ಗಾರ್ಡನಿಂಗ್ ಮಾಡೋದ್ರಿಂದ ನಿಮಗೆ ಸಿಗೋ ಪ್ರಯೋಜನಗಳೇನು?

Published : Nov 08, 2024, 02:29 PM ISTUpdated : Nov 08, 2024, 02:33 PM IST

ನಾವು ಸಾಮಾನ್ಯವಾಗಿ ನೋಡಿರೋ ಹಾಗೆ ಹೆಚ್ಚಿನ ಜನರು ಇಷ್ಟಪಟ್ಟು ಮಾಡುವಂತಹ ಒಂದು ಕೆಲಸ ಅಂದ್ರೆ ಅದು ಗಾರ್ಡನಿಂಗ್. ಜನ ಹಲವು ಕಾರಣಗಳಿಂದ ಗಾರ್ಡನಿಂಗ್ ಮಾಡ್ತಾರೆ. ಮುಖ್ಯವಾಗಿ ಯಾವೆಲ್ಲಾ ಕಾರಣಗಳಿಂದ ಜನ ಗಾರ್ಡನಿಂಗ್ ಇಷ್ಟ ಪಡ್ತಾರೆ ನೋಡೋಣ.   

PREV
18
ಗಾರ್ಡನಿಂಗ್ ಮಾಡೋದ್ರಿಂದ ನಿಮಗೆ ಸಿಗೋ ಪ್ರಯೋಜನಗಳೇನು?

ಇದು ಬಜೆಟ್ ಫ್ರೆಂಡ್ಲಿಯಾಗಿದೆ (budget freiendly)
ಗಾರ್ಡನಿಂಗ್ ಅನ್ನು ಹವ್ಯಾಸವಾಗಿ ತೆಗೆದುಕೊಳ್ಳೋದಕ್ಕೆ ಮುಖ್ಯ ಕಾರಣವೆಂದರೆ ಅದು ಸೂಪರ್ ಬಜೆಟ್ ಫ್ರೆಂಡ್ಲಿಯಾಗಿದೆ. ಹೂವುಗಳು ಮತ್ತು ಸಸ್ಯಗಳು ಪ್ರಕೃತಿಯಲ್ಲಿ ಮುಕ್ತವಾಗಿ ಲಭ್ಯವಿದೆ. ಅವುಗಳನ್ನು ನಿಮ್ಮ ತೋಟದಲ್ಲಿ ಬೆಳೆಯಲು ಬೇಕಾಗಿರೋದು ಕಾಳಜಿ, ಸಮಯ ಮತ್ತು ಕೆಲವು ಪ್ರಯತ್ನಗಳು ಅಷ್ಟೇ. 

28

ಇದೊಂದು ನಿಧಾನವಾದ ಚಟುವಟಿಕೆಯಾಗಿದೆ. 
ತೋಟಗಾರಿಕೆ ಅನ್ನೋದು ಶಾಂತಿಯುತ ಚಟುವಟಿಕೆಯಾಗಿದೆ. ಕೆಲಸಗಳನ್ನು ಪೂರ್ಣಗೊಳಿಸಲು ಯಾವುದೇ ಅವಸರವಿಲ್ಲ, ಹಿನ್ನೆಲೆಯಲ್ಲಿ ದೊಡ್ಡ ಮ್ಯೂಸಿಕ್ ಇರೋದಿಲ್ಲ, ಹೆಚ್ಚು ಖರ್ಚಾಗುವ ಭಯ ಕೂಡ ಇಲ್ಲ. ಇದು ನಿಮಗೆ ವಿಶ್ರಾಂತಿ ನೀಡುತ್ತದೆ, ಪ್ರಕೃತಿ ಜೊತೆ ಕನೆಕ್ಟ್ ಆಗೋದಕ್ಕೆ ಸಹಾಯ ಮಾಡುತ್ತೆ. 

38


ಫಿಸಿಕಲ್ ಆಗಿ ಆಕ್ಟೀವ್ ಆಗಿರಿಸುತ್ತೆ
ಗೇಮ್ ಇಂಟರ್ನೆಟ್ ಅಂತ ಒಂದೇ ಕಡೆ ಕೂತ್ರೆ, ನಿಮಗೆ ಸಮಸ್ಯೆಗಳು ಕಾಡೋದಕ್ಕೆ ಶುರು ಮಾಡುತ್ತೆ, ಆದರೆ ತೋಟಗಾರಿಕೆಯಿಂದಾಗಿ ನೀವು ಫಿಸಿಕಲಿ ಆಕ್ಟೀವ್ (physically active ) ಆಗಿರಬೇಕು. ಅದು ಕೇವಲ ಸಸ್ಯಗಳಿಗೆ ನೀರುಣಿಸುವುದು, ಅಥವಾ ಮಣ್ಣನ್ನು ಅಗೆಯುವುದು ಮತ್ತು ಕಳೆ ತೆಗೆಯುವುದು ಮಾತ್ರ ಅಲ್ಲ, ನೀವು ಪ್ರತಿ ಬಾರಿ ನಿಮ್ಮ ತೋಟವನ್ನು ಪ್ರವೇಶಿಸಿದಾಗಲೆಲ್ಲಾ ನೀವು ಕೆಲವು ದೈಹಿಕ ಚಟುವಟಿಕೆಗಳನ್ನು ಪಡೆಯುತ್ತೀರಿ.

48

ಪ್ರಕೃತಿ ಜೊತೆ ಕನೆಕ್ಟ್ ಆಗಬಹುದು
ತೋಟಗಾರಿಕೆ ಜನರಿಗೆ ಪ್ರಕೃತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯೋದಕ್ಕೆ ಸಹಾಯ ಮಾಡುತ್ತೆ. ಗಾರ್ಡನ್ ನಲ್ಲಿ, ಹೂವುಗಳು, ಸಸ್ಯಗಳು ಮತ್ತು ಮರಗಳ ನಡುವೆ ಸಮಯ ಕಳೆದಾಗ, ನೀವು ತಾಜಾ ಗಾಳಿಯ ವಾಸನೆಯನ್ನು ಪಡೆಯುತ್ತೀರಿ, ಎಲ್ಲವನ್ನೂ ನಿಧಾನವಾಗಿ ಮತ್ತು ಶಾಂತವಾಗಿ ಅನುಭವಿಸುತ್ತೀರಿ. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಚೆನ್ನಾಗಿರುತ್ತೆ. 

58

ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು
ತೋಟಗಾರಿಕೆ ಮಾನಸಿಕ ಆರೋಗ್ಯವನ್ನು (Mental health) ಸುಧಾರಿಸುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಸಸ್ಯಗಳ ಸುತ್ತಲೂ ಇರುವುದು, ಅವು ಬೆಳೆಯುವುದನ್ನು ನೋಡುವುದು ಮತ್ತು ಅವುಗಳನ್ನು ನೋಡಿಕೊಳ್ಳುವುದು ಜನರಿಗೆ ಸಾಧನೆ ಮತ್ತು ಸಾಂತ್ವನದ ಭಾವನೆಯನ್ನು ನೀಡುತ್ತದೆ. 

68

ತಾಜಾ ಗಿಡಮೂಲಿಕೆಗಳು, ತರಕಾರಿಗಳು ಮತ್ತು ಹಣ್ಣುಗಳು
ಸಣ್ಣ ಬಾಲ್ಕನಿ ಗಾರ್ಡನಿಂಗ್ ಬದಲು ಮನೆಯಲ್ಲಿ ಉದ್ಯಾನವನ್ನು ಬೆಳೆಸಲು ಆಯ್ಕೆ ಮಾಡುವ ಜನರು ತಮ್ಮ ಕಠಿಣ ಪರಿಶ್ರಮದಿಂದಾಗಿ ಗಿಡ ಮೂಲಿಕೆ, ಹಣ್ಣುಗಳು, ತರಕಾರಿಗಳನ್ನು ಸಹ ಬೆಳೆಯಬಹುದು. ಸುವಾಸನೆಯುಕ್ತ ಪುದೀನಾ ಎಲೆಯಿಂದ ಹಿಡಿದು, ಕ್ಯಾರೆಟ್ ವರೆಗೆ, ಎಲ್ಲವನ್ನೂ ತೋಟಗಳಲ್ಲಿ ಬೆಳೆಸಬಹುದು. 

78

ಗಾರ್ಡನಿಂಗ್ ಅನ್ನೋದು ಪರಿಸರಕ್ಕೆ ನೀವು ನೀಡುವ ಕೊಡುಗೆ
ಹೌದು ಗಾರ್ಡನಿಂಗ್ ಮಾಡೋದು ಪರಿಸರಕ್ಕೆ ನೀವು ನೀಡುವ ಅದ್ಭುತವಾದ ಕೊಡುಗೆಯಾಗಿದೆ. ನೀವು ಕೇವಲ ಹವ್ಯಾಸವನ್ನು ಉತ್ತೇಜಿಸುತ್ತಿಲ್ಲ ಅಥವಾ ಸಮಯವನ್ನು ಕಳೆಯುತ್ತಿಲ್ಲ, ನೀವು ನೆಡುವ ಗಿಡಗಳು ಒಳ್ಳೆಯ ಗಾಳಿ, ಚಿಟ್ಟೆ, ಪಕ್ಷಿಗಳಿಗೆ ಹೀರಲು ಮಕರಂದ ಎಲ್ಲವನ್ನೂ ನೀಡುತ್ತೆ. 

88

ಖುಷಿಯಾಗಿರೋದಕ್ಕೆ ಸಹಾಯ ಮಾಡುತ್ತೆ
ನೀವು ನೆಟ್ಟು ಬೆಳೆಸಿದ ತೋಟದಲ್ಲಿ ಗಿಡಗಳು  ಬೆಳೆಯುವುದನ್ನು ನೋಡುವುದು,  ಕಳೆ ತೆಗೆಯುವುದು, ಗಿಡ ಕತ್ತರಿಸೋದು, ಮತ್ತೆ ಗಿಡ ನೆಡೋದು, ಹೂವುಗಳು ಅರಳುವುದನ್ನು ನೋಡುವುದು, ಹಣ್ಣುಗಳನ್ನು ಸವಿಯೋದು ಎಲ್ಲವೂ ನಿಮಗೆ ಸಂತೋಷವನ್ನು ನೀಡುತ್ತೆ. 

click me!

Recommended Stories