ಮೇಕಪ್ ಇಲ್ಲದೇ ಸೇಮ್ ಅಪ್ಪನ ತರಾನೇ ಕಾಣೋ ಅಂಬಾನಿ ಮಗಳು ಇಶಾ, ಸಿಂಪಲ್ ಲುಕ್‌ಗೆ ನೆಟ್ಟಿಗರು ಫಿದಾ!

Published : Mar 15, 2024, 04:23 PM IST

ದೇಶದ ಅತ್ಯಂತ ಶ್ರೀಮಂತ ಮುಖೇ‍ಶ್‌ ಅಂಬಾನಿ ಪುತ್ರಿ ಇಶಾನ್ ಅಂಬಾನಿ (Isha Ambani) ಅವರ ಪೋಟೋಗಳು ಹಾಗೂ ವೀಡಿಯೋ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ಇಶಾ ಅಂಬಾನಿ ಅವರು ತನ್ನ ಮಕ್ಕಳ ಪ್ರಿ-ಸ್ಕೂಲ್ ಹೊರಗೆ ಕಾಯುತ್ತಿರುವುದು ಕಾಣಬಹುದು. ಅಷ್ಟೇ ಅಲ್ಲ ಇಶಾ ಯಾವುದೇ ಮೇಕಪ್‌ ಇಲ್ಲದೆ ಕ್ಯಾಶುವಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ. 

PREV
18
ಮೇಕಪ್ ಇಲ್ಲದೇ ಸೇಮ್ ಅಪ್ಪನ ತರಾನೇ ಕಾಣೋ ಅಂಬಾನಿ ಮಗಳು ಇಶಾ, ಸಿಂಪಲ್ ಲುಕ್‌ಗೆ ನೆಟ್ಟಿಗರು ಫಿದಾ!
Isha Ambani

ಅಂಬಾನಿ ಪುತ್ರಿ ಇಶಾ ಅಂಬಾನಿಯನ್ನು  ಫ್ಯಾಶನ್ ರಾಣಿ ಎಂದು ಕರೆಯಲಾಗುತ್ತದೆ ಮತ್ತು ಅವರ  ಆಯ್ಕೆ ಯಾವಾಗಲೂ ಹೈ-ಎಂಡ್ ಐಷಾರಾಮಿ ಲೇಬಲ್‌ಗಳ ಡ್ರೆಸ್‌ಗಳಿಂದ ತುಂಬಿರುತ್ತದೆ. 

28

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಪೂರ್ವದ ಬ್ಯಾಷ್‌ಗಾಗಿ ಅವರ ಕಸ್ಟಮ್ ಮಿಸ್ ಸೊಹೀ ಗೌನ್ ಆಗಿರಬಹುದು ಅಥವಾ  ಮೈಸನ್ ವ್ಯಾಲೆಂಟಿನೋ ವಿನ್ಯಾಸಗೊಳಿಸಿದ ಅವರ ಮದುವೆಯ ಗೋಲ್ಡನ್ ಲೆಹೆಂಗಾ ಆಗಿರಬಹುದು ಇಶಾ ಯಾವಾಗಲೂ ಎಕ್ಸ್‌ಕ್ಲ್ಯೂಸಿವ್‌ ಔಟ್‌ಫಿಟ್‌ ಧರಿಸುವುದು ನೋಡಿದ್ದೇವೆ.

38

ಆದೇ ಇಶಾ ಅಂಬಾನಿ ಅವರು ಯಾವುದೇ ಮೇಕಪ್‌ ಇಲ್ಲದೆ ಕ್ಯಾಶುವಲ್‌ ಡ್ರೆಸ್‌ನಲ್ಲಿ ಸಖತ್‌ ಸಿಂಪಲ್‌ ಆಗಿ ತನ್ನ ಮಕ್ಕಳ ಪ್ರಿಸ್ಕೂಲ್‌ನ ಹೊರಗೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. 

48

ಮಕ್ಕಳು   ಪ್ರಿಸ್ಕೂಲ್‌ನಿಂದ ಹೊರಬರುವ ಸಮಯಕ್ಕಾಗಿ ಸರದಿಯಲ್ಲಿ ತಾಳ್ಮೆಯಿಂದ ಕಾಯುತ್ತಿರುವ ಇಶಾ ಅಂಬಾನಿ ತಾನು ಕೂಡ ಸಾಮಾನ್ಯ ತಾಯಿಯಂತೆ ಎಂದು ಸಾಬೀತುಪಡಿಸಿದ್ದಾರೆ.


 

58

 ಮಕ್ಕಳಿಗಾಗಿ  ಪ್ರಿಸ್ಕೂಲ್‌ನಿಂದ ಹೊರಗೆ ಯಾವುದೇ ಸಿಬ್ಬಂದಿ ಮತ್ತು ಭದ್ರತೆಯಿಲ್ಲದೆ ಕಾಯುತ್ತಿರುವುದು ಕಂಡುಬಂದಿದೆ  ಮತ್ತು ಯಾವುದೇ ಮೇಕ್ಅಪ್ ಇಲ್ಲದ ಅವರ ಸರಳವಾದ ಉಡುಪು  ಇಶಾ ಅಂಬಾನಿ ಸರಳ ಜೀವನ ಮತ್ತು ಉನ್ನತ ಚಿಂತನೆಗೆ ಉತ್ತಮ ಉದಾಹರಣೆಯಾಗಿದೆ. 

68

ಇಶಾ ಅಂಬಾನಿ  ತನ್ನ ವೃತ್ತಿಜೀವನದಲ್ಲಿ ಎಷ್ಟು ಕಾರ್ಯನಿರತವಾಗಿದ್ದರೂ ಮತ್ತು ತನ್ನ ಮಕ್ಕಳೊಂದಿಗೆ ಇರಲು ಸಮಯ ತೆಗೆದುಕೊಳ್ಳುವ ಇಶಾ ಅಂಬಾನಿ ತನ್ನ ತಾಯಿಯ ಕರ್ತವ್ಯಗಳಿಗೆ ಆದ್ಯತೆ ನೀಡಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

78

ಇಶಾರ ಸಿಂಪಲ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದು, ಅವರ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಜೊತೆಗೆ ಮೇಕಪ್ ಇಲ್ಲದೇ ಸೇಮ್ ಅಪ್ಪನ ತರನೇ ಕಾಣುತ್ತಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ. 

88

ಇಶಾ ಅಂಬಾನಿ  ಉದ್ಯಮಿ ಆನಂದ್ ಪಿರಾಮಲ್ ಅವರನ್ನು ವಿವಾಹವಾಗಿದ್ದಾರೆ. ಇಶಾ ನವೆಂಬರ್ 19, 2022 ರಂದು ಅವಳಿ ಮಕ್ಕಳಾದ ಕೃಷ್ಣ ಮತ್ತು ಆದಿಯಾ ಅವರಿಗೆ ತಾಯಿಯಾದರು.

Read more Photos on
click me!

Recommended Stories