ಲಕ್ಷಾಂತರ ಮೌಲ್ಯದ ಸೀರೆ, ಒಡವೆ ಹಾಕುವ ನೀತಾ ಮದ್ವೇಗೂ ಮುನ್ನವೂ ಹೀಗೆ ಇದ್ರಾ?

ಆಗರ್ಭ ಶ್ರೀಮಂತ ಉದ್ಯಮಿಯಾಗಿರುವ ಮುಕೇಶ್ ಅಂಬಾನಿಯವರ ಮಡದಿ ನೀತಾ ಅಂಬಾನಿ ವಿವಾಹಪೂರ್ವ ಜೀವನ ಹೇಗಿತ್ತು ಎಂಬುದರ ಬಗ್ಗೆ ಎಲ್ಲರಲ್ಲಿಯೂ ಕುತೂಹಲವಿರುತ್ತದೆ. ಅಂಬಾನಿ ಕುಟುಂಬದ ಸೊಸೆಯಾಗುವ ಮುನ್ನ ನೀತಾ ಅವರ ಜೀವನ ಹೇಗಿತ್ತು ಗೊತ್ತಾ?

ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನೀತಾ, ಅಂಬಾನಿ ಕುಟುಂಬದ ಸೊಸೆಯಾಗಿ ಬಂದಿದ್ದು ಹೇಗೆ? ಮದುವೆಗೂ ಮುನ್ನ ನೀತಾ ಅಂಬಾನಿ ಹಾಕಿದ ಕಂಡೀಷನ್ ಏನು? ಈ ಬಗ್ಗೆ ನೀತಾ ಅಂಬಾನಿಯವರೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮೂರು ತಿಂಗಳ ನಡೆದ ಪುತ್ರ ಅನಂತ್ ಮದುವೆಯಲ್ಲಿ ನೀತಾ ಅಂಬಾನಿ ಧರಿಸಿದ್ದ ಒಂದೊಂದು ಆಭರಣಗಲೂ ಕೋಟಿ ಕೋಟಿ ಮೌಲ್ಯವನ್ನು ಹೊಂದಿದ್ದವು. ವಧುವಿಗಿಂತಲೂ ನೀತಾ ಅಂಬಾನಿಯವರ ಫೋಟೋಗಳೇ ಹೆಚ್ಚು ವೈರಲ್ ಆಗಿದ್ದವು. ಸಂದರ್ಶನವೊಂದರಲ್ಲಿ ತಾವು ಅನುಭವಿಸಿದ ಆರ್ಥಿಕ ಸಂಕಷ್ಟಗಳ ಬಗ್ಗೆ ನೀತಾ ಅಂಬಾನಿ ಹೇಳಿಕೊಂಡಿದ್ದಾರೆ.


ಮುಕೇಶ್ ಅಂಬಾನಿ ಜೊತೆ ನೀತಾ ಅವರ ಮದುವೆ 1985ರಲ್ಲಿ ನಡೆಯಿತು. ದಂಪತಿಗೆ ನೀಶಾ, ಆಕಾಶ್ ಮತ್ತು ಅನಂತ್ ಎಂಬ ಮೂರು ಮಕ್ಕಳಿದ್ದಾರೆ. ಮೂವರು ಮಕ್ಕಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ.

ನೀತಾ ಅಂಬಾನಿ 6ನೇ ವಯಸ್ಸಿನಲ್ಲಿಯೇ ಭರತನಾಟ್ಯ ತರಬೇತಿ ಪಡೆದುಕೊಳ್ಳಲು ಆರಂಭಿಸಿದ್ದರು. ಕಡಿಮೆ ಅವಧಿಯಲ್ಲಿಯೇ ವೃತ್ತಿಪರ ನೃತ್ಯಗಾರ್ತಿಯಾದರು. ಸಣ್ಣ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ವೃತ್ತಿಜೀವನವನ್ನು ನೀತಾ ಅಂಬಾನಿ ಆರಂಭಿಸಿದ್ದರು.

ಒಮ್ಮೆ ಮುಖೇಶ್ ಅಂಬಾನಿ ತಂದೆ ಧೀರೂಬಾಯಿ ಅಂಬಾನಿ, ನೀತಾವರನ್ನು ಭೇಟಿಯಾಗುತ್ತಾರೆ. ಈ ಸಮಯದಲ್ಲಿ ನನ್ನ ಮಗನನ್ನು ಮದುವೆಯಾಗ್ತೀಯಾ ಎಂದು ಧೀರೂಬಾಯಿ ಅಂಬಾನಿ ಕೇಳಿದ್ದರಂತೆ. ಇದಕ್ಕೆ ಒಪ್ಪಿದ ನೀತಾ,  ಸಣ್ಣ ಷರತ್ತು ಸಹ ಹಾಕಿದ್ದರು.

ಮದುವೆ ನಂತರವೂ ನಾನು ಕೆಲಸಕ್ಕೆ ಹೋಗುವೆ ಎಂಬ ಷರತ್ತನ್ನು ನೀತಾ ಹಾಕಿದ್ದರಂತೆ. ಷರತ್ತು ಒಪ್ಪಿದ ಬಳಿಕವೇ ಮದುವಯಾದರು. ಮದುವೆ ಬಳಿಕ ವೂ ಸೈಂಟ್ ಫ್ಲವರ್ ನರ್ಸರಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದು, ತಿಂಗಳಿಗೆ 800 ರೂಪಾಯಿ ಸಂಬಳ ಪಡೆಯುತ್ತಿದ್ದರು.

ಇಂದು ನೀತಾ ಅಂಬಾನಿ ಉಪಯೋಗಿಸುವ ಒಂದೊಂದು ವಸ್ತುಗಳು ಕೋಟಿ ಕೋಟಿ ಮೌಲ್ಯವನ್ನು ಹೊಂದಿವೆ. ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ಇಡೀ ವಿಶ್ವದ ಗಮನವನ್ನು ಸೆಳೆದಿತ್ತು.

Latest Videos

click me!