ಬೆಂಗಳೂರಿನ ತರಕಾರಿ ಅಂಗಡಿಯಲ್ಲಿ ನೇತುಹಾಕಿರುವ ಒಂದು ಚಿತ್ರ ಈಗ ವೈರಲ್ ಆಗಿದೆ. ಮೈಕ್ರೋಬ್ಲಾಗಿಂಗ್ ತಾಣದಲ್ಲಿ ಟ್ವಿಟರ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ತರಕಾರಿ ಅಂಗಡಿಯೊಂದರಲ್ಲಿ ವಿಶಾಲ ಕಣ್ಣಿನ ಮಹಿಳೆಯ ಫೋಟೋವನ್ನು ನೇತುಹಾಕಲಾಗಿದೆ. ಫೋಟೋ ಕೆಕ್ಕರಿಸಿ ನೋಡುವಂತಿದೆ. ಎಂತವರೂ ಒಮ್ಮೆ ಅವಕ್ಕಾಗಿ ನೋಡಿ ಆಮೇಲೆ ನಗೆ ಗಡಲಲ್ಲಿ ತೇಲಬಹುದು.
"ನಾನು ಇಂದು ಹೊರಬಂದಿದ್ದೇನೆ ಎಂದು ನನಗೆ ತುಂಬಾ ಖುಷಿಯಾಗಿದೆ" ಎಂದು ಎಕ್ಸ್ ಬಳಕೆದಾರ ನಿಹಾರಿಕಾ ಅವರು ಈ ಫೋಟೋವನ್ನು ಹಂಚಿಕೊಂಡು ತಲೆಬರಹ ಬರೆದಿದ್ದಾರೆ. ತನ್ನನ್ನು ರಂಜಿಸಿದ ಮೂರು ಚಿತ್ರಗಳನ್ನು ನಿಹಾರಿಕಾ ಹಂಚಿಕೊಂಡಿದ್ದಾರೆ. ಈ ಫೋಟೋಗೆ ತರಹೇವಾರಿ ಸ್ವಾರಸ್ಯಕರವಾದ ಕಮೆಂಟ್‌ಗಳು ಬಂದಿದೆ.
ಈ ಫೋಟೋದಲ್ಲಿ ಟೊಮೆಟೊಗಳಿಂದ ತುಂಬಿದ ಅಂಗಡಿಕಾಣುತ್ತದೆ. ಅದರ ಮೇಲೆ ಮರದಲ್ಲಿ ನೇತುಹಾಕಿದ ಅಗಲವಾದ ಕಣ್ಣುಗಳ ಮಹಿಳೆ ಮುಂದೆ ನೋಡುತ್ತಿರುವ ಚಿತ್ರವಿದೆ. ಈ ವೈರಲ್ ಪೋಸ್ಟ್ 1 ದಿನದಲ್ಲಿ 70 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ 1 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಇದು ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಹತ್ತಿರವೇ? ಎಂದು ಟ್ವಿಟ್ಟರ್ ಬಳಕೆದಾರೊಬ್ಬರು ಕೇಳಿದ್ದು, ಹೌದು, ಇದರ ಹಿಂದಿನ ಕಥೆ ನಿನಗೆ ಗೊತ್ತಾ?" ಎಂದು ನಿಹಾರಿಕಾ ಪ್ರಶ್ನಿಸಿದ್ದಾರೆ. ಇದಕ್ಕೆ, ಎಕ್ಸ್ ಬಳಕೆದಾರರು, ಯಾವುದೇ ಕಥೆಯಿಲ್ಲ tbh, ಇದು ದುಷ್ಟ ಕಣ್ಣುಗಳಿಂದ ದೂರವಿರಲು. ಈ ಫೋಟೋ ಒಂದು ಟ್ರೆಂಡ್ ಆಗಿ ಮಾರ್ಪಟ್ಟಿದೆ ಮತ್ತು ಅನೇಕ ಇತರ ಅಂಗಡಿಗಳಲ್ಲಿ ಇರಿಸಲಾಗಿದೆ ಎಂದು ಉತ್ತರಿಸಿದ್ದಾರೆ.
ಬೆಂಗಳೂರಿನ ತರಕಾರಿ ಅಂಗಡಿಯ ಕುರಿತು ಈ ಪೋಸ್ಟ್ ಕುರಿತು ನಿಮ್ಮ ಅಭಿಪ್ರಾಯವೇನು? ಟೋಮೆಟೋ ಬೆಲೆ ಹೆಚ್ಚಾದಾಗ ಹಾಕಿರಬಹುದೇ? ಅಥವಾ ದೃಷ್ಟಿಗೆ ಹಾಕಿರಬಹುದೇ? ಫೋಟೋ ನೋಡಿ ನಿಮಗೂ ನಗು ಬಂತಾ? ನೀವು ಕಮೆಂಟ್ ಮಾಡಿ, ಅಭಿಪ್ರಾಯ ಹಂಚಿಕೊಳ್ಳಿ...