ಹೊಸ ವರ್ಷ ಬಂದೇ ಬಿಟ್ಟಿದೆ. ಹೊಸ ವರ್ಷದೊಂದಿಗೆ, ಹೊಸ ಭರವಸೆಗಳು, ಅವಕಾಶಗಳು ಮತ್ತು ನಿರೀಕ್ಷೆಗಳು ಸಹ ಪ್ರಾರಂಭವಾಗುತ್ತವೆ. ನೀವು ಹೊಸ ವರ್ಷದ ಬಗ್ಗೆ ಸಾಕಷ್ಟು ಯೋಚಿಸಿರಬೇಕು, ಆದರೆ ನಿಮ್ಮ ಮಗುವಿಗೆ ಹೊಸ ವರ್ಷದ ಗುರಿಗಳನ್ನು ನೀವು ಇಲ್ಲಿಯವರೆಗೆ ನಿಗದಿಪಡಿಸಿದ್ದೀರಾ? ನಿಮ್ಮ ಉತ್ತರವು 'ಇಲ್ಲ' ಆಗಿದ್ದರೆ ಇಲ್ಲಿ ಉಲ್ಲೇಖಿಸಲಾದ ಕೆಲವೊಂದು ನಿರ್ಣಯಗಳನ್ನು (new year resolution) ನೀವು 2023 ರ ಹೊಸ ವರ್ಷಕ್ಕೆ ನಿಮ್ಮ ಮಗುವಿಗೆ ಅಳವಡಿಸಿಕೊಳ್ಳುವಂತೆ ನೋಡಿಕೊಂಡರೆ, ಮಗುವು ಹೊಸ ವರ್ಷದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಮತ್ತು ತನ್ನ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗೋದು ಖಚಿತ.