ಬೇರೆ ಜನಾಂಗದ ಗಂಡಸ್ರ ಕಣ್ಣು ಬೀಳದಿರಲು ಈ ಬುಡಕಟ್ಟು ಮಹಿಳೆ ಕುತ್ತಿಗೆಗೆ ಬಿತ್ತು ರಿಂಗ್

First Published | Aug 7, 2024, 3:07 PM IST

ಮ್ಯಾನ್ಮಾರ್‌ನ ಕಾಯನ್ ಬುಡಕಟ್ಟು ಜನಾಂಗದವರು ಹಿತ್ತಾಳೆಯಿಂದ ಮಾಡಿದ ಉದ್ದವಾದ ರಿಂಗ್ ಕುತ್ತಿಗೆಗೆ ಧರಿಸುತ್ತಾರೆ. ಇದು ಕಾಯನ್ ಬುಡಕಟ್ಟು ವಿಲಕ್ಷಣ ಸಂಪ್ರದಾಯವಾಗಿದೆ. ಈ ಬುಡಕಟ್ಟಿನ ಮಹಿಳೆಯರು ಈ ಉಂಗುರಗಳನ್ನು ಒಂದರ ಮೇಲೊಂದರಂತೆ ಒಂದು ಅಡಿ ಉದ್ದಕ್ಕೂ ತಮ್ಮ ಕುತ್ತಿಗೆಗೆ ಧರಿಸುತ್ತಾರೆ.
 

ಜಗತ್ತಿನಲ್ಲಿರುವ ಪ್ರತಿಯೊಂದು ದೇಶಗಳ ಆಚರಣೆ, ಆಚಾರ, ಸಂಪ್ರದಾಯ ಎಲ್ಲವೂ ವಿಭಿನ್ನ. ಮಯಾನ್ಮಾರ್ (Mayanmar) ದೇಶದ ಜನರ ಆಚರಣೆಗಳೂ ವಿಭಿನ್ನವಾಗಿದೆ. ಅದರಲ್ಲೂ ಈ ದೇಶಗಳಲ್ಲಿ ಇನ್ನೂ ಅನೇಕ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದು ಅವರು ತಮ್ಮ ಪ್ರಾಚೀನ ನಂಬಿಕೆಗಳನ್ನು ಅನುಸರಿಸುತ್ತಿದ್ದಾರೆ. ಅಂತಹ ಒಂದು ಬುಡಕಟ್ಟು ಮ್ಯಾನ್ಮಾರ್‌ನಲ್ಲಿ ವಾಸಿಸುತ್ತಿದೆ. ಅದುವೇ ಕಾಯನ್ ಜನಾಂಗ (kayan tribe). 
 

ಈ ಕಾಯನ್ ಜನಾಂಗದ ಆಚರಣೆಯೇ ವಿಚಿತ್ರ.  ಈ ಬುಡಕಟ್ಟು ಮಹಿಳೆಯರ ಕುತ್ತಿಗೆ ಜಿರಾಫೆಯ ಕುತ್ತಿಗೆಯಷ್ಟು ಉದ್ದವಾಗಿ ಬೆಳೆಯುತ್ತವೆ! ಈ ರೀತಿಯಾಗಿ ಉದ್ದ ಬೆಳೆಯುವ ಸಲುವಾಗಿಯೇ ಇಲ್ಲಿನ ಮಹಿಳೆಯರು ತಮ್ಮ ಕುತ್ತಿಗೆಗೆ ಲೋಹದ ಉಂಗುರಗಳನ್ನು (neck ring) ಧರಿಸುತ್ತಾರೆ. ಇದೀಗ ಈ ಪ್ರದೇಶ ಪ್ರವಾಸಿ ತಾಣವಾಗಿ ಬದಲಾಗಿದ್ದು, ನೂರಾರು ಪ್ರವಾಸಿಗರು ಈ ಹಳ್ಳಿಗಳಿಗೆ ಹೋಗಿ ಈ ಮಹಿಳೆಯರೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಅಷ್ಟಕ್ಕೂ ಉದ್ದ ಕುತ್ತಿಗೆ ಮೂಲಕ ವಿಚಿತ್ರವಾಗಿ ಕಾಣಿಸುವಂತೆ ಈ ಜನರು ಕುತ್ತಿಗೆಗೆ ರಿಂಗ್ ಹಾಕೋದು ಯಾಕೆ ಅನ್ನೋದು ತಿಳಿದ್ರೆ ನಿಮಗೆ ಅಚ್ಚರಿಯಾಗೋದು ಖಚಿತ. 

Tap to resize

ಮ್ಯಾನ್ಮಾರ್ನ ಕಾಯನ್ ಬುಡಕಟ್ಟು ಜನಾಂಗದವರು ಹಿತ್ತಾಳೆಯಿಂದ ಮಾಡಿದ ಉಂಗುರಗಳನ್ನು ಕುತ್ತಿಗೆಗೆ ಸುತ್ತಿಕೊಳ್ಳುತ್ತಾರೆ. ಈ ಬುಡಕಟ್ಟಿನ ಮಹಿಳೆಯರು (tribe women) ಈ ಉಂಗುರವನ್ನು ತಮ್ಮ ಕುತ್ತಿಗೆಯಲ್ಲಿ ಒಂದರ ಮೇಲೊಂದರಂತೆ ಧರಿಸುತ್ತಾರೆ. ಕೆಳಗಡೆ ದೊಡ್ಡ ಗಾತ್ರದ ಉಂಗುರ ಧರಿಸಿದ್ರೆ, ಮತ್ತೆ ಮೇಲಕ್ಕೆ ಹೋದಂತೆ ಸಣ್ಣ ಸಣ್ಣ ಗಾತ್ರದ ಉಂಗುರ ಧರಿಸುತ್ತಾರೆ.. ಈ ರೀತಿಯಾಗಿ, ಅವರ ಕುತ್ತಿಗೆಗಳು ಉದ್ದವಾಗಿ ಬೆಳೆಯುತ್ತದೆ. ಅವರು ಚಿಕ್ಕ ವಯಸ್ಸಿನಿಂದಲೇ ಉಂಗುರಗಳನ್ನು ಧರಿಸಲು ಪ್ರಾರಂಭಿಸುತ್ತಾರೆ, ಇದು ಗಂಟಲಿನ ಆಕಾರವನ್ನೇ ಬದಲಾಯಿಸಿ ಸಣ್ಣಗೆ ಮತ್ತು ಉದ್ದನೆ ಬೆಳೆಯುತ್ತೆ. 
 

ಇಲ್ಲಿನ ಮಹಿಳೆಯರು ಕುತ್ತಿಗೆಗೆ ಉಂಗುರ ಯಾಕೆ ಹಾಕ್ತಾರೆ ಗೊತ್ತ?
ಮಹಿಳೆಯರ ಕುತ್ತಿಗೆ ತೆಳ್ಳಗೆ ಮತ್ತು ಉದ್ದವಾಗಿದ್ದರೆ, ಅವರು ಹೆಚ್ಚು ಸುಂದರವಾಗಿ ಕಾಣುತ್ತಾರೆ ಎಂದು ಈ ಬುಡಕಟ್ಟು ಜನಾಂಗದಲ್ಲಿ ನಂಬಲಾಗಿದೆ. ಈ ಹಿತ್ತಾಳೆ ಉಂಗುರಗಳು 20 ಕೆ.ಜಿ.ವರೆಗೂ ತೂಗುತ್ತದೆ. ಇದನ್ನ ಧರಿಸಿಕೊಂಡು, ಹೊಲಗಳಲ್ಲಿ ಕೆಲಸ ಮಾಡೋದು ಎಷ್ಟು ಕಷ್ಟ ಎಂದು ನೀವು ಊಹಿಸಬಹುದು. ಆದರೂ ಜನ ಈ ಪದ್ಧತಿಯನ್ನು ಆಚರಿಸಿಕೊಂಡು ಬರುತ್ತಾರೆ. 

ಈ ಅಭ್ಯಾಸವು ಪ್ರಾರಂಭವಾದಾಗ, ಉದ್ದನೆಯ ಕುತ್ತಿಗೆಯನ್ನು ಹೊಂದಿರುವ ಮಹಿಳೆ ಕುರೂಪವಾಗಿ ಕಾಣುತ್ತಾಳೆ ಮತ್ತು ಅವಳನ್ನು ಮತ್ತೊಂದು ಬುಡಕಟ್ಟು ಜನಾಂಗದ ಜನರು ಅಪಹರಿಸುವುದಿಲ್ಲ ಎಂದು ನಂಬಲಾಗಿತ್ತು. ತಮ್ಮ ಜನಾಂಗದ ಮಹಿಳೆಯರನ್ನ ಸುರಕ್ಷಿತವಾಗಿಡಲು ಕಯಾನ್ ಜನಾಂಗದ ಮಹಿಳೆಯರು ರಿಂಗ್ ಧರಿಸುವ ಮೂಲಕ ಕುತ್ತಿಗೆಯನ್ನು ಉದ್ದವಾಗಿಸುತ್ತಿದ್ದರು.
 

ಈ ಜನರು ವಾಸಿಸುವ ಹಳ್ಳಿಗಳಲ್ಲಿ ಶತಮಾನಗಳಿಂದಲೂ ಹುಲಿಗಳು ಕಂಡುಬಂದಿವೆ, ಅವು ಮಾನವರ ಮೇಲೆ ದಾಳಿ ಮಾಡಿದ್ದೂ ಇವೆ. ದಾಳಿಯಲ್ಲಿ, ಹುಲಿಗಳು ಮೊದಲು ಮನುಷ್ಯನ ಕುತ್ತಿಗೆಯ ಮೇಲೆ ದಾಳಿ (tiger attack) ಮಾಡುತ್ತವೆ. ಆದ್ದರಿಂದ ಇಲ್ಲಿನ ಮಹಿಳೆಯರು ವರ್ಷಗಳಿಂದ ಗಂಟಲನ್ನು ಲೋಹದ ಉಂಗುರಗಳಿಂದ ಮುಚ್ಚಲು ಪ್ರಾರಂಭಿಸಿದರು. ಇದರಿಂದ ಹುಲಿಯ ದಾಳಿಯಿಂದ ರಕ್ಷಣೆ ಪಡೆಯೋದಕ್ಕೂ ಸಾಧ್ಯ ಆಯಿತು. 
 

ಹುಡುಗಿಯರು ಚಿಕ್ಕ ವಯಸ್ಸಿನಿಂದಲೇ ಉಂಗುರಗಳನ್ನು ಧರಿಸುತ್ತಾರೆ
5-6 ವರ್ಷ ಇರೋವಾಗ್ಲೇ, ಹುಡುಗಿಯರು ಕುತ್ತಿಗೆಗೆ ರಿಂಗ್ ಧರಿಸಲು ಪ್ರಾರಂಭಿಸುತ್ತಾರೆ. ಈ ರಿಂಗ್ ಬೆಲೆ ಬರೋಬ್ಬರಿ 20 ಸಾವಿರ ರೂಪಾಯಿಗಳವರೆಗೆ ಬೆಲೆ ಬಾಳುತ್ತದೆ. ಇಂದಿನ ಕಾಲದಲ್ಲಿ, ಅನೇಕ ಯುವತಿಯರು ರಿಂಗ್ ಧರಿಸಲು ಇಷ್ಟಪಡೋದಿಲ್ಲ. ಆದರೆ ಈ ಸಂಪ್ರದಾಯವನ್ನು ಕಾಪಾಡಿಕೊಳ್ಳಲು ಅನೇಕ ಜನರು ಇನ್ನೂ ರಿಂಗ್ ಧರಿಸುತ್ತಾರೆ.

Latest Videos

click me!