Smuggling Connection: ಲೇಡಿ ಪೋಲೀಸ್ ಮದುವೆಗೂ 10 ದಿನ ಮುನ್ನ ಸಸ್ಪೆಂಡ್

First Published | Nov 27, 2021, 6:20 PM IST

10 ಲಕ್ಷ ಲಂಚ ಪಡೆದು ಕಳ್ಳರನ್ನು ಪರಾರಿ ಮಾಡಿದ ಪ್ರಕರಣದಲ್ಲಿ ರಾಜಸ್ಥಾನ (Rajasthan) ಪೊಲೀಸ್ (Police) ಡಿಪಾರ್ಟ್‌ಮೆಂಟ್‌ನಿಂದ ವಜಾಗೊಂಡಿದ್ದ (Suspend) ಲೇಡಿ ಇನ್ಸ್‌ಪೆಕ್ಟರ್ (inspector) ಸೀಮಾ ಜಾಖರ್(Seema Jkhar) ಸಖತ್‌ ಸದ್ದು ಮಾಡುತ್ತಿದ್ದಾರೆ. ಕಾರಣ ಅವರು ನವೆಂಬರ್ 28 ರಂದು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಇವರ ಮದುವೆ ಮತ್ತು ಫೋಟೋಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಕಾಮೆಂಟ್‌ಗಳು ಬರುತ್ತಿವೆ. ಕೆಲವರು ವಧು ಆಗುವ ಮೊದಲೇ ಮೇಡಂ ಜೀ ಕುಖ್ಯಾತರಾದರು ಎಂದು ಕಾಮೆಂಟ್‌ ಮಾಡಿದ್ದಾರೆ. ಕಳ್ಳಸಾಗಾಣಿಕೆದಾರರೊಂದಿಗಿನ ಆಕೆಯ ಸಂಪರ್ಕ ಬಯಲಿಗೆ ಬಂದ ನಂತರ ಲೇಡಿ ಇನ್ಸ್‌ಪೆಕ್ಟರ್ ಸೀಮಾ ಜಾಖರ್ ರಾಜಸ್ಥಾನದಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿದ್ದಾರೆ. 

ಸಿರೋಹಿಯ ಬರ್ಲುಟ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೀಮಾ ಜಖರ್ ಅವರು ಕಳ್ಳಸಾಗಣೆದಾರರೊಂದಿಗೆ ಸಹಕರಿಸಿದ್ದಕ್ಕಾಗಿ ಅಮಾನತುಗೊಂಡಿದ್ದಾರೆ. ಮಹಿಳಾ ಇನ್ಸ್‌ಪೆಕ್ಟರ್ ಹುದ್ದೆಯಲ್ಲಿರುವಾಗಲೇ, ಸೀಮಾ ಜಖರ್‌ ಅವರು 10 ದಿನಗಳ ಹಿಂದೆ ಸಿಕ್ಕಿಬಿದ್ದಿದ್ದ ಕಳ್ಳಸಾಗಣೆದಾರನನ್ನು 10 ಲಕ್ಷ ರೂಪಾಯಿ ಲಂಚ ಪಡೆದು ಪರಾರಿಯಾಗುವಂತೆ ಸಹಾಯ ಮಾಡಿದ್ದಾರೆ ಮತ್ತು ಪೊಲೀಸ್ ಠಾಣೆಯ ಜೀಪ್ ಬಿಟ್ಟು ತಮ್ಮ ವೈಯಕ್ತಿಕ ಬಲೆನೊ ಕಾರಿನ ಮೂಲಕ ದುಷ್ಕರ್ಮಿಗಳನ್ನು ಪರಾರಿಯಾಗಲು ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳಾ ಎಸ್‌ಎಚ್‌ಒ ಸೀಮಾ ಜಾಖರ್ ವಾಟ್ಸ್‌ಆ್ಯಪ್ ಕರೆಯಲ್ಲಿ ಕಳ್ಳಸಾಗಣೆದಾರರೊಂದಿಗೆ ಸಂಪೂರ್ಣ ಡೀಲ್ ಮಾಡಿರುವುದು ಪೊಲೀಸ್ ಇಲಾಖೆಯ ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಹಿಡಿಯಲು ಅಧಿಕಾರಿಗಳು ಅವರನ್ನು ಕಳುಹಿಸಿದ್ದರು, ಆದರೆ ಕ್ರಮ ಕೈಗೊಳ್ಳುವ ಬದಲು ಮೇಡಂ ಬಾರ್ಮರ್‌ನಲ್ಲಿ ಕುಳಿತಿರುವ ಕಳ್ಳಸಾಗಣೆದಾರರ ಕಿಂಗ್‌ಪಿನ್ ಅನ್ನು ಸಂಪರ್ಕಿಸಿ 10 ಲಕ್ಷ ರೂ.ಗೆ ಡೀಲ್ ಮಾಡಿದ್ದಾರೆ.

Tap to resize

ಆದರೆ, ಇಲಾಖೆಯ ಹಿರಿಯ ಅಧಿಕಾರಿಗಳು ಇದರ ಮೇಲೆ ನಿಗಾ ಇಟ್ಟಿದ್ದರು. ಸಿರೋಹಿ ಎಸ್ಪಿ ಧರ್ಮೇಂದ್ರ ಸಿಂಗ್ ಅವರು ಬಾರ್ಲುಟ್ ಎಸ್‌ಎಚ್‌ಒ ಸೀಮಾ ಜಖರ್ ಅವರ ಮೇಲೆ ಕ್ರಮ ಕೈಗೊಂಡು ಅವರನ್ನು ಪೊಲೀಸ್ ಕೆಲಸದಿಂದ ವಜಾ ಗೊಳಿಸಿದ್ದಾರೆ.

ಕಳ್ಳಸಾಗಾಣಿಕೆದಾರನೊಂದಿಗೆ ಲಂಚವನ್ನು ತೆಗೆದುಕೊಳ್ಳುವ ಮೂಲಕ ರಾಜಸ್ಥಾನ ಪೊಲೀಸರು ಕುಖ್ಯಾತಿಯಾಗಿದ್ದಾರೆ ಮಹಿಳಾ ಇನ್ಸ್‌ಪೆಕ್ಟರ್ ಜೊತೆಗೆ ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಮೂವರು ಕಾನ್‌ಸ್ಟೆಬಲ್‌ಗಳನ್ನುಸಹ ಸರಕಾರ ಪೊಲೀಸ್ ಸೇವೆಯಿಂದ ಅಮಾನತುಗೊಳಿಸಿದೆ. ಈ ಪ್ರಕರಣದಿಂದ ಪೊಲೀಸ್ ಇಲಾಖೆಯ ಇಮೇಜ್‌ಗೆ ಸಾಕಷ್ಟು ಧಕ್ಕೆಯಾಗಿದೆ ಮತ್ತು ಇದನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಬೇರೆ ಪೊಲೀಸರು ತಪ್ಪಿತಸ್ಥರೆಂದು ಕಂಡುಬಂದರೆ, ಅವರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಸಿಂಗ್ ಯಾದವ್ ಹೇಳಿದ್ದಾರೆ.

ಲೇಡಿ ಇನ್ಸ್‌ಪೆಕ್ಟರ್ ಸೀಮಾ ಜಾಖರ್ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾನು ನಿರಪರಾಧಿ, ಪೊಲೀಸ್ ಇಲಾಖೆಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ನಾನು ಯಾವುದೇ ರೀತಿಯಲ್ಲಿ ಕಳ್ಳಸಾಗಣೆದಾರರೊಂದಿಗೆ ವ್ಯವಹರಿಸಿಲ್ಲ. ಇಲಾಖೆಯಲ್ಲಿ ಈ ವ್ಯವಹಾರದ ಸಿಸಿಟಿವಿ ಇದ್ದರೆ, ಅದನ್ನು ಸಾರ್ವಜನಿಕರ ಮುಂದೆ ತರಬೇಕು. ಇದರಿಂದ ಸರಿಯಾದದ್ದು ತಿಳಿಯಬಹುದು ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. 

ಸೀಮಾ ಜಾಖರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತನ್ನನ್ನು ಲೇಡಿ ಸಿಂಗಮ್ ಎಂದು ಹೇಳಿಕೊಂಡಿದ್ದಾರೆ. ಅವರು ಪ್ರತಿದಿನ ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಮ್‌ಗೆ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅವರ ಸಾಮಾಜಿಕ ಖಾತೆಯಲ್ಲಿ ಸಾಕಷ್ಟು ಫೋಟೋಗಳಿವೆ. ಅವರು Instagram ನಲ್ಲಿ 45 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಮಾಹಿತಿ ಪ್ರಕಾರ, SHO ಮೇಡಂ ತನ್ನ ಮದುವೆಗೆ ಬಹಳ ಹಿಂದೆಯೇ ದುಬಾರಿ ಮತ್ತು ಡಿಸೈನರ್‌ ಬಟ್ಟೆಗಳನ್ನು ಖರೀದಿಸಿದ್ದರು. ಅವರ ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ಬಯಸಿದ್ದರು. ಅಷ್ಟೇ ಅಲ್ಲ ಮದುವೆಗೆ ದುಬಾರಿ ಫಾರ್ಮ್‌, ಹೋಟೆಲ್ ಬುಕ್ಕಿಂಗ್ ಕೂಡ ನಡೆದಿದೆ. ಆದರೆ ಮದುವೆಗೆ 10 ದಿನಗಳ ಮೊದಲು ಅವರು ಮಾಡಿದ ಹಗರಣ ಬೆಳಕಿಗೆ ಬಂತು.
 

ಅಮಾನತುಗೊಂಡ ಮಹಿಳಾ ಇನ್ಸ್‌ಪೆಕ್ಟರ್‌ನ ಭಾವಿ ಪತಿ ಕೋಚಿಂಗ್ ಸೆಂಟರ್‌ ನಡೆಸುತ್ತಿದ್ದಾರೆ. ಅದಕ್ಕಾಗಿ ಮಕ್ಕಳಿಗೆ ಅತಿ ಹೆಚ್ಚು ಫೀಸ್‌ ವಿಧಿಸಲಾಗುತ್ತದೆ. ಮೇಡಂ ಅವರ ಈ ಹಗರಣದ ನಂತರ ಅವರ ಮದುವೆ ಹೇಗೆ ನಡೆಯುತ್ತದೆ ಎಂಬುದನ್ನು ಈಗ ನೋಡಬೇಕು. ಅವರ ಮದುವೆಯ ಬಗ್ಗೆಯೂ ಸಾಕಷ್ಟು  ಚರ್ಚೆ ನಡೆಯುತ್ತದೆ. ಲಂಚದಿಂದ ಮದುವೆಗೂ ತೊಂದರೆ ಆಗಬಹುದು ಎಂದು  ಹೇಳಲಾಗುತ್ತಿದೆ. 

Latest Videos

click me!