ಮೊಬೈಲ್ ನಲ್ಲಿ ಆಜ ಕಿ ರಾತ್‌ ಹಾಡು ನೋಡ್ತಿದ್ದಾಳಾ ಮಗಳು ! ಈ ಕೆಲ್ಸ ಮಾಡಿದ್ರೆ 100 % 9ನೇ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತೆ ಪಿರಿಯಡ್ಸ್

Published : Jun 27, 2026, 02:27 PM IST

ಮಕ್ಕಳಿಗೆ ಬುದ್ದಿ ಬರುವ ಮೊದ್ಲೇ ಪಿರಿಯಡ್ಸ್ ಬರ್ತಿದೆ. ಮಕ್ಕಳಿಗೆ 9-10 ವರ್ಷವಾಗ್ತಿದ್ದಂತೆ ಪಿರಿಯಡ್ಸ್ ಗೆ ಒಳಗಾಗ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ಅಭ್ಯಾಸ. ಪಾಲಕರು ಎಚ್ಚೆತ್ರೆ ಹೆಣ್ಮಕ್ಕಳ ಆರೋಗ್ಯ ಕಾಪಾಡ್ಬಹುದು.

PREV
14
ಅತಿ ಬೇಗ ಬರ್ತಿರುವ ಪಿರಿಯಡ್ಸ್

ಪಿರಿಯಡ್ಸ್ ಒಂದು ನೈಸರ್ಗಿಕ ಕ್ರಿಯೆ. ಸಾಮಾನ್ಯವಾಗಿ 13 -15 ವರ್ಷದ ಮಕ್ಕಳಲ್ಲಿ ಪಿರಿಯಡ್ಸ್ ಶುರುವಾಗುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಅತೀ ಚಿಕ್ಕ ಮಕ್ಕಳಿಗೇ ಪಿರಿಯಡ್ಸ್ ಕಾಣಿಸಿಕೊಳ್ತಿದೆ. ಎರಡು – ಮೂರನೇ ಕ್ಲಾಸ್ ನಲ್ಲಿ ಓದುತ್ತಿರುವ, ಇದ್ರ ಬಗ್ಗೆ ಯಾವುದೇ ಜ್ಞಾನ ಇಲ್ಲದ ಮಕ್ಕಳು ಪಿರಿಯಡ್ಸ್ ಗೆ ಒಳಗಾಗ್ತಿದ್ದಾರೆ. ಇದು ಅಮ್ಮಂದಿರಿಗೆ ದೊಡ್ಡ ಸವಾಲು. ಮಕ್ಕಳಿಗೆ ಇದ್ರ ಬಗ್ಗೆ ಶಿಕ್ಷಣ ನೀಡೋದು ಕಷ್ಟ. ಜೊತೆಗೆ ಸ್ವಚ್ಛತೆ ಕಾಯ್ದುಕೊಳ್ಳೋದು ಕಷ್ಟ. ಮಕ್ಕಳು ಅತಿ ಬೇಗ ಈ ಚಕ್ರಕ್ಕೆ ಬರ್ಬಾರದು ಅಂದ್ರೆ ಪಾಲಕರು ಎಚ್ಚರಿಕೆವಹಿಸಬೇಕು.

24
ಫ್ಯಾಷನ್ ಲೋಕಕ್ಕೆ ಚಿಕ್ಕ ಮಕ್ಕಳು

ಹಿಂದೆ ಹದಿಹರೆಯಕ್ಕೆ ಬರುವವರೆಗೂ ಮಕ್ಕಳಿಗೆ ಪೌಡರ್ ಬಿಟ್ರೆ ಮತ್ತ್ಯಾವ ಬ್ಯೂಟಿ ಪ್ರಾಡಕ್ಟ್ ಬಳಸ್ತಿರಲಿಲ್ಲ. ಈಗ ಚಿಕ್ಕ ವಯಸ್ಸಿನ ಮಕ್ಕಳ ತುಟಿಯಲ್ಲಿ ಲಿಪ್ಸ್ಟಿಕ್, ಕಣ್ಣಿಗೆ ಕಾಜಲ್, ಐಲೈನರ್, ಒಂದಿಷ್ಟು ಬ್ಯೂಟಿ ಕ್ರೀಮ್ಸ್ ರಾಜಾಜಿಸುತ್ತೆ. ಪ್ರತಿಯೊಬ್ಬ ಮಕ್ಕಳು ನೇಲ್ ಪಾಲಿಶ್ ಹಚ್ಚಿಕೊಳ್ತಾರೆ. ಇವು ಮುಖದ, ದೇಹವನ್ನು ಆಕರ್ಷಕ ಮಾಡ್ಬಹುದು. ಆದ್ರೆ ಹೆಣ್ಮಕ್ಕಳಿಗೆ ಇವೇ ಶಾಪವಾಗುತ್ತೆ. ಸೆಂಟ್, ಲಿಪ್ಸ್ಟಿಕ್, ನೇಲ್ ಪಾಲಿಶ್ ಮತ್ತು ಐಲೈನರ್ನಂತಹ ಸೌಂದರ್ಯವರ್ಧಕ ಉತ್ಪನ್ನಗಳು ದೇಹದಲ್ಲಿನ ಹಾರ್ಮೋನುಗಳನ್ನು ಹೊರಹಾಕಬಲ್ಲ ವಿವಿಧ ರಾಸಾಯನಿಕಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ 13-14 ವರ್ಷ ವಯಸ್ಸಿನಲ್ಲಿ ಸಂಭವಿಸಬೇಕಾದ ಹಾರ್ಮೋನುಗಳು ಚಿಕ್ಕ ವಯಸ್ಸಿನಲ್ಲಿಯೇ ಆಗುತ್ತವೆ. 8-9 ವರ್ಷ ವಯಸ್ಸಿನ ಹುಡುಗಿಯರಲ್ಲಿ ಈ ಹಾರ್ಮೋನ್ ಬಿಡುಗಡೆ ಆಗೋದ್ರಿಂದ ಅವರು ಪಿರಿಯಡ್ಸ್ ಗೆ ಒಳಗಾಗ್ತಾರೆ.

34
ಸ್ಕ್ರೀನ್ ಟೈಂ

ಹುಟ್ಟುತ್ಲೇ ಐಫೋನ್ ಕೈನಲ್ಲಿ ಹಿಡಿದು ಹುಟ್ಟುವ ಕಾಲ ಇದು. ಮಕ್ಕಳು ಫೋನ್ ಇಲ್ದೆ ಊಟ ಮಾಡೋದಿಲ್ಲ, ನಿದ್ರೆ ಮಾಡೋದಿಲ್ಲ. ಜೊತೆಗೆ ರೀಲ್ಸ್ ಹಾವಳಿ ಜೋರಾಗಿದೆ. ಮಕ್ಕಳು ಇಡೀ ದಿನ ರೀಲ್ಸ್, ಶಾರ್ಟ್ಸ್ ಸ್ಕ್ರೋಲ್ ಮಾಡ್ತಿದ್ದಾರೆ. ಮಕ್ಕಳು ಕೇಳುವ, ನೋಡುವ ವಿಡಿಯೋ, ಹಾಡುಗಳು ಅವರ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ವಿಡಿಯೋಗೆ ಫಿಲ್ಟರ್ ಇಲ್ಲ. ಮಕ್ಕಳು ನೋಡಬಾರದ ಅನೇಕ ವಿಡಿಯೋ ನೋಡ್ತಾರೆ. ಜೊತೆಗೆ ರೋಮ್ಯಾಂಟಿಕ್ ಸಾಂಗ್ಸ್, ಸೀನ್ ಗಳನ್ನು ಸಿನಿಮಾ, ಸೀರಿಯಲ್ ನಲ್ಲಿ ನೋಡ್ತಾರೆ. ಒಂದು ಮಗು ದೀರ್ಘಕಾಲದವರೆಗೆ ಸ್ಕ್ರೀನ್ ನೋಡ್ತಿದ್ದರೆ ಅದೂ ಅವರ ವಯಸ್ಸಿಗೆ ಸೂಕ್ತವಲ್ಲದ ವಿಷಯವನ್ನು ವೀಕ್ಷಿಸಿದ್ರೆ ಅದು ಭಾವನೆಗಳು ಮತ್ತು ಭಾವನಾತ್ಮಕ ಬೆಳವಣಿಗೆಯಲ್ಲಿ ಬದಲಾವಣೆ ತರುತ್ತದೆ. ಅಕಾಲಿಕವಾಗಿ ವಯಸ್ಕರಂತೆ ಆಗಲು ಅವರು ಪ್ರಾರಂಭಿಸಬಹುದು. ಇದು ಅವರನ್ನು ಬೇಗ ಪಿರಿಯಡ್ಸ್ ಗೆ ತಳ್ಳುತ್ತದೆ.

44
ಇದೂ ಉತ್ತಮವಲ್ಲ

ಸೌಂದರ್ಯವರ್ಧಕ, ಸ್ಕ್ರೀನ್ ಟೈಂ ಜೊತೆ ಚಾಕೊಲೇಟ್, ಸಂಸ್ಕರಿಸಿದ ಆಹಾರಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳ ಬಳಕೆ ಸಹ ದೇಹಕ್ಕೆ ಒಳ್ಳೆಯದಲ್ಲ. ಇದು ಮಕ್ಕಳನ್ನು ಅತಿ ಬೇಗ ಪಿರಿಯಡ್ಸ್ ಸರ್ಕಲ್ ಗೆ ನೂಕುತ್ತದೆ. ಪ್ಲಾಸ್ಟಿಕ್ನಿಂದ ಬಿಡುಗಡೆಯಾಗುವ ಮೈಕ್ರೋಪ್ಲಾಸ್ಟಿಕ್ಗಳು ದೇಹವನ್ನು ಪ್ರವೇಶಿಸಿ ಉತ್ಕರ್ಷಣ ನಿರೋಧಕಗಳ ಮೇಲೆ ಪರಿಣಾಮ ಬೀರುತ್ತವೆ. ಇದು ದೇಹದಲ್ಲಿ ವಿವಿಧ ಬದಲಾವಣೆಗಳನ್ನು ಉಂಟುಮಾಡುತ್ತದೆ. ಇದು ಅಕಾಲಿಕ ಹಾರ್ಮೋನ್ ಬದಲಾವಣೆಗಳಿಗೆ ಕಾರಣವಾಗಬಹುದು. ಆರಂಭಿಕ ಮುಟ್ಟಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories