ಗರ್ಭಿಣಿಯರು ಡ್ರಿಂಕ್ಸ್ ಮಾಡಿದ್ರೆ ಹೊಟ್ಟೆಯಲ್ಲಿರೋ ಮಗುವಿನ ಅಪಾಯ ತಪ್ಪಿದ್ದಲ್ಲ!

First Published | Dec 25, 2022, 5:00 PM IST

ಜನರು ಹೊಸ ವರ್ಷದ (New year 2022) ಮೋಜಿನಲ್ಲಿ ತಮ್ಮನ್ನು ತಾವು ಮರೆಯಲು ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ, ನಾವು 2022 ನೇ ವರ್ಷಕ್ಕೆ ವಿದಾಯ ಹೇಳಲಿದ್ದೇವೆ. ಈ ವರ್ಷಾಚರಣೆಗೆ ಆಲ್ಕೋಹಾಲ್ ಇಲ್ಲದೇ ಇದ್ದರೆ ಹೇಗೆ ಎಂದು ನೀವು ಹೇಳಬಹುದು. ಆದರೆ ಗರ್ಭಿಣಿ ಮಹಿಳೆಯರು ಡ್ರಿಂಕ್ಸ್ ಮಾಡೋದು ತುಂಬಾನೆ ಅಪಾಯಕಾರಿ. ಹೊಸ ವರ್ಷದ ಮೋಜಿನ ನೆಪದಲ್ಲಿ ಹುಟ್ಟೋ ಮಗುವಿನ ಆರೋಗ್ಯಕ್ಕೆ ಆಗಬಾರದು ಕುತ್ತು.

ನೀವು ಕೂಡ ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ತಯಾರಿ ನಡೆಸಿದ್ದೀರಾ? ಹೆಚ್ಚಿನ ಜನರು ಆಲ್ಕೋಹಾಲ್‌ನಲ್ಲಿಯೇ ಮುಳುಗುವ ಮೂಲಕ ಹೊಸ ವರ್ಷವನ್ನು ಆಚರಿಸುತ್ತಾರೆ. ಇದರಲ್ಲಿ ಮಹಿಳೆಯರೂ ಭಾಗಿಯಾಗಿರುತ್ತಾರೆ. ಆದರೆ ಮಹಿಳೆ ಗರ್ಭಿಣಿಯಾಗಿದ್ದರೆ (pregnant woman), ಆಕೆ ಮರೆತು ಕೂಡ ಮದ್ಯವನ್ನು ಮುಟ್ಟಬಾರದು. ಗರ್ಭದಲ್ಲಿ ಬೆಳೆಯುವ ಮಗುವಿಗೆ ಒಂದು ಗುಟುಕು ಡ್ರಿಂಕ್ಸ್ ಸಹ ಅಪಾಯಕಾರಿ ಎಂದು ಹೊಸ ಸಂಶೋಧನೆಯು ಹೇಳುತ್ತದೆ.

ಗರ್ಭಾವಸ್ಥೆಯಲ್ಲಿ, ಮಹಿಳೆ ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಆದರೆ ಕೆಲವೊಮ್ಮೆ ಅವರು ಉತ್ಸಾಹದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಹೊಸ ವರ್ಷದ ಆಚರಣೆಗಳು (new year celebration) ಪ್ರಾರಂಭವಾಗಲಿವೆ. ಅಂತಹ ಪರಿಸ್ಥಿತಿಯಲ್ಲಿ, ಗರ್ಭಿಣಿಯರು ಹೆಚ್ಚು ಜಾಗರೂಕರಾಗಿರಬೇಕು. 

Tap to resize

ಒಂದು ಸಿಪ್ ಡ್ರಿಂಕ್ಸ್‌ನಿಂದ ಯಾವುದೇ ಹಾನಿಯಾಗೋದಿಲ್ಲ ಎಂದು ಮಹಿಳೆಯರು ಭಾವಿಸುತ್ತಾರೆ. ಆದರೆ ಅವರು ಈ ತಪ್ಪನ್ನೂ ಅಪ್ಪಿ ತಪ್ಪಿಯೂ ಮಾಡಬಾರದು. ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಒಂದು ಪೆಗ್ ಆಲ್ಕೋಹಾಲ್ ಕೂಡ ಅಪಾಯಕಾರಿ ಎಂದು ಹೊಸ ಸಂಶೋಧನೆಯು ಬಹಿರಂಗಪಡಿಸಿದೆ.

ಮಗುವಿನ ಸ್ವಭಾವವು ಆಕ್ರಮಣಕಾರಿಯಾಗುತ್ತದೆ

ಆಲ್ಕೋಹಾಲ್ (alcohol) ಹುಟ್ಟಲಿರುವ ಮಗುವಿನಲ್ಲಿ ವಿವಿಧ ರೀತಿಯ ಅಸ್ವಸ್ಥತೆಗಳಿಗೆ ಕಾರಣವಾಗಬಹುದು ಎಂದು ಗ್ರೆಗರ್ ಕ್ಯಾಸ್ಪ್ರಿಯನ್ ಹೇಳಿದ್ದಾರೆ. ಇದನ್ನು ಭ್ರೂಣದ ಆಲ್ಕೋಹಾಲ್ ಸ್ಪೆಕ್ಟ್ರಮ್ ಡಿಸಾರ್ಡರ್ ಎಂದು ಕರೆಯಲಾಗುತ್ತದೆ. ಇದು ಮಕ್ಕಳಿಗೆ ಅಪಾಯಕಾರಿ.

ಆಲ್ಕೋಹಾಲ್ ಸೇವಿಸೋದ್ರಿಂದ ಮಗು ಗರ್ಭದಿಂದ ಹೊರಬಂದಾಗ, ಅವರ ಮೆದುಳಿನ ಬೆಳವಣಿಗೆ (brain growth) ಮೇಲೆ ಪರಿಣಾಮ ಬೀರುತ್ತದೆ. ಕಲಿಯುವ ಅವರ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲ, ಅವರ ನಡವಳಿಕೆ ಮತ್ತು ಮಾತಿನಲ್ಲಿ ಸಮಸ್ಯೆ ಉಂಟಾಗುತ್ತದೆ. ಮಗುವಿನ ನಡವಳಿಕೆಯು ಇತರ ಮಕ್ಕಳಿಗಿಂತ ಹೆಚ್ಚು ಆಕ್ರಮಣಕಾರಿಯಾಗುತ್ತದೆ. ಪೋಷಕರು ಅಥವಾ ಬೇರೆ ಯಾರಾದರೂ ಅಡ್ಡಿಪಡಿಸಿದಾಗ ಮಕ್ಕಳು ತುಂಬಾ ಆಕ್ರಮಣಕಾರಿಯಾಗುತ್ತಾರೆ. ಅವರು ಯಾರೊಂದಿಗೂ ಬೇಗನೆ ಹೊಂದಿಕೊಳ್ಳುವುದಿಲ್ಲ.

ಸಂಶೋಧನೆಯಲ್ಲಿ ಆಘಾತಕಾರಿ ಮಾಹಿತಿ

ಈ ಸಂಶೋಧನೆಗಾಗಿ, 24 ಭ್ರೂಣಗಳ ಎಂಆರ್ಐ ಪರೀಕ್ಷೆ ನಡೆಸಲಾಯಿತು, ಗರ್ಭಿಣಿ ತಾಯಂದಿರು ಮದ್ಯ ಸೇವಿಸಿದ್ದರು ಮತ್ತು ಇದು ತಮ್ಮ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಭಯಪಟ್ಟರು. ಈ ಎಲ್ಲಾ ಭ್ರೂಣಗಳು 22 ರಿಂದ 36 ವಾರಗಳ ನಡುವೆ ಇದ್ದವು. ಅವರ ಮೌಲ್ಯಮಾಪನಕ್ಕಾಗಿ, ತಂಡವು ಗರ್ಭಾವಸ್ಥೆಯಲ್ಲಿ ಅವರ ಆಲ್ಕೋಹಾಲ್ ಸೇವನೆಯ ಬಗ್ಗೆ ಮಗುವಿನ ತಾಯಂದಿರಿಂದ ಮಾಹಿತಿಯನ್ನು ಸಹ ತೆಗೆದುಕೊಂಡಿತು. 

ಆಲ್ಕೊಹಾಲ್ ಗೆ ಒಡ್ಡಿಕೊಳ್ಳುವ ಭ್ರೂಣಗಳು ಗಮನಾರ್ಹವಾಗಿ ಕಡಿಮೆ ಮೆಚ್ಯೂರಿಟಿ ಸ್ಕೋರ್ (FTMS) ಹೊಂದಿವೆ ಎಂದು ಸಂಶೋಧನೆ ಕಂಡುಕೊಂಡಿದೆ. FTMS ಎಂಬುದು ಮೆದುಳಿನ ಪರಿಪಕ್ವತೆಯನ್ನು ಲೆಕ್ಕಹಾಕುವ ಒಂದು ವ್ಯವಸ್ಥೆ. ಆಲ್ಕೊಹಾಲ್ ಕುಡಿದ ತಾಯಂದಿರ ಮಕ್ಕಳ ಮೆದುಳಿನ ಒಂದು ಭಾಗವನ್ನು ಸುಪೀರಿಯರ್ ಟೆಂಪೋರಲ್ ಸಾಲ್ಕ್ಸ್ (STS) ಎಂದು ಕರೆಯಲಾಗುತ್ತದೆ, ಅದು ಸಹ ಸರಿಯಾಗಿ ಅಭಿವೃದ್ಧಿ ಹೊಂದಿಲ್ಲ ಎಂದು ತೋರಿಸಿತು. ಮೆದುಳಿನ ಈ ಭಾಗವು ನೋಡಲು, ಕೇಳಲು, ಏಕಾಗ್ರತೆ ಮತ್ತು ಸಾಮಾಜಿಕ ಗ್ರಹಿಕೆಯಲ್ಲಿ ಶಕ್ತಿಯನ್ನು ಸೃಷ್ಟಿಸುತ್ತದೆ.

ಈ ಸಂಶೋಧನೆಯಲ್ಲಿ ತೊಡಗಿರುವ ಪ್ಯಾಟ್ರಿಕ್ ಕಿಯಾನಾಸ್ಟ್, ಅನೇಕ ಗರ್ಭಿಣಿಯರಿಗೆ ಭ್ರೂಣದ ಮೇಲೆ ಆಲ್ಕೋಹಾಲ್‌ನ ಪರಿಣಾಮಗಳ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ಹೇಳಿದರು. ಇದು ದುರದೃಷ್ಟಕರ. ಭ್ರೂಣದ ಮೇಲೆ ಆಲ್ಕೋಹಾಲ್ ಬೀರುವ ಪರಿಣಾಮದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಜನರಿಗೆ ತಿಳಿಸುವುದು ನಮ್ಮ ಉದ್ದೇಶ ಎಂದು ಸಂಶೋಧಕರು ತಿಳಿಸಿದ್ದಾರೆ.. 

Latest Videos

click me!