ಭಾರತದ ಅತ್ಯಂತ ಉದಾರ ಮಹಿಳೆ, ಕೊಡುಗೈ ದಾನಿ ನೀತಾ ಅಂಬಾನಿ, ಸುಧಾ ಮೂರ್ತಿ ಅಲ್ಲ!

First Published | Nov 3, 2023, 9:28 AM IST

ಭಾರತದಲ್ಲಿ ಹಲವಾರು ಬಿಲಿಯನೇರ್‌ಗಳಿದ್ದಾರೆ. 2023ರ ಹುರುನ್‌ ಇಂಡಿಯಾ ಲಿಸ್ಟ್‌ ಹಲವಾರು ಶ್ರೀಮಂತರನ್ನು ಗುರುತಿಸಿದೆ. ಇದರಲ್ಲಿ ಮುಕೇಶ್ ಅಂಬಾನಿ, ಅದಾನಿ ಮೊದಲಾದವರಿದ್ದಾರೆ. ಆದರೆ ಹುರುನ್ ಇಂಡಿಯಾದ ಪ್ರಕಾರ, ಇಂಡಿಯಾದ ಟಾಪ್‌ ಲಿಸ್ಟ್‌ನಲ್ಲಿರುವ ಲೋಕೋಪಕಾರಿ ಅಥವಾ ಸಮಾಜ ಸೇವಕ ಯಾರು ನಿಮ್ಗೆ ಗೊತ್ತಿದ್ಯಾ?

ಭಾರತದಲ್ಲಿ ಹಲವಾರು ಬಿಲಿಯನೇರ್‌ಗಳಿದ್ದಾರೆ. ದಿನವೊಂದಕ್ಕೆ ಕೋಟಿಗಟ್ಟಲೆ ದುಡಿಯುತ್ತಾರೆ. 2023ರ ಹುರುನ್‌ ಇಂಡಿಯಾ ಲಿಸ್ಟ್‌ ಹಲವಾರು ಶ್ರೀಮಂತರನ್ನು ಗುರುತಿಸಿದೆ. ಇದರಲ್ಲಿ ಮುಕೇಶ್ ಅಂಬಾನಿ, ಅದಾನಿ ಮೊದಲಾದವರಿದ್ದಾರೆ. ಆದರೆ ಹುರುನ್ ಇಂಡಿಯಾದ ಪ್ರಕಾರ, ಇಂಡಿಯಾದ ಟಾಪ್‌ ಲಿಸ್ಟ್‌ನಲ್ಲಿರುವ ಲೋಕೋಪಕಾರಿ ಅಥವಾ ಸಮಾಜ ಸೇವಕ ಯಾರು ನಿಮ್ಗೆ ಗೊತ್ತಿದ್ಯಾ?

2023ರ ಹುರುನ್‌ ಇಂಡಿಯಾದ ಅಗ್ರ ಲೋಕೋಪಕಾರಿ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದ ಏಕೈಕ ಮಹಿಳೆ ರೋಹಿಣಿ ನಿಲೇಕಣಿ. 64 ವರ್ಷ ವಯಸ್ಸಿನ ರೋಹಿಣಿ ನಿಲೇಕಣಿ, ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ 170 ಕೋಟಿ ರೂ. ಕೊಡುಗೆ ನೀಡಿದ್ದಾರೆ. ಅವರ ಸಂಗಾತಿ ಮತ್ತು ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರು ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.

Tap to resize

ಮಹಿಳಾ ಲೋಕೋಪಕಾರಿಯಾಗಿ ರೋಹಿಣಿ ನಿಲೇಕಣಿ ಅವರ ನಂತರದ ಸ್ಥಾನದಲ್ಲಿ ಅನು ಅಗಾ ಮತ್ತು ಥರ್ಮಾಕ್ಸ್ ಕುಟುಂಬ, 23 ಕೋಟಿ ರೂ. ಮತ್ತು USV ಯ ಲೀನಾ ಗಾಂಧಿ ತಿವಾರಿ ಅವರು FY23 ರಲ್ಲಿ 23 ಕೋಟಿ ರೂ. ಸಮಾಜ ಸೇವೆಗೆ ಕೊಡುಗೆ ನೀಡಿದ್ದಾರೆ. ಪರೋಪಕಾರಿ ಪ್ರತಿಷ್ಠಾನದ ಸದಸ್ಯರು ತಮ್ಮ ಸಂಪತ್ತಿನ ಬಹುಪಾಲು ಹಣವನ್ನು ದತ್ತಿ ಕಾರ್ಯಗಳಿಗೆ ದಾನ ಮಾಡುತ್ತಾರೆ.

ರೋಹಿಣಿ ನಿಲೇಕಣಿ ಯಾರು?
ರೋಹಿಣಿ ನಿಲೇಕಣಿ ಲೋಕೋಪಕಾರಿ ಪ್ರತಿಷ್ಠಾನದ ಪ್ರಸ್ತುತ ಮುಖ್ಯಸ್ಥೆ. ದತ್ತಿ ದಾನಿಯಾಗಿರುವ ರೋಹಿಣಿ ನಿಲೇಕಣಿ, ಲಾಭರಹಿತ ಶೈಕ್ಷಣಿಕ ವೇದಿಕೆ EkStep ಮತ್ತು ಮಕ್ಕಳ ಪುಸ್ತಕ ಕಂಪನಿ ಪ್ರಥಮ್ ಬುಕ್ಸ್ ಸಹ ಸ್ಥಾಪಿಸಿದರು.

ಶುದ್ಧ ನೀರು ಮತ್ತು ನೈರ್ಮಲ್ಯವನ್ನು ಉತ್ತೇಜಿಸುವ ರಾಷ್ಟ್ರೀಯ ಉಪಕ್ರಮಗಳಿಗೆ ಸಹಾಯ ಮಾಡಲು, ಅವರು ಅರ್ಘ್ಯಮ್ ಫೌಂಡೇಶನ್‌ನ್ನು ಸಹ ಸ್ಥಾಪಿಸಿದರು. 

ರೋಹಿಣಿ ಮುಂಬೈನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರು. ಆಕೆಯ ತಂದೆ ಇಂಜಿನಿಯರ್ ಆಗಿದ್ದರೆ, ತಾಯಿ ಗೃಹಿಣಿ. ರೋಹಿಣಿ, ಎಲ್ಫಿನ್‌ಸ್ಟೋನ್ ಕಾಲೇಜಿನಿಂದ ಫ್ರೆಂಚ್ ಸಾಹಿತ್ಯದಲ್ಲಿ ಪದವಿ ಪಡೆದರು. ರೋಹಿಣಿ ಮತ್ತು ನಂದನ್ ನಿಲೇಕಣಿ ಅವರು 1981ರಲ್ಲಿ ಇತರ ಆರು ಸಾಫ್ಟ್‌ವೇರ್ ಇಂಜಿನಿಯರ್‌ಗಳೊಂದಿಗೆ ಇನ್ಫೋಸಿಸ್ ಅನ್ನು ಸ್ಥಾಪಿಸಿದಾಗ ಮದುವೆಯಾದರು.

ವುಮೆನ್ಸ್ ವೆಬ್ ಪ್ರಕಾರ, ಕಂಪನಿಯಲ್ಲಿ ತನ್ನ ಎಲ್ಲಾ ಸಂಪನ್ಮೂಲಗಳನ್ನುಒಟ್ಟು 10,000 ರೂ.ಗಳನ್ನು ಹೂಡಿಕೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಇದರ ಪರಿಣಾಮವಾಗಿ, ಕಂಪನಿಯು ಅಸಾಧಾರಣ ಬೆಳವಣಿಗೆಯನ್ನು ಅನುಭವಿಸಿದಾಗ ಅವಳು ನಂದನ್‌ನಿಂದ ಸ್ವತಂತ್ರವಾಗಿ ಶ್ರೀಮಂತರಾದರು.

ರೋಹಿಣಿ ನಿಲೇಕಣಿ, ಸಂಪೂರ್ಣವಾಗಿ ತನ್ನ ಆದಾಯವನ್ನು ಗಳಿಸಲು ಕಂಪನಿಯಲ್ಲಿ ವೈಯಕ್ತಿಕ ಹೂಡಿಕೆಯನ್ನು ಹೇಗೆ ನಿರ್ವಹಿಸುತ್ತಿದ್ದಳು ಎಂಬುದನ್ನು ಇದು ವಿವರಿಸುತ್ತದೆ.

Latest Videos

click me!