ಮಹಿಳೆಯರಲ್ಲಿ ಆಯಾಸಕ್ಕೆ ಕಾರಣಗಳು ಯಾವುವು?: ಆಯಾಸಕ್ಕೆ ಮುಖ್ಯ ಕಾರಣ ಕಳಪೆ ಜೀವನಶೈಲಿ (poor lifestyle). ಇದರೊಂದಿಗೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ಪರಿಸ್ಥಿತಿಗಳನ್ನು ಸಹ ಸೇರಿವೆ. ಮಹಿಳೆಯರ ದೇಹದಲ್ಲಿ ವಿಟಮಿನ್-ಡಿ, ಕಬ್ಬಿಣ, ಪ್ರೋಟೀನ್ ಮತ್ತು ಕೊಬ್ಬಿನಂತಹ ಅನೇಕ ಅಗತ್ಯ ಪೋಷಕಾಂಶಗಳ ಕೊರತೆಯಿದೆ. ನಮ್ಮ ದೇಶದಲ್ಲಿ, ಮಹಿಳೆಯರು ಮಾಡಬೇಕಾದ ಕೆಲಸದ ಪ್ರಮಾಣ ಮತ್ತು ಅವರು ತಿನ್ನುವ ಆಹಾರದ ಪ್ರಕಾರ, ಅವರು ತುಂಬಾ ಕಷ್ಟಪಡುತ್ತಾರೆ. ಇದಕ್ಕೆ ಒಂದು ಕಾರಣವೆಂದರೆ ಕೆಟ್ಟ ನಿದ್ರೆ. ಅಷ್ಟೇ ಅಲ್ಲ ನೀವು ದೀರ್ಘಕಾಲದಿಂದ ನಿರ್ಜಲೀಕರಣದಿಂದ (dehydration) ಬಳಲುತ್ತಿದ್ದರೆ, ಸಮಸ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.