ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಬೆನ್ನುನೋವು, ಹೊಟ್ಟೆ ನೋವು, ಶ್ರೋಣಿಯ ನೋವು, ದೌರ್ಬಲ್ಯ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಮತ್ತೊಂದೆಡೆ, ಮುಖದ ಮೇಲೆ ಅನೇಕ ಮೊಡವೆಗಳು (pimple problem)ಹೊರಬರುತ್ತವೆ. ಇವು ಪಿರಿಯಡ್ಸ್ ನ್ನು ಇನ್ನಷ್ಟು ತೊಂದರೆಗೊಳಗಾಗುವಂತೆ ಮಾಡುತ್ತೆ. ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳಾಗುತ್ತವೆ, ಇದು ಮೊಡವೆಗಳ ಸಮಸ್ಯೆಗೆ ಕಾರಣವಾಗುತ್ತದೆ. ತಪ್ಪು ಆಹಾರ ಪದ್ಧತಿಯಿಂದಾಗಿ ಮುಖದ ಮೇಲೆ ಮೊಡವೆ ಮೂಡುತ್ತವೆ.
ವರದಿಯ ಪ್ರಕಾರ, ಪಿರಿಯಡ್ಸ್ ಗೆ 7-8 ದಿನಗಳ ಮೊದಲು ಮೊಡವೆಗಳು ಮುಖದ ಮೇಲೆ ಮೂಡಲು ಪ್ರಾರಂಭಿಸುತ್ತವೆ. ತಜ್ಞರ ಪ್ರಕಾರ, ಋತುಚಕ್ರದ ಸಮಯದಲ್ಲಿ, ದೇಹದಲ್ಲಿ ಈಸ್ಟ್ರೋಜೆನ್ ಮಟ್ಟ ಕಡಿಮೆಯಾಗುತ್ತದೆ ಮತ್ತು ಟೆಸ್ಟೋಸ್ಟೆರಾನ್ ಹೆಚ್ಚಾಗುತ್ತದೆ. ಇದು ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಯದಲ್ಲಿ ಚರ್ಮದ ವಿಶೇಷ ಆರೈಕೆಯ ಅಗತ್ಯವಿದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಋತುಚಕ್ರದ (periods) ಸಮಯದಲ್ಲಿಯೂ ಮೊಡವೆಗಳನ್ನು ನಿವಾರಿಸಬಹುದು.
ಪಿರಿಯಡ್ಸ್ ದಿನಗಳಲ್ಲಿ ಈ ಸಮಸ್ಯೆಯನ್ನು ತಪ್ಪಿಸಲು, ನಿಮ್ಮ ಆಹಾರದ (food habits) ಬಗ್ಗೆ ವಿಶೇಷ ಕಾಳಜಿ ವಹಿಸಿ. ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ. ಆಹಾರದಲ್ಲಿ ಹಗುರವಾದ ಮತ್ತು ನಾರಿನಂಶ ಹೆಚ್ಚಿರುವ ಅಹಾರ ಸೇರಿಸಿ. ನೀವು ಸೇವಿಸುವ ಆಹಾರ ನಿಮ್ಮ ಆರೋಗ್ಯ ಮತ್ತು ಸೌಂದರ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ದೇಹವು ಹೈಡ್ರೇಟ್ (hydrate) ಆಗಿರಲು ಸಾಕಷ್ಟು ನೀರು ಕುಡಿಯಿರಿ. ನೀವು ಹಣ್ಣಿನ ರಸವನ್ನು ಸೇವಿಸಬೇಕು. ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿ. ಉದಾಹರಣೆಗೆ, ನೀವು ಪಾಲಕ್, ಸೋರೆಕಾಯಿಯನ್ನು ಮುಟ್ಟಿನ ಸಮಯದಲ್ಲಿ ಕುದಿಸಿ ತಿನ್ನಬಹುದು. ಇದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.
ಪಿರಿಯಡ್ಸ್ ಸಮಯದಲ್ಲಿ ಪಪ್ಪಾಯಿ ಸೇವಿಸಬೇಕು. ಇದರ ಸೇವನೆಯು ಋತುಚಕ್ರದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಅಷ್ಟೇ ಅಲ್ಲ, ಪಪ್ಪಾಯಿಯನ್ನು ನಿಯಮಿತವಾಗಿ ಸೇವನೆ ಮಾಡೋದರಿಂದ ಚರ್ಮವನ್ನು ಮೊಡವೆಗಳಿಂದ ರಕ್ಷಿಸುತ್ತದೆ. ಚರ್ಮ ಆರೋಗ್ಯದಿಂದ ಇರಲು ಪಪ್ಪಾಯಿ ಸಹಾಯ ಮಾಡುತ್ತೆ.
ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ನೀವು ಅದನ್ನು ಹಾಲಿನೊಂದಿಗೆ (turmeric milk) ಬೆರೆಸಿ ಕುಡಿಯಬಹುದು. ಇದು ನೋವನ್ನು ನಿವಾರಿಸುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿಸುತ್ತದೆ. ಇದನ್ನು ನೀವು ಪ್ರತಿದಿನ ಸೇವನೆ ಮಾಡುವುದು ಸಹ ಆರೋಗ್ಯಕ್ಕೆ ತುಂಬಾನೆ ಉತ್ತಮವಾಗಿದೆ.
ಋತುಚಕ್ರದ ಸಮಯದಲ್ಲಿ ಮೇಕಪ್ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಿ. ಇದು ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತದೆ. ಪಿರಿಯಡ್ಸ್ ಸಮಯದಲ್ಲಿ ಬಾಳೆಹಣ್ಣು, ನೆಲ್ಲಿಕಾಯಿ, ಸೇಬು ಇತ್ಯಾದಿಗಳನ್ನು ಸೇವಿಸಿ, ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.