ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟಿ ಐಶ್ವರ್ಯ ರೈ ಅವರ ದೇಹದ ತೂಕದ ಬಗ್ಗೆ ಪದ್ಮಶ್ರೀ ಪುರಸ್ಕೃತೆ ಮೃಣಾಲ್ ಪಾಂಡೆ ಟೀಕಿಸಿದ್ದಾರೆ. ಈ ಬಾಡಿ ಶೇಮಿಂಗ್ ಹೇಳಿಕೆಯಿಂದಾಗಿ ಪಾಂಡೆ ತೀವ್ರ ಟೀಕೆಗೆ ಗುರಿಯಾಗಿದ್ದು, ನಟಿ ಕಂಗನಾ ರಣಾವತ್ ಐಶ್ವರ್ಯಾ ಪರವಾಗಿ ಧ್ವನಿ ಎತ್ತಿದ್ದಾರೆ.
ಬಾಲಿವುಡ್ ನಟಿ ಐಶ್ವರ್ಯ ರೈ ಹಲವು ವರ್ಷಗಳಿಂದ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಕೆಲವೊಂದು ಸಮಸ್ಯೆಗಳಿಂದಾಗಿ ಐಶ್ವರ್ಯಾ ರೈ ಬಚ್ಚನ್ ಸ್ವಲ್ಪ ದಪ್ಪ ಆಗಿದ್ದಾರೆ. ಅಷ್ಟಕ್ಕೂ ಸೆಲೆಬ್ರಿಟಿಗಳಿಗೆ ದೇಹದ ಸೌಂದರ್ಯವೇ ಮುಖ್ಯ. ಅದಕ್ಕಾಗಿ ಅವರು ಹಗಲು ಇರುಳು ಶ್ರಮಿಸುತ್ತಾರೆ. ಹಾಗಿದ್ದ ಮೇಲೂ ಕೆಲವೊಂದು ಸಮಸ್ಯೆಗಳು ನಮ್ಮ ಕೈಯಲ್ಲಿ ಇರುವುದಿಲ್ಲವಲ್ಲ. ದುಡ್ಡಿದ್ದರೆ ಎಲ್ಲವೂ ಸಾಧ್ಯ ಎನ್ನಲೂ ಆಗುವುದಿಲ್ಲವಲ್ಲ. ಅದೇ ರೀತಿ ಐಶ್ವರ್ಯ ಅವರ ದೇಹದ ತೂಕವೂ ಹೆಚ್ಚಾಗಿದೆ. ಆದರೆ ಕೇನ್ಸ್ನಲ್ಲಿ ಅವರು ಎಲ್ಲರ ಗಮನವನ್ನು ಸೆಳೆದರು.
25
ಪದ್ಮಶ್ರೀ ಪುರಸ್ಕೃತೆಯಿಂದ ಟೀಕೆ
ಆದರೆ, ಇದೇ ವೇಳೆ ಪದ್ಮಶ್ರೀ ಪುರಸ್ಕೃತೆಯೊಬ್ಬರು ಐಶ್ವರ್ಯ ರೈ ಅವರ ಬಾಡಿ ಶೇಮಿಂಗ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಆಕೆಯ ತೂಕ ಮಾತ್ರವಲ್ಲದೇ ವಯಸ್ಸಿನ ಬಗ್ಗೆಯೂ ಅವರು ಟೀಕಿಸಿದ್ದಾರೆ. ಇವರೇ ಹಿರಿಯ ಪತ್ರಕರ್ತೆ ಮತ್ತು ಲೇಖಕಿ ಮೃಣಾಲ್ ಪಾಂಡೆ. ವಿಚಿತ್ರ ಎಂದರೆ ಇವರಿಗೆ ಪದ್ಮಶ್ರೀ ಸಿಕ್ಕಿರುವುದು ಮಹಿಳಾ ಹಕ್ಕುಗಳ ಬಗ್ಗೆ ಬರೆದಿರುವುದಕ್ಕೆ. ಬಾಯಲ್ಲಿ ಭಗವದ್ಗೀತೆ, ಮಾಡೋದೆಲ್ಲಾ ಅನಾಚಾರ ಎನ್ನುವ ಸಾಲಿನಲ್ಲಿ ಈಕೆ ಸೇರಿದ್ದಾರೆ ಎಂದು ಇವರ ವಿರುದ್ಧ ಇನ್ನಿಲ್ಲದಂತೆ ಟೀಕೆಗಳು ಕೇಳಿಬರುತ್ತಿವೆ.
35
ಪ್ರಶಸ್ತಿ ಕೊಟ್ಟೋರು ಯಾರು?
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮತ್ತು ದಶಕಗಳಿಂದ ಮಹಿಳಾ ಹಕ್ಕುಗಳ ಬಗ್ಗೆ ಬರೆದ ಪತ್ರಕರ್ತೆಯಿಂದ ಇಂಥ ಬಾಡಿ ಶೇಮಿಂಗ್ ನಿರೀಕ್ಷಿಸಲಾಗದ್ದು ಎನ್ನಲಾಗಿದೆ. ಇದೇ ಕಾರಣಕ್ಕೆ ಇಂಥವರಿಗೆ ಪದ್ಮಶ್ರೀ ಕೊಟ್ಟವರು ಯಾರು ಎನ್ನುವ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಮೃಣಾಲ್ ಪಾಂಡೆ ಅವರಿಗೆ ಪದ್ಮಶ್ರೀ ಸಿಕ್ಕಿದ್ದು 2006ರಲ್ಲಿ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಮಯದಲ್ಲಿ. ಆ ಸಮಯದಲ್ಲಿ ಹೆಚ್ಚಾಗಿ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳಿಗೆ ಭಾರಿ ಮನ್ನಣೆ ಸಿಗುತ್ತಿತ್ತು. ಹಲವಾರು ಸಿನಿಮಾ ತಾರೆಯರಿಗೂ ಈ ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಕಳೆದ 11 ವರ್ಷಗಳಿಂದ ಯಾವುದೋ ಮೂಲೆಯಲ್ಲಿ ಇರುವ, ಯಾರಿಗೂ ಪರಿಚಯವೇ ಇಲ್ಲದ, ಸಮಾಜ ಸೇವೆಯಲ್ಲಿ ಅಥವಾ ಇನ್ನಾವುದೋ ಕಾರ್ಯದಲ್ಲಿ ತಮ್ಮನ್ನು ತೋಡಗಿಸಿಕೊಂಡು ಪ್ರಚಾರದ ಗೊಡವೇ ಇಲ್ಲದವರನ್ನು ಹುಡುಕಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಬಂದ ಮೇಲೆ ಅವರ ಕಾರ್ಯವನ್ನು ಗಮನಿಸಿದರೆ ಅಬ್ಬಾ ಇಂಥವರೂ ನಮ್ಮ ದೇಶದಲ್ಲಿಯೇ ಇದ್ದಾರೆಯೇ ಎನ್ನುವಂಥ ಸಾಧನೆ ಮಾಡಿರುವುದು ತಿಳಿಯುತ್ತದೆ.
ಅದೇನೇ ಇದ್ದರೂ, ಸದ್ಯ ಪದ್ಮಶ್ರೀ ಪುರಸ್ಕೃತೆ ಮೃಣಾಲ್ ಪಾಂಡೆ ಅವರು ಯಾವ ರೀತಿಯಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಕೆಲಸ ಮಾಡಿರಬಹುದು ಎನ್ನುವುದು ಅವರ ಒಂದೇ ಒಂದು ಲೈನ್ ಸಾರಿ ಸಾರಿ ಹೇಳುತ್ತಿದೆ. ಇದರಿಂದಾಗಿ ಈಗ ಈಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.
55
ಕಂಗನಾ ರಣಾವತ್ ಟೀಕೆ
ನಟಿ, ಸಂಸದೆ ಕಂಗನಾ ರಣಾವತ್ ಐಶ್ವರ್ಯ ಬಾಡಿ ಶೇಮಿಂಗ್ ಮಾಡಿದವರ ವಿರುದ್ಧ ಕಿಡಿ ಕಾರಿದ್ದಾರೆ. ಐಶ್ವರ್ಯಾ ಅವರನ್ನು ಹೊಗಳಿದ ಕಂಗನಾ, "ಐಶ್ ಸಂಪೂರ್ಣವಾಗಿ ಸುಂದರವಾಗಿ ಕಾಣುತ್ತಾರೆ, ಮತ್ತು ಕೆಲವರು ಅವಳನ್ನು ವಿಭಿನ್ನ ರೀತಿಯಲ್ಲಿ ನೋಡಲು ಬಯಸಿದರೆ, ಅವರು ಮೊದಲು ತಮ್ಮನ್ನು ತಾವು ನೋಡಿಕೊಳ್ಳಬೇಕು. ಐಶ್ವರ್ಯಾ ಯಾರನ್ನೂ ಮೆಚ್ಚಿಸಲು ರೆಡ್ ಕಾರ್ಪೆಟ್‌ಗೆ ಬರುವುದಿಲ್ಲ. ಬದಲಾಗಿ, ಅವರು ತಮ್ಮದೇ ಆದ ಕಾಂತಿ ಮತ್ತು ಆತ್ಮವಿಶ್ವಾಸದಿಂದ ತಮ್ಮನ್ನು ತಾವು ಪ್ರಸ್ತುತಪಡಿಸಿಕೊಳ್ಳುತ್ತಾರೆ. ಜನರು ರೆಡ್ ಕಾರ್ಪೆಟ್ ಮೇಲೆ ವಯಸ್ಸಾದ ಮಹಿಳೆಯರನ್ನು ನೋಡುವ ಅಭ್ಯಾಸವನ್ನು ಹೊಂದಿಲ್ಲದಿದ್ದರೆ, ಅವರು ಈಗ ಅದಕ್ಕೆ ಒಗ್ಗಿಕೊಳ್ಳಬೇಕು ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.