ಭಾರತದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲೊಂದು ಅಂಬಾನಿ ಕುಟುಂಬ. ಮುಕೇಶ್ ಅಂಬಾನಿ-ನೀತಾ ಅಂಬಾನಿ, ಮಕ್ಕಳಾದ ಆಕಾಶ್ ಅಂಬಾನಿ, ಅನಂತ್ ಅಂಬಾನಿ, ಇಶಾ ಅಂಬಾನಿ ಯಾವಾಗಲೂ ಲಕ್ಸುರಿಯಸ್ ಲೈಫ್‌ಸ್ಟೈಲ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಆದ್ರೆ ಎಲ್ಲರ ಗಮನಕ್ಕೆ ಬೀಳದ ಇನ್ನೂ ಹಲವು ಸದಸ್ಯರು ಅಂಬಾನಿ ಕುಟುಂಬದಲ್ಲಿದ್ದಾರೆ.
ಅಂಥವರಲ್ಲಿ ಒಬ್ಬರು, ಬಿಲಿಯನೇರ್ ಮುಕೇಶ್ ಅಂಬಾನಿ ಸಹೋದರಿ ನೀನಾ ಕೊಠಾರಿ. ಸ್ವತಃ ಮುಕೇಶ್ ಅಂಬಾನಿಯಂತೆಯೇ ಈಕೆಯೂ ಬೃಹತ್ ಉದ್ಯಮಿಯಾಗಿದ್ದು, ಅಪಾರ ಸಂಪತ್ತನ್ನು ಸಹ ಹೊಂದಿದ್ದಾರೆ.
ಕೊಠಾರಿ ಶುಗರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್‌ನ ಅಧ್ಯಕ್ಷೆಯಾಗಿ ನೀನಾ ಮೌನವಾಗಿ ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದಾರೆ. ಕಾರ್ಪೊರೇಟ್ ಜಗತ್ತಿನಲ್ಲಿ ಹೆಚ್ಚು ಪರಿಚಿತವಾದ ಹೆಸರು ನೀತಾ ಕೊಠಾರಿ.
ನೀನಾ, ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ದಿವಂಗತ ಧೀರೂಭಾಯಿ ಅಂಬಾನಿ ಅವರ ಪುತ್ರಿ. 2003ರಲ್ಲಿ ಜಾವಗ್ರೀನ್ ಎಂಬ ಕಾಫಿ ಮತ್ತು ಆಹಾರದ ಉದ್ಯಮದ ಮೂಲಕ ಬಿಸಿನೆಸ್ ಆರಂಭಿಸಿದರು. ಜಾವಗ್ರೀನ್ ಇತರ ಪ್ರಮುಖ ಕಾಫಿ ಸರಪಳಿಗಳಂತೆ ಜನಪ್ರಿಯವಾಗದಿದ್ದರೂ, ಇದು ನೀನಾ ಅವರ ಉದ್ಯಮಶೀಲತೆಯ ಕುಶಾಗ್ರಮತಿಯನ್ನು ಬಹಿರಂಗಪಡಿಸಿತು.
ನೀನಾ ಪತಿ, ಉದ್ಯಮಿ ಭದ್ರಶ್ಯಾಮ್ ಕೊಠಾರಿ 2015ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ಇಬ್ಬರು ಮಕ್ಕಳಾದ ಅರ್ಜುನ್ ಮತ್ತು ನಯನತಾರಾ ಅವರನ್ನು ಬೆಳೆಸುವ ಜವಾಬ್ದಾರಿ ನೀನಾ ಮೇಲೆ ಬಿತ್ತು. ಇಂಥಾ ಸಂದರ್ಭದಲ್ಲಿ ನೀನಾ, ಕುಟುಂಬದ ವ್ಯವಹಾರವಾದ ಕೊಥಾರಿ ಶುಗರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್‌ನ ಜವಾಬ್ದಾರಿಯನ್ನು ತೆಗೆದುಕೊಂಡರು.
ನೀನಾ ಕೊಠಾರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಮತ್ತು ಕೊಥಾರಿ ಸೇಫ್ ಡೆಪಾಸಿಟ್ಸ್ ಲಿಮಿಟೆಡ್ ಸೇರಿದಂತೆ HC ಕೊಥಾರಿ ಗ್ರೂಪ್ ಛತ್ರಿ ಅಡಿಯಲ್ಲಿ ಇತರ ವ್ಯಾಪಾರ ಉದ್ಯಮಗಳನ್ನು ನಿರ್ವಹಿಸುತ್ತಾರೆ
ಹಿರಿಯ ಮಗ ಅರ್ಜುನ್ ಕೊಠಾರಿ ಕೊಠಾರಿ ಶುಗರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೀನಾ ಅವರ ಮಗಳು ನಯನತಾರಾ, ಶ್ಯಾಮ್ ಮತ್ತು ಶೋಭನಾ ಭಾರ್ತಿಯಾ ಅವರ ಮಗ ಮತ್ತು ಕೆಕೆ ಬಿರ್ಲಾ ಅವರ ಮೊಮ್ಮಗ ಶಮಿತ್ ಭಾರ್ತಿಯಾ ಅವರನ್ನು ವಿವಾಹವಾಗಿದ್ದಾರೆ.
ಸಹೋದರನಂತೆಯೇ, ನೀನಾ ಕೂಡ ಬೃಹತ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಸಾರ್ವಜನಿಕವಾಗಿ ಎರಡು ಷೇರುಗಳನ್ನು ಹೊಂದಿದ್ದಾರೆ ಮತ್ತು ಕಾರ್ಪೊರೇಟ್ ಷೇರುಗಳ ಪ್ರಕಾರ 52.4 ಕೋಟಿಗಳಷ್ಟು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ, ಕೊಥಾರಿ ಶುಗರ್ಸ್ & ಕೆಮಿಕಲ್ಸ್ ಲಿಮಿಟೆಡ್ ಬರೋಬ್ಬರಿ 435 ಕೋಟಿ ಮೌಲ್ಯವನ್ನು ಹೊಂದಿದೆ.