ಅನಂತ್ ರಾಧಿಕಾ ಮದುವೆ; ವೈರಲ್ ಆಯ್ತು ಮುಖೇಶ್ ಮತ್ತು ನೀತಾ ಅಂಬಾನಿಯ 1984ರ ಸರಳ ವಿವಾಹದ ಫೋಟೋಗಳು..

First Published | Jun 1, 2024, 10:26 AM IST

ಮಗನ ಮದುವೆ ಹಿನ್ನೆಲೆಯಲ್ಲಿ ಮುನ್ನೆಲೆಗೆ ಬಂದಿವೆ ಮುಖೇಶ್ ಮತ್ತು ನೀತಾ ಅಂಬಾನಿಯ 1984ರ ಸರಳ ವಿವಾಹದ ಫೋಟೋಗಳು..

ಅಂಬಾನಿ ಕುಟುಂಬದ ಸಂಪತ್ತು ಮತ್ತು ಪ್ರಭಾವದ ಬಗ್ಗೆ ನಾವು ಆಗಾಗ್ಗೆ ಕೇಳುತ್ತೇವೆ. ಅದರಲ್ಲೂ ಅವರ ಮಕ್ಕಳ ವಿವಾಹ ಸಂದರ್ಭದಲ್ಲಿ ಕುಟುಂಬದ ಭಾರೀ ವೈಭೋಗ ಎಲ್ಲರ ಕಣ್ಣು ಕುಕ್ಕುತ್ತದೆ. 

ಈಗ ಕುಟುಂಬದ ಕಿರಿಯ ಮಗ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಜೊತೆ ಜುಲೈನಲ್ಲಿ ವಿವಾಹವಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ವಿವಾಹ ಸಮಾರಂಭದ ಫೋಟೋಗಳು ಅವುಗಳ ಸರಳತೆ ಕಾರಣಕ್ಕೇ ವೈರಲ್ ಆಗಿವೆ. 

Tap to resize

ಇದು 1984ರಲ್ಲಿ ನಡೆದ ವಿವಾಹ. ಸರಳತೆ ಎಂದರೆ ಮಾಮೂಲಿ ಎಲ್ಲ ಜನಸಾಮಾನ್ಯರ ವಿವಾಹದಂತೆಯೇ ನಡೆದಿತ್ತು ಇವರಿಬ್ಬರ ವಿವಾಹ. ಮುಖೇಶ್ ಮತ್ತು ನೀತಾ ಅಂಬಾನಿ ಮದುವೆ ಸಮಾರಂಭದ ಕೆಲವು ಫೋಟೋಗಳು ಇಲ್ಲಿವೆ.

ನೀತಾ ದಲಾಲ್ ಆಗಿ ಜನಿಸಿದ ನೀತಾ ಅಂಬಾನಿ ಮುಂಬೈನ ಮಧ್ಯಮ ವರ್ಗದ ಗುಜರಾತಿ ಕುಟುಂಬದಿಂದ ಬಂದವರು. ಆಕೆಯ ಪೋಷಕರು ರವೀಂದ್ರಭಾಯಿ ದಲಾಲ್ ಮತ್ತು ಪೂರ್ಣಿಮಾ ದಲಾಲ್.

ನೀತಾ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು ಮತ್ತು ಚಿಕ್ಕ ವಯಸ್ಸಿನಿಂದಲೇ ಭರತನಾಟ್ಯವನ್ನು ಕಲಿತರು. ಅಂತಿಮವಾಗಿ ವೃತ್ತಿಪರ ನೃತ್ಯಗಾರ್ತಿಯಾದರು.

ಮುಖೇಶ್ ಅವರ ತಂದೆ ಧೀರೂಭಾಯಿ ಅಂಬಾನಿ ನೃತ್ಯ ಕಾರ್ಯಕ್ರಮವೊಂದರಲ್ಲಿ ನೀತಾ ಅವರ ಪ್ರದರ್ಶನವನ್ನು ನೋಡಿದ ನಂತರ ಅವರು ತಮ್ಮ ಮಗನಿಗೆ ಉತ್ತಮ ಜೋಡಿಯಾಗುತ್ತಾರೆ ಎಂದು ಭಾವಿಸಿದರು. ಅವರ ಮದುವೆಯ ನಂತರವೂ ನೀತಾ ಕೆಲವು ವರ್ಷಗಳ ಕಾಲ ಶಿಕ್ಷಕಿಯಾಗಿ ಕೆಲಸ ಮಾಡಿದರು. 
 

ಅವರ ಮದುವೆಗೆ ಹಾಜರಾದವರಿಗೆ ಬಹುಶಃ ತಾವು ಭವಿಷ್ಯದ ಜಗತ್ತಿನ ಶ್ರೀಮಂತ ಜೋಡಿಯೊಂದರ ವಿವಾಹಕ್ಕೆ ಸಾಕ್ಷಿಯಾಗುತ್ತಿದ್ದಾರೆಂದು ತಿಳಿದಿರಲಿಲ್ಲ.

ಇದರಲ್ಲಿ ಮುಖೇಶ್ ಅಂಬಾನಿಯ ಮುಖದಲ್ಲಿ ಇನ್ನೂ ಹರೆಯದವನ ಕಳೆ ಹಾಗೂ ಸುಂದರಿ ನೀತಾ ಇಶಾ ಅಂಬಾನಿ ಹಾಗೆ ಕಾಣುತ್ತಿದ್ದಾರೆ. ಇಬ್ಬರ ಸಂತಸವೂ ಮುಖದಲ್ಲಿ ಕಾಣುತ್ತಿದೆ. 

Latest Videos

click me!