ವಿಶ್ವದ ಎತ್ತರದ ಹಿಮ ಪರ್ವತ ಏರಿ ಮೈಸೂರಿನ ವೈದ್ಯೆ ಡಾ ಉಷಾ ಹೆಗ್ಡೆ ಸಾಧನೆ!

First Published | Jul 8, 2024, 8:43 PM IST

ಮೈಸೂರಿನ ಐರನ್ ಮ್ಯಾನ್ ಖ್ಯಾತಿಯ ಡಾ ಉಷಾ ಹೆಗ್ಡೆ ವಿಶ್ವದ ಅತಿ ಎತ್ತರದ ಹಿಮ ಪರ್ವತ ಏರುವ ಮೂಲಕ ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ನಾಗರೀಕ ಮಹಿಳೆ ಎನಿಸಿದ್ದಾರೆ.  ಹಿಮಾಲಯ ಹಿಮಾಲಯ ಪರ್ವತಾರೋಹಣ ರೋಮಾಂಚನಗೊಳಿಸುವ ಫೋಟೊಗಗಳು ಇಲ್ಲಿವೆ

52 ವರ್ಷದ ಡಾ.ಉಷಾ ಹೆಗಡೆ(Dr usha hegde mysuru) ಜೆಎಸ್‌ಎಸ್ ಡೆಂಟಲ್ ಕಾಲೇಜಿನ(JSS dental collage) ಪ್ರೊಫೆಸರ್ ಆಗಿದ್ದಾರೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ, ಓದಿದ್ದು ಮೈಸೂರು ಜೆಎಸ್‌ಎಸ್‌ ಡೆಂಟಲ್ ಕಾಲೇಜಿನಲ್ಲಿ. ಅದೇ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದುಕೊಂಡು ಹಿಮಾಲಯ ಪರ್ವತ ಏರಿ ಮಹೋನ್ನತ ಸಾಧನೆ ಮಾಡಿದ್ದಾರೆ.

52 ದಿನಗಳ ಕಾಲ ಸುದೀರ್ಘ ಪ್ರವಾಸ ಮಾಡಿ ಬಂದ ಧೀರ ವನಿತೆ ಡಾ ಉಷಾ ಹೆಗ್ಡೆಯವರ ಪರ್ವತಾರೋಹಣ ಮೈನವಿರೇಳಿಸುವ ಜರ್ನಿ ಟೈಂ ಲೈನ್ ಇಲ್ಲಿದೆ ನೋಡಿ

Tap to resize

ಮೊದಲ ದಿನ ಏಪ್ರಿಲ್ 2 ರಂದು ಮೈಸೂರಿನಿಂದ ಹೊರಟ ಡಾ. ಉಷಾ ಹೆಗ್ಡೆ ವಾಪಸ್ ಬಂದಿದ್ದು ಮೇ.25ರಂದು. ಏ.6 ರಿಂದ ಹಿಮಾಲಯ ಚಾರಣ ಆರಂಭಿಸಿದ್ದಾರೆ.ನೇಪಾಳದ ಲುಕ್ಲಾ ಜಾಗದಿಂದ ನಡಿಗೆ ಆರಂಬಿಸಿ ಏಪ್ರಿಲ್ 8 ರಂದು ಟ್ರಕಿಂಕ್ ಬೇಸ್ ಕ್ಯಾಂಪ್ ರೀಚ್ ಆಗಿದ್ದಾರೆ.

ಮೊದಲ ದಿನ ಏಪ್ರಿಲ್ 2 ರಂದು ಮೈಸೂರಿನಿಂದ ಹೊರಟ ಡಾ. ಉಷಾ ಹೆಗ್ಡೆ ವಾಪಸ್ ಬಂದಿದ್ದು ಮೇ.25ರಂದು. ಏ.6 ರಿಂದ ಹಿಮಾಲಯ ಚಾರಣ ಆರಂಭಿಸಿದ್ದಾರೆ. 

ಬಳಿಕ 20 ದಿನ ಟ್ರಕಿಂಕ್ ಬೇಸ್ ಕ್ಯಾಂಪ್‌ನಲ್ಲಿ ತರಬೇತಿ ಪಡೆದಿದ್ದಾರೆ ನಂತರ ಮೇ 1 ರಿಂದ 13 ದಿನ ಕಾಲ ವೆದರ್ ವಿಂಡೋಗಾಗಿ ಕಾದಿದ್ದಾರೆ. ಅವರಿಗೆ ಹಿಮಾಲಯ ಏರಲು ಮೇ 13 ಗ್ರೀನ್ ಸಿಗ್ನಲ್ ಸಿಕ್ಕಿದೆ. ಚಾರಣ ಪ್ರಾರಂಭಿಸಿದ ವೈದ್ಯೆ ಮೊದಲ ದಿನವೇ ಬೇಸ್ ಕ್ಯಾಂಪ್ ನಿಂದ ಕುಂಬ್ ಐಸ್ ವಾಲ್ ದಾಟಿ ಕ್ಯಾಂಪ್ ಒನ್ ಸೇರಿದ್ದಾರೆ.

ಮೊದಲ ದಿನ ಏಪ್ರಿಲ್ 2 ರಂದು ಮೈಸೂರಿನಿಂದ ಹೊರಟ ಡಾ. ಉಷಾ ಹೆಗ್ಡೆ ವಾಪಸ್ ಬಂದಿದ್ದು ಮೇ.25ರಂದು. ಏ.6 ರಿಂದ ಹಿಮಾಲಯ ಚಾರಣ ಆರಂಭಿಸಿದ್ದಾರೆ. 

 ಒಂದು ರಾತ್ರಿ ‌ ಕ್ಯಾಂಪ್‌ನಲ್ಲಿ ಕಳೆದು ಬಳಿಕ ಕ್ಯಾಂಪ್‌ 2 ತಲುಪಿ ಎರಡು ದಿನ ಕಳೆದಿದ್ದಾರೆ. ನಂತರ 3 ನೇ ದಿನ ಎರಡನೇ ಕ್ಯಾಂಪ್‌ನಿಂದ ಹೊರಟು 3ನೇ ಕ್ಯಾಂಪ್‌ನಲ್ಲಿ ಒಂದು ದಿ‌ನ ಕಳೆದಿದ್ದಾರೆ. ನಂತರ ಕ್ಯಾಂಪ್4 ನಲ್ಲಿ ತಲುಪಿ 3 ಗಂಟೆ ಅಲ್ಲಿ ತಗಿ ಬಳಿಕ ರಾತ್ರಿಯಿಡೀ ನಡೆದು ಮೇ 19 ಬೆಳಗ್ಗೆ 6.10ಕ್ಕೆ ತುದಿ ತಲುಪಿದ್ದಾರೆ.

ಇದಕ್ಕಾಗಿ ಕಳೆದೆರಡು ವರ್ಷಗಳಿಂದ ತಯಾರಿ ಮಾಡಿಕೊಂಡಿದ್ದ ಡಾ ಉಷಾ ಹೆಗ್ಡೆ ಈ ಮೊದಲು ದೇಶದ ಇತರ ಸ್ಥಳಗಳಲ್ಲಿ ಪರ್ವತ ಹತ್ತಿ ತಯಾರಿ ಮಾಡಿದ್ರು. ಅಂದಹಾಗೆ ಇವರು ಹಿಮಾಲಯ ಏರಲು ಸ್ನೋಯಿ ಹೊರಯ್ಸನ್ ಏಜೆನ್ಸಿ(Snowy Horizon Agency) ಮೂಲಕ ಹೋಗಿದ್ದರು. ತಮ್ಮ ಬಹು ದಿನದ ಕನಸನ್ನು ನನಸು ಮಾಡಿಕೊಂಡ ಉಷಾ ಅವರು ತಮ್ಮ‌ ಸಂತಸವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಹಂಚಿಕೊಂಡಿದ್ದಾರೆ.

Latest Videos

click me!