ಬ್ರಿಟನ್ ಪ್ರಧಾನಿ ಸುನಕ್‌ಗೆ ಪತ್ನಿ ಅಕ್ಷತಾ ಭಾವುಕ ಮೆಸೇಜ್, ಒಂದೇ ವಾಕ್ಯದಲ್ಲಿ ಆತ್ಮವಿಶ್ವಾಸ ಡಬಲ್!

First Published | May 23, 2024, 6:10 PM IST

ಇನ್ಫೋಸಿಸ್ ಮೂರ್ತಿ ಅಳಿಯ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಆತ್ಮವಿಶ್ವಾಸ ಡಬಲ್ ಆಗಿದೆ. ಇದಕ್ಕೆ ಮುಖ್ಯ ಕಾರಣ ಅಕ್ಷತಾ ಮೂರ್ತಿಯ ಒಂದು ಪೋಸ್ಟ್. ಒಂದೇ ವಾಕ್ಯದಲ್ಲಿ ಸುನಕ್ ಮುಖದಲ್ಲಿ ನಗು ತರಿಸಿದ್ದಾರೆ.
 

ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಇದೀಗ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇದಕ್ಕೂ ಮೊದಲೇ ರಿಷಿ ಸುನಕ್ ಆತ್ಮವಿಶ್ವಾಸ ಡಬಲ್ ಆಗಿದೆ. ಇದಕ್ಕೆ ಕಾರಣ ಪತ್ನಿ ಅಕ್ಷತಾ ಮೂರ್ತಿ.
 

ಮಹತ್ವದ ಕ್ಯಾಬಿನೆಟ್ ಸಭೆ ನಡೆಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಜುಲೈ 4ರಂದು ಬ್ರಿಟನ್ ಚುನಾವಣೆ ಎಂದು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಅಕ್ಷತಾ ಮೂರ್ತಿ ಭಾವುಕ ಪೋಸ್ಟ್ ಮಾಡಿದ್ದಾರೆ. ಇದು ಸುನಕ್ ಹೆಜ್ಜೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
 

Latest Videos


ಚುನಾವಣೆ ಘೋಷಣೆ ಮಾಡಿದ ಬೆನ್ನಲ್ಲೇ ಅಕ್ಷತಾ ಮೂರ್ತಿ ಸುನಕ್ ಜೊತೆಗಿನ 2 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಳಿಕ ನಿಮ್ಮ ಪ್ರತಿ ಹೆಜ್ಜೆಯಲ್ಲಿ ನಾನು ನಿಮ್ಮ ಜೊತೆಗಿದ್ದೇನೆ ಎಂದು  ಬರೆದುಕೊಂಡಿದ್ದಾರೆ.
 

ಅಕ್ಷತಾ ಮೂರ್ತಿ ಈ ಪೋಸ್ಟ್ ಹಾಕುತ್ತಿದ್ದಂತೆ ಬ್ರಿಟನ್ ನಾಗರೀಕರು ಭರ್ಜರಿ ಕಮೆಂಟ್ ಮಾಡಿದ್ದಾರೆ. ಬ್ರಿಟನ್ ಕಂಡ ಅತ್ಯುತ್ತಮ ಪ್ರಧಾನಿ ಪೈಕಿ ರಿಷಿ ಸುನಕ್ ಮುಂಚೂಣಿಯಲ್ಲಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
 

ಆರ್ಥಿಕ, ವಿದೇಶಾಂಗ ನೀತಿಗಳ ಮೂಲಕ ಬ್ರಿಟನ್ ಗೌರವ ಹೆಚ್ಚಿಸಿದ್ದೀರಿ. ರಿಷಿ ಸುನಕ್ ಜೊತೆಯಾಗಿ ನಿಂತು ಬೆಂಬಲ ನೀಡಿದ ನಿಮಗೂ ಧನ್ಯವಾದ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಹಲವು ಸವಾಲುಗಳ ನಡುವೆ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ರಿಷಿ ಸುನಕ್, ಪರಿಣಾಮಕಾರಿ ಆಡಳಿತದಿಂದ ಮುನ್ನಡೆಯತ್ತ ಕೊಂಡೊಯ್ದಿದ್ದಾರೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಹಲವರು ರಿಷಿ ಸುನಕ್‌ಗೆ ಶುಭ ಕೋರಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಬ್ರಿಟನ್ ಪ್ರಧಾನಿಯಾಗಿ ಮರು ಆಯ್ಕೆಯಾಗಲು ಬಯಸುತ್ತಿರುವುದಾಗಿ ಹಲವರು ಹೇಳಿದ್ದಾರೆ.
 

ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ, 2009ರಲ್ಲಿ ರಿಷಿ ಸುನಕ್ ಮದುವೆಯಾಗಿದ್ದಾರೆ. 2004ರಲ್ಲಿ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು.
 

click me!