Gardening Tips: ಕೀಟಗಳಿಂದ ಗಿಡ ರಕ್ಷಿಸಲು ಇಲ್ಲಿವೆ ನೈಸರ್ಗಿಕ ಮದ್ದು!

Suvarna News   | Asianet News
Published : Nov 29, 2021, 07:30 PM IST

ಸಸ್ಯಗಳನ್ನು ಸುರಕ್ಷಿತವಾಗಿಡಲು ಬಯಸಿದರೆ ಮತ್ತು ಅವು ಯಾವಾಗಲೂ ಹಸಿರಾಗಿ ಬೆಳೆಯಬೇಕೆಂದು ಬಯಸಿದರೆ, ಅವುಗಳನ್ನು ಸ್ವಲ್ಪ ನೋಡಿಕೊಳ್ಳಬೇಕು. ಹೊರಗಿನಿಂದ ಯಾವುದೇ ರಾಸಾಯನಿಕ ವಸ್ತುಗಳನ್ನು ತರಬೇಕಾಗಿಲ್ಲ, ಅಡುಗೆ ಮನೆಯ ಸಾಮಾನುಗಳೊಂದಿಗೆ ಅವುಗಳನ್ನು ಸುಲಭವಾಗಿ ನೋಡಿಕೊಳ್ಳಬಹುದು. ಕೀಟಗಳಿಂದ ಮುಕ್ತವಾದ ಸಸ್ಯಗಳನ್ನು (pests  free plant) ಹೇಗೆ ರಕ್ಷಿಸಬೇಕು ಎಂಬುದನ್ನು ಕಲಿಯೋಣ.

PREV
18
Gardening Tips: ಕೀಟಗಳಿಂದ ಗಿಡ ರಕ್ಷಿಸಲು ಇಲ್ಲಿವೆ ನೈಸರ್ಗಿಕ ಮದ್ದು!

ಅರಿಶಿನ (turmeric) ರಾಮಬಾಣ
ಅರಿಶಿನವು ಕೀಟನಾಶಕಕ್ಕಿಂತ ಕಡಿಮೆಯಿಲ್ಲ. ಸಾಮಾನ್ಯವಾಗಿ ಮನೆಗಳಲ್ಲಿ ಇರುವೆಗಳು ಇದ್ದಾಗ ಅರಿಶಿನ ಚಿಮುಕಿಸಿ ಓಡಿಸಲಾಗುತ್ತದೆ. ಸಸ್ಯಗಳ ಮೇಲೆ ಅರಿಶಿನ ಸಿಂಪಡಿಸಿದರೆ, ಕೀಟಗಳು ಓಡಿಹೋಗಿ, ಸಸ್ಯಗಳಿಗೆ ಹಾನಿ ಮಾಡುವುದನ್ನು ನಿಲ್ಲಿಸುತ್ತವೆ. 10 ಕೆಜಿ ಮಣ್ಣಿಗೆ ಸುಮಾರು 20-25 ಗ್ರಾಂ ಅರಿಶಿನ ಸೇರಿಸಿ ಗಿಡಗಳಿಗೆ ಹಾಕಿ. ಬೇರುಗಳವರೆಗೂ ಎಲ್ಲಾ ಕೀಟಗಳು ಸಾಯುತ್ತವೆ.
 

28

ಬೆಳ್ಳುಳ್ಳಿ ನೀರು (garlic water)
ಬೆಳ್ಳುಳ್ಳಿ ಎಸಳು ಪುಡಿ ಮಾಡಿ ಮತ್ತು ಅವುಗಳನ್ನು ಒಂದು ಲೀಟರ್ ನೀರಿನಲ್ಲಿ ಸೇರಿಸಿ. ಎರಡು ಗಂಟೆಗಳ ನಂತರ, ಈ ನೀರನ್ನು ಸೋಸಿ ಮತ್ತು ಅದನ್ನು ಸಸ್ಯಗಳ ಮೇಲೆ ಸಿಂಪಡಿಸಿ. ಸಸ್ಯಗಳು ಅರಳುತ್ತವೆ ಮತ್ತು ಎಲ್ಲಾ ಕೀಟಗಳು ಸಾಯುತ್ತವೆ.

38

ದಾಲ್ಚಿನ್ನಿ ಪುಡಿ (cinnamon)
ಅರಿಶಿನದಂತೆ, ದಾಲ್ಚಿನ್ನಿ ಪುಡಿಯು ಕೀಟಗಳನ್ನು ಕೊಲ್ಲಲು ಸಹ ಸಹಾಯ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ನಿವಾರಕ ಅಂಶಗಳು ಒಳಗೊಂಡಿವೆ, ಇದು ಕೀಟಗಳನ್ನು ಸುಲಭವಾಗಿ ನಾಶಪಡಿಸುತ್ತದೆ. ಗಿಡ ಸೊಂಪಾಗಿ ಬೆಳೆಯುತ್ತದೆ. 

48

ಬೇಕಿಂಗ್ ಪೌಡರ್ ಮತ್ತು ಶಾಂಪೂ ನೀರು (baking powder & shampoo)
1 ಲೀಟರ್ ನೀರಿಗೆ 1 ಚಿಟಿಕೆ ಬೇಕಿಂಗ್ ಪೌಡರ್ ಸೇರಿಸಿ, 3 ಹನಿ ಬೇವಿನ ಎಣ್ಣೆ ಮತ್ತು 1 ಟೀ ಚಮಚ ಶಾಂಪೂ ಸೇರಿಸಿ ಮತ್ತು ಈ ನೀರನ್ನು ಸಸ್ಯಗಳ ಮೇಲೆ ಸಿಂಪಡಿಸಿ. ಶೀಘ್ರದಲ್ಲೇ ಸಸ್ಯಗಳು ಅರಳುತ್ತವೆ ಮತ್ತು ಎಲ್ಲಾ ಕೀಟಗಳು ಸಾಯುತ್ತವೆ. 

58

ಮೊಟ್ಟೆಯ ಸಿಪ್ಪೆ ಪುಡಿ (egg shell powder)
ಮೊಟ್ಟೆ ಸಿಪ್ಪೆಗಳನ್ನು ಪುಡಿ ಮಾಡಿ, ಗಿಡಗಳ ಮೇಲೆ ಹಾಕಿದರೆ ಸಸ್ಯಗಳಿಂದ ತೆವಳುವ ಕೀಟಗಳು ಸುಲಭವಾಗಿ ಸಾಯುತ್ತವೆ. ಆದರೆ ಮೊಟ್ಟೆಯ ಸಿಪ್ಪೆಗಳನ್ನು ನೀರಿನಿಂದ ಚೆನ್ನಾಗಿ ತೊಳೆದು, ನಂತರ ಒಣಗಿಸಿ ಪುಡಿ ಮಾಡಬೇಕು ಆಗ ಮಾತ್ರ ಅವು ಪ್ರಯೋಜನಕಾರಿ.

68

ಬೇವಿನ ಎಲೆಗಳು (neem leaves)
ಸಸ್ಯಗಳಲ್ಲಿನ ಕೀಟಗಳನ್ನು ಕೊಲ್ಲಲು ಬೇವು ಅತ್ಯಂತ ಉಪಯುಕ್ತವಾಗಿದೆ. ಬೇವಿನಲ್ಲಿ ಅನೇಕ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ನಿವಾರಕ ಅಂಶಗಳು ಒಳಗೊಂಡಿವೆ, ಅದು ಕೀಟಗಳನ್ನು ಸುಲಭವಾಗಿ ನಿವಾರಿಸುತ್ತದೆ. ಕೀಟನಾಶಕಗಳನ್ನು ಕೊಲ್ಲಲು ಬೇವಿನ ಎಲೆಯ ಪುಡಿಯನ್ನು ಮಾಡಿ ಮಣ್ಣಿನಲ್ಲಿ ಮಿಶ್ರಣ ಮಾಡಿ.

78

ಬೇವಿನ ಎಣ್ಣೆ (neem oil)
ಬೇವಿನ ಎಣ್ಣೆ ಗಾಢ ಪರಿಮಳ ಹೊಂದಿದೆ. ಇದನ್ನು ಗಿಡಗಳ ಮೇಲೆ ನೀರಿನ ಜೊತೆ ಸೇರಿಸಿ ಸಿಂಪಡಿಸುವುದರಿಂದ ಕೀಟಗಳು ಗಿಡಗಳ ಹತ್ತಿರ ಸುಳಿಯುವುದಿಲ್ಲ. ಹಾಗೂ ಇದ್ದ ಕೀಟಾಣುಗಳೆಲ್ಲಾ ಸತ್ತು ಹೋಗುತ್ತವೆ. ಜೊತೆಗೆ ಗಿಡಗಳು ಉತ್ತಮ ರೀತಿಯಲ್ಲಿ ಬೆಳೆಯುತ್ತವೆ. 

88

ಉಪ್ಪು (salt):
ಮಳೆಗಾಲದಲ್ಲಿ ಕಾಡುವ ಬಸವನ ಹುಳು, ಗಿಡಗಳನ್ನೆಲ್ಲಾ ನಾಶ ಮಾಡುತ್ತವೆ. ಇಂತಹ ಸಮಸ್ಯೆ ಕಾಡುತ್ತಿದ್ದರೆ ಉಪ್ಪನ್ನು ನೀರು ಮಾಡಿ, ಗಿಡದ ಮೇಲೆ ಸಿಂಪಡಿಸಿ, ಹುಳುಗಳು ಸಾಯುತ್ತವೆ. ಉಪ್ಪು ಸಿಂಪಡಿಸಿದ ಪ್ರದೇಶದ ಮೇಲೆ ಯಾವುದೇ ಕೀಟಗಳು, ಹುಳುಗಳು ಸುಳಿಯುವುದಿಲ್ಲ. 

Read more Photos on
click me!

Recommended Stories