ಅವಕಾಡೊ (avocado)
ಅವಕಾಡೊದಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ವಿಟಮಿನ್ ಬಿ, ಸಿ, ಫೋಲೇಟ್, ಮೆಗ್ನೀಸಿಯಮ್, ಉತ್ತಮ ಕೊಬ್ಬು, ಬೀಟಾ ಕ್ಯಾರೋಟಿನ್ ಮತ್ತು ಆಂಟಿಆಕ್ಸಿಡೆಂಟ್ ಗಳಂತಹ ಅನೇಕ ಗುಣಗಳನ್ನು ಹೊಂದಿದೆ, ಇದು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ.
50 ವರ್ಷದ ನಂತರ ಅವಕಾಡೊವನ್ನು ನಿಯಮಿತವಾಗಿ ಸೇವಿಸಬೇಕು, ಇದು ಚರ್ಮವನ್ನು ಮತ್ತಷ್ಟು ಹೊಳೆಯುವಂತೆ ಮಾಡುತ್ತದೆ ಮತ್ತು ಸುಕ್ಕುಗಳನ್ನು ಸಹ ತೆಗೆದುಹಾಕಬಹುದು. ಇದು ಚರ್ಮವನ್ನು ಬಿಗಿ ಗೊಳಿಸಲು ಸಹಾಯ ಮಾಡುತ್ತದೆ. ದಿನದ ಯಾವುದೇ ಸಮಯದಲ್ಲಿ ಆವಕಾಡೊ ಸೇವಿಸಬಹುದು. ಕೇವಲ ಆವಕಾಡೊ ದೈನಂದಿನ ಪೌಷ್ಟಿಕಾಂಶದ ಕೊರತೆಯನ್ನು ಸರಿದೂಗಿಸಬಹುದು.
ಬ್ಲೂಬೆರಿ (Blue berry)
ಬ್ಲೂಬೆರಿಗಳು ರುಚಿಕರವಾಗಿರುವುದಲ್ಲದೆ ಅವುಗಳನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಹೊಂದಿವೆ. ಬ್ಲೂಬೆರಿಗಳಲ್ಲಿ ಅನೇಕ ವಿಟಮಿನ್ಸ್ ಮತ್ತು ಖನಿಜಗಳಿವೆ. ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಅಂಶಗಳು ವಯಸ್ಸಾದ ಜೀವಕೋಶಗಳನ್ನು ನಿಧಾನಗೊಳಿಸುವಲ್ಲಿ ಸಹಾಯ ಮಾಡುತ್ತದೆ.
ಒಂದು ಸಂಶೋಧನೆಯ ಪ್ರಕಾರ, ಬ್ಲೂಬೆರಿಗಳನ್ನು ತಿನ್ನುವುದರಿಂದ ಚರ್ಮ ಸುಧಾರಿಸುತ್ತದೆ ಮತ್ತು ವಯಸ್ಸಾಗುವುದನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಪ್ರತಿದಿನ ನಿಮ್ಮ ಆಹಾರದಲ್ಲಿ ಬ್ಲೂ ಬೆರ್ರೀಸ್ ಸೇರಿಸಿ. ಇದರಿಂದ ಅರೋಗ್ಯ ಉತ್ತಮವಾಗುತ್ತದೆ.
ಡ್ರೈ ಫ್ರುಟ್ಸ್ (dry fruits)
ಒಣಹಣ್ಣುಗಳ ಸೇವನೆ ಆರೋಗ್ಯಕ್ಕೂ ಪ್ರಯೋಜನಕಾರಿ. ಆದರೆ ವಯಸ್ಸಾಗುವಿಕೆ ವಿರೋಧಿ ಆಹಾರವನ್ನು ಹುಡುಕುತ್ತಿದ್ದರೆ, ಆಹಾರದಲ್ಲಿ ಗೋಡಂಬಿ, ಬಾದಾಮಿ, ವಾಲ್ ನಟ್ ಗಳಂತಹ ಬೀಜಗಳನ್ನು ಸೇರಿಸಿ. ಇವುಗಳಲ್ಲಿ ಫೈಬರ್, ಪ್ರೋಟೀನ್ ಮತ್ತು ವಿಟಮಿನ್ ಗಳಂತಹ ಅನೇಕ ಪೌಷ್ಟಿಕಾಂಶಗಳು ಸಮೃದ್ಧವಾಗಿವೆ. ಇದು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸಬಹುದು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
ಹಸಿರು ಎಲೆಗಳ ತರಕಾರಿಗಳು (green vegetables)
ಹಸಿರು ಸೊಪ್ಪುಗಳು ತೂಕ ಇಳಿಕೆಯಿಂದ ಹಿಡಿದು ದೇಹದಲ್ಲಿನ ಪೋಷಕಾಂಶಗಳ ಕೊರತೆಗಳನ್ನು ಪೂರೈಸುವವರೆಗೆ ಕೆಲಸ ಮಾಡುತ್ತದೆ. ಹಸಿರು ತರಕಾರಿಗಳು ವಯಸ್ಸಾಗುವುದನ್ನು ತಡೆಯುವ ಸಂಯುಕ್ತಗಳನ್ನು ಹೊಂದಿರುತ್ತವೆ, ಅದು ಚರ್ಮವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ವಯಸ್ಸು ಆಗುವುದನ್ನು ತಡೆಯುತ್ತದೆ.
ಈ ತರಕಾರಿಗಳಲ್ಲಿ ಪ್ರೋಟೀನ್ ಗಳು (proteins), ಕ್ಯಾಲ್ಸಿಯಂ(Calcium), ಆಂಟಿ ಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಗಳು ಹೇರಳವಾಗಿದ್ದು, ಅವು ಆರೋಗ್ಯಕರವಾಗಿಸಲು ಕಡಿಮೆ ಕ್ಯಾಲೊರಿಗಳಿಂದ ಸಮೃದ್ಧವಾಗಿವೆ. ಸೊಪ್ಪುಗಳಲ್ಲಿ ಪಾಲಕ್, ಮೆಂತ್ಯ, ಸಾಸಿವೆ, ಕೆಲ್ ಸೊಪ್ಪುಗಳಂತಹ ತರಕಾರಿಗಳನ್ನು ಸೇರಿಸುವುದು ಹೆಚ್ಚು ಒಳಿತು.