ಗರ್ಭಾವಸ್ಥೆಯಲ್ಲಿ ಹೆಚ್ಚು ಹೊತ್ತು ನಿಲ್ಲೋದು ಡೇಂಜರಾ?

Published : Dec 26, 2022, 03:08 PM IST

ಗರ್ಭಾವಸ್ಥೆಯಲ್ಲಿ, ಹೆಚ್ಚಿನ ಮಹಿಳೆಯರ ಮನಸ್ಸಿನಲ್ಲಿ ಅವರು ದೀರ್ಘಕಾಲದವರೆಗೆ ನಿಲ್ಲುವುದು ಸರಿಯಾ ಅಥವಾ ತಪ್ಪಾ ಎಂಬ ಪ್ರಶ್ನೆ ಉದ್ಭವಿಸುತ್ತೆ.ಕೆಲವರು ದೀರ್ಘಕಾಲದವರೆಗೆ ನಿಲ್ಲೋದು ಸರಿ ಎನ್ನುತ್ತಾರೆ, ಇನ್ನೂ ಕೆಲವರು ನಿಲ್ಲೋದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಈ ಬಗ್ಗೆ ಡಾಕ್ಟರ್ ಏನು ಹೇಳ್ತಾರೆ ಇಲ್ಲಿ ತಿಳಿಯಿರಿ. 

PREV
114
ಗರ್ಭಾವಸ್ಥೆಯಲ್ಲಿ ಹೆಚ್ಚು ಹೊತ್ತು ನಿಲ್ಲೋದು ಡೇಂಜರಾ?

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು(Pregnancy) ಸಕ್ರಿಯರಾಗಿರಬೇಕು. ಆದರೆ ಗರ್ಭಿಣಿ ಮಹಿಳೆ ದೀರ್ಘಕಾಲದವರೆಗೆ ನಿಂತರೆ ಮಗುವಿನ ಗಾತ್ರ ಮತ್ತು ಬೆಳವಣಿಗೆಗೆ ಅಡ್ಡಿಯಾಗಬಹುದು. ಈ ಕಾರಣಕ್ಕಾಗಿಯೇ ಗರ್ಭಧಾರಣೆಯ ಸಮಯದಲ್ಲಿ ನಡೆದಾಡೋದು ಮತ್ತು ಪೊಸಿಷನ್ ಬದಲಾಯಿಸೋದು ಒಳ್ಳೇದು. ಆದರೆ ದೀರ್ಘಕಾಲದವರೆಗೆ ನಿಲ್ಲಬೇಕಾದ ಕೆಲಸ ಹೊಂದಿರುವ ಮಹಿಳೆಯರು, ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

214

ಗರ್ಭಾವಸ್ಥೆಯಲ್ಲಿ ದೀರ್ಘಕಾಲದವರೆಗೆ ನಿಲ್ಲೋದು ಬೆನ್ನು ನೋವಿಗೆ (Back pain) ಕಾರಣವಾಗಬಹುದು ಮತ್ತು ಮಗುವಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರಬಹುದು. ನಿಲ್ಲೋದರಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ನೀವು ಕೆಲವು ಪ್ರಮುಖ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆಂದು ತಿಳಿಯೋಣ.  

314
ಗರ್ಭಾವಸ್ಥೆಯಲ್ಲಿ ದೀರ್ಘಕಾಲ ನಿಲ್ಲೋದು ಸುರಕ್ಷಿತವೇ?

ಗರ್ಭಾವಸ್ಥೆಯಲ್ಲಿ ಹೆಚ್ಚು ಸಮಯ ನಿಲ್ಲೋದು ಕಾಲು ಮತ್ತು ಬೆನ್ನಿನಲ್ಲಿ ನೋವಿಗೆ ಕಾರಣವಾಗಬಹುದು. ಇದು ಭ್ರೂಣದಲ್ಲಿ ರಕ್ತದ ಹರಿವನ್ನು ಸಹ ಕಡಿಮೆ ಮಾಡುತ್ತೆ, ಇದು ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು. ವಾರಕ್ಕೆ 25 ಗಂಟೆಗಳಿಗಿಂತ ಹೆಚ್ಚು ಕಾಲ ನಿಲ್ಲೋದರಿಂದ 148-198 ಗ್ರಾಂ ಕಡಿಮೆ ತೂಕದ(Less weight) ಶಿಶುಗಳಿಗೆ ಜನ್ಮ ನೀಡಬಹುದು ಎಂದು ಅನೇಕ ಅಧ್ಯಯನಗಳು ತೋರಿಸುತ್ತವೆ. ಇದಲ್ಲದೆ, ಮಗುವಿನ ಎತ್ತರ ಸಹ ಕಡಿಮೆ ಆಗಬಹುದು. 

414
ಗರ್ಭಾವಸ್ಥೆಯಲ್ಲಿ(Pregnancy) ಎಷ್ಟು ಕಾಲ ನಿಲ್ಲಬಹುದು?

ಗರ್ಭಾವಸ್ಥೆಯಲ್ಲಿ, ದೇಹಕ್ಕೆ ಯಾವುದೇ ರೀತಿಯ ಸಮಸ್ಯೆ ಇರುವವರೆಗೆ ಅಥವಾ ಕಾಲು ಮತ್ತು ಬೆನ್ನು ನೋವು ಉಂಟಾಗುವವರೆಗೆ ನಿಲ್ಲಬಹುದು. ಕೆಲವು ಕಾರಣಗಳಿಗಾಗಿ ದೀರ್ಘಕಾಲದವರೆಗೆ ನಿಲ್ಲಬೇಕಾದ್ರೆ, ಕಾಲುಗಳನ್ನು ಉತ್ತಮವಾಗಿ ಅಲುಗಾಡಿಸಿ. ಒಂದು ಸಣ್ಣ ವಾಕ್ ಮಾಡಿ ಅಥವಾ ಪಾದಗಳನ್ನು ಸ್ವಲ್ಪ ಸಮಯದವರೆಗೆ ಸ್ಟೂಲ್ ಮೇಲೆ ಇರಿಸಿ. 

514
ತುಂಬಾ ಹೊತ್ತು ನಿಲ್ಲೋದರಿಂದ ಯಾವ ಹಾನಿ ಉಂಟಾಗಬಹುದು?

ಎಡಿಮಾ
ಗರ್ಭಾವಸ್ಥೆಯಲ್ಲಿ ಕಾಲುಗಳಲ್ಲಿ ಊತದ(Swelling) ಸಮಸ್ಯೆ ಸಾಮಾನ್ಯ. ಇದಲ್ಲದೆ, ದೀರ್ಘಕಾಲದವರೆಗೆ ನಿಲ್ಲೋದರಿಂದ ದೇಹದ ಹೆಚ್ಚುವರಿ ನೀರು ಕೆಳಮುಖವಾಗಿ ಸಂಗ್ರಹವಾಗುತ್ತೆ, ಇದು ಸಮಸ್ಯೆಗಳನ್ನು ಉಂಟುಮಾಡಬಹುದು. 

614

ಕೆಲವು ಮಹಿಳೆಯರು ಸಿಂಫಿಸಿಸ್ ಪ್ಯೂಬಿಕ್ ಡಿಸ್ ಫನ್ಕ್ಷನಿಂಗ್ ಸಮಸ್ಯೆ ಹೊಂದಿರಬಹುದು. ಹಾಗಾಗಿ ಹೆಚ್ಚು ಹೊತ್ತು ನಿಲ್ಲೋದರಿಂದ ತೀವ್ರವಾದ ಪ್ಯೂಬಿಕ್ ನೋವಿಗೆ ಕಾರಣವಾಗಬಹುದು. 

714
ರಕ್ತದೊತ್ತಡದಲ್ಲಿ(Blood pressure) ಬದಲಾವಣೆ

ಈ ಸ್ಥಿತಿಯು ರಕ್ತದೊತ್ತಡ ಹೆಚ್ಚಾಗಲು ಅಥವಾ ಕಡಿಮೆಯಾಗಲು ಕಾರಣವಾಗಬಹುದು. ಕಡಿಮೆ ರಕ್ತದೊತ್ತಡವು ಆಯಾಸ ಮತ್ತು ತಲೆತಿರುಗುವಿಕೆ ಉಂಟುಮಾಡಬಹುದು. 

814
ಬೆನ್ನಿನ ಕೆಳಭಾಗದಲ್ಲಿ ನೋವು

ತುಂಬಾ ಹೊತ್ತು ನಿಲ್ಲೋದು ಗರ್ಭಾವಸ್ಥೆಯಲ್ಲಿ ಕೆಳ ಬೆನ್ನಿನ ನೋವಿಗೆ ಕಾರಣವಾಗಬಹುದು. ಈ ನೋವು ಕಾಲು (Leg) ಮತ್ತು ಕಾಲ್ಬೆರಳುಗಳಲ್ಲಿಯೂ ಉಂಟಾಗಬಹುದು. 

914
ಅಕಾಲಿಕ ಜನನ(Premature birth)

ದೀರ್ಘಕಾಲದವರೆಗೆ ನಿಲ್ಲೋದು ಗರ್ಭಪಾತ ಅಥವಾ ಅಕಾಲಿಕ ಹೆರಿಗೆಯ ಅಪಾಯವನ್ನು ಹೆಚ್ಚಿಸುತ್ತೆ. ಬೆಳೆಯುವ ಮುನ್ನವೇ ಹೆರಿಗೆ ಸಾಧ್ಯತೆಗಳು ಬಹಳಷ್ಟಿರುತ್ತದೆ. 

1014
ನಿಲ್ಲೋದ್ರಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ನಿವಾರಿಸೋದು ಹೇಗೆ?

ಗರ್ಭಿಣಿಯರು ಎಲ್ಲಿಯವರೆಗೆ ನಡೆಯುತ್ತಾರೋ ಅಥವಾ ನಿಧಾನವಾಗಿ ನಡೆಯುತ್ತಾರೋ ಅಲ್ಲಿಯವರೆಗೆ, ಯಾವುದೇ ಚಿಂತೆಯಿಲ್ಲ, ಆದರೆ  ಕೆಲಸಕ್ಕೆ(Work) ಸಂಬಂಧಿಸಿದಂತೆ ದೀರ್ಘಕಾಲ ನಿಲ್ಲಬೇಕಾದರೆ, ಇವು ಕೆಲವು ಸುಲಭ ಕ್ರಮಗಳಾಗಿವೆ.ಇವುಗಳನ್ನು ಅಳವಡಿಸಿಕೊಳ್ಳಿ. 

1114

ಕಂಪ್ರೆಷನ್ ಸ್ಟಾಕಿಂಗ್ ಧರಿಸಿ, ಯಾಕಂದ್ರೆ ಅವು ರಕ್ತ ಪರಿಚಲನೆಯನ್ನು(Blood flow) ಉತ್ತೇಜಿಸುತ್ತವೆ ಮತ್ತು ಊದಿಕೊಂಡ ಪಾದ ಮತ್ತು  ಉಬ್ಬು ಒಂದೇ ಸ್ಥಳದಲ್ಲಿ ರೂಪುಗೊಳ್ಳದಂತೆ ತಡೆಯುತ್ತವೆ. 

1214

ಮೂರನೇ ತ್ರೈಮಾಸಿಕದಲ್ಲಿ ಮ್ಯಾಟರ್ನಿಟಿ ಬೆಲ್ಟ್(Maternity belt) ಧರಿಸಬಹುದು. ಇದು ಹೊಟ್ಟೆಯ ಮೇಲಿನ ಮತ್ತು ಕೆಳಭಾಗಕ್ಕೆ ಸಪೋರ್ಟ್ ಸಿಗುತ್ತೆ. ಬೆನ್ನು ನೋವಿನಿಂದ ಪರಿಹಾರ ಪಡೆಯುತ್ತೀರಿ. 
ವಾಕಿಂಗ್ ರಕ್ತ ಪರಿಚಲನೆಗೆ ಸಹಾಯ ಮಾಡುತ್ತೆ. 

1314
ಸಾಕಷ್ಟು ನೀರು(Water) ಮತ್ತು ಆರೋಗ್ಯಕರ ಜ್ಯೂಸ್ ಕುಡಿಯಿರಿ.

ನಿಂತಿರುವ ನಡುವೆ ರೆಸ್ಟ್ ತೆಗೆದುಕೊಳ್ಳಿ. ಇದಲ್ಲದೆ, ಸಣ್ಣ ಸ್ಟೂಲ್ ಗಳನ್ನು ಆಶ್ರಯಿಸುವ ಮೂಲಕ ಪಾದಗಳಿಗೆ ವಿಶ್ರಾಂತಿ ನೀಡಿ. ಸಾದ್ಯವಾದಷ್ಟು ಲಿಕ್ವಿಡ್ ದೇಹಕ್ಕೆ ಹೋಗಲಿ. ಹಾಗಂಥ ಹಣ್ಣಿನ ರಸಕ್ಕಿಂತ, ಹಣ್ಣು ಹೆಚ್ಚು ಒಳ್ಳೆಯದು.

1414

ಒತ್ತಡದ ಮಟ್ಟವನ್ನು ಮ್ಯಾನೇಜ್ ಮಾಡಿ. ಉಸಿರಾಟದ ವ್ಯಾಯಾಮ (Exercise) ಮತ್ತು ಧ್ಯಾನ (Medication) ಮಾಡಿ.
ಎಡಭಾಗದಲ್ಲಿ ಮಲಗೋದು ಗರ್ಭಧಾರಣೆಯಲ್ಲಿ ಪರಿಹಾರ ನೀಡುತ್ತೆ.
 

Read more Photos on
click me!

Recommended Stories