರಿಂದ, ಯೋನಿ ಉರಿಯನ್ನು ಕಡಿಮೆ ಮಾಡಬಹುದು.

click me!