ಕ್ರಿಶ್ಚಿಯನ್ ಕುಟುಂಬದಲ್ಲಿ ನಟಿಸಿ ಧರ್ಮ ಬದಲಾಯಿಸಿಕೊಂಡ ಯುವತಿ, ಈಗ ಭರ್ತಿ 11 ಕೋಟಿ ಸಂಭಾವನೆ ಪಡೆಯೋ ನಟಿ!

Published : Dec 04, 2023, 08:48 AM IST

ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ ಯುವತಿ ಆಕೆ. ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಆರಂಭಿಸಿದರು. ಅಲ್ಲಿಂದ ಟಿವಿ ನಿರೂಪಕಿಯಾದರು. ಅಲ್ಲಿ ಅವರನ್ನು ಗಮನಿಸಿದ ನಿರ್ದೇಶಕರೊಬ್ಬರು ಸಿನಿಮಾ ಅವಕಾಶ ನೀಡಿದರು. ಆ ನಂತ್ರ ಧರ್ಮ ಬದಲಾಯಿಸಿಕೊಂಡ ಆ ನಟಿಯೀಗ ಸೂಪರ್‌ಸ್ಟಾರ್‌. ಭರ್ತಿ 11 ಕೋಟಿ ಸಂಭಾವನೆ ಪಡೆಯೋ ನಟಿ.  

PREV
111
ಕ್ರಿಶ್ಚಿಯನ್ ಕುಟುಂಬದಲ್ಲಿ ನಟಿಸಿ ಧರ್ಮ ಬದಲಾಯಿಸಿಕೊಂಡ ಯುವತಿ, ಈಗ  ಭರ್ತಿ 11 ಕೋಟಿ ಸಂಭಾವನೆ ಪಡೆಯೋ ನಟಿ!

ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾದ ನಯನತಾರಾ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಅವರ ಮೂಲ ಹೆಸರು ಡಯಾನಾ ಮರಿಯಮ್ ಕುರಿಯನ್. ನಯನತಾರಾ ಕಾಲೇಜಿನಲ್ಲಿದ್ದಾಗ ಪಾರ್ಟ್‌ಟೈಮ್ ಕೆಲಸವಾಗಿ ಮಾಡೆಲಿಂಗ್ ಆರಂಭಿಸಿದರು.

211

ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನ ನಯನತಾರಾ ಟಿವಿ ನಿರೂಪಕಿಯಾಗಿದ್ದರು. ಮಾಡೆಲ್‌ ಆಗಿ ಕೆಲಸ ಮಾಡುತ್ತಿದ್ದಾಗ ನಿರ್ದೇಶಕರೊಬ್ಬರು ನಯನತಾರಾರನ್ನು ಗುರುತಿಸಿ ಸಿನಿಮಾ ಆಫರ್ ನೀಡಿದರು.

311

ನಯನತಾರಾಗೆ ಮೊದಲ ಸಿನಿಮಾ ಆಫರ್ ಮಾಡಿದವರು ನಿರ್ದೇಶಕ ಸತ್ಯನ್ ಅಂತಿಕ್ಕಾಡ್. 'ಮನಸ್ಸಿನಕ್ಕರೆ' ಹೆಸರಿನ ಈ ಮೂವಿ ಬಾಕ್ಸಾಫೀಸ್‌ ಹಿಟ್ ಅನಿಸಿಕೊಂಡಿತು. ಅಲ್ಲಿಂದ ನಯನತಾರಾರೆ ಅನೇಕ ಆಫರ್‌ಗಳು ಬರಲಾರಂಭಿಸಿದವು. ಪ್ರಸ್ತುತ ನಯನತಾರಾ, ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಅವರಂತಹ ನಟಿಯರಿಗಿಂತ ಹೆಚ್ಚು ಜನಪ್ರಿಯರಾಗಿದ್ದಾರೆ. 

411

ಕೆಲವು ವರದಿಗಳ ಪ್ರಕಾರ ನಯನತಾರಾ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ. ನಯನತಾರಾ ಅವರನ್ನು ಲೇಡಿ ಸೂಪರ್‌ಸ್ಟಾರ್ ಎಂದು ಕೂಡಾ ಕರೆಯುತ್ತಾರೆ. 2018ರ ಫೋರ್ಬ್ಸ್ ಇಂಡಿಯಾ 100 ಸೆಲೆಬ್ರಿಟಿ ಪಟ್ಟಿಯಲ್ಲಿ ಸೇರ್ಪಡೆಗೊಂಡ ದಕ್ಷಿಣ ಚಿತ್ರರಂಗದ ಏಕೈಕ ನಟಿ ನಯನತಾರಾ.

511

2011ರಲ್ಲಿ ಚೆನ್ನೈನ ಆರ್ಯ ಸಮಾಜ ದೇವಸ್ಥಾನದಲ್ಲಿ ನಯನತಾರಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ನಂತರ ಡಯಾನಾ ಮರಿಯಮ್ ಕುರಿಯನ್ ಎಂಬ ಹೆಸರನ್ನು ನಯನತಾರಾ ಎಂದು ಬದಲಾಯಿಸಿಕೊಂಡರು.

611

ಶಾರೂಕ್‌ ಖಾನ್ ಅಭಿನಯದ 'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರದ ವಿಶೇಷ ಹಾಡಿನಲ್ಲಿ ನಟಿಸಲು ನಯನತಾರಾಗೆ ಆಫರ್ ಬಂದಿತ್ತು ಎಂಬುದು ಅನೇಕರಿಗೆ ತಿಳಿದಿಲ್ಲ, ಆದರೆ ಅವರು ಆ ಪ್ರಸ್ತಾಪವನ್ನು ತಿರಸ್ಕರಿಸಿದರು. 

711

ಇತ್ತೀಚಿಗೆ ಶಾರೂಕ್‌ ಖಾನ್‌ ಅವರ ಬ್ಲಾಕ್‌ಬಸ್ಟರ್‌ ಚಿತ್ರ 'ಜವಾನ್' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ವರದಿಗಳ ಪ್ರಕಾರ, ನಯನತಾರಾ 'ಜವಾನ್'ಗಾಗಿ 11 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯೆಂದು ಗುರುತಿಸಿಕೊಂಡಿದ್ದಾರೆ.

811

ನಯನತಾರಾ ಯಶಸ್ವಿ ನಟಿ ಮಾತ್ರವಲ್ಲದೆ ಸಿನಿಮಾ ನಿರ್ಮಾಪಕಿಯೂ ಹೌದು. ನಯನತಾರಾ 2022 ರಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾದರು. ದಂಪತಿಗೆ ಈಗ ಇಬ್ಬರು ಅವಳಿ ಮಕ್ಕಳಿದ್ದಾರೆ.

911

ಇದುವರೆಗೂ ಹಲವಾರು ಸೂಪರ್‌ಹಿಟ್‌ ಚಿತ್ರಗಳನ್ನು ನೀಡಿರುವ ನಯನತಾರಾ ಫಿಮೇಲ್‌ ಓರಿಯೆಂಟೆಡ್‌ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.  50 ಸೆಕೆಂಡ್‌ಗಳ ಜಾಹೀರಾತಿಗೆ ನಯನತಾರಾ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ದೃಢೀಕರಿಸದ ವರದಿಗಳು ತಿಳಿಸಿವೆ. ಕೆಲವು ಜಾಹೀರಾತುಗಳಿಗೆ 4ರಿಂದ 7 ಕೋಟಿ ರೂಪಾಯಿ ಪಡೆಯುತ್ತಾರಂತೆ. 

1011

ನಯನತಾರಾ ಅವರಿಗೆ ನಾಲ್ಕು ಐಷಾರಾಮಿ ಮನೆಗಳಿವೆ.  ನಯನತಾರಾ 100 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಹೊಂದಿದ್ದಾರೆ.ಇದು ತಮಿಳುನಾಡಿನಿಂದ ಮುಂಬೈವರೆಗೆ ವಿಸ್ತರಿಸಿರುವ ಅವರ ನಾಲ್ಕು ಐಷಾರಾಮಿ ಆಸ್ತಿಗಳಲ್ಲಿ ಒಂದಾಗಿದೆ. ಪ್ರಸ್ತುತ, ಅವರು ತಮ್ಮ ಪತಿ ವಿಘ್ನೇಶ್ ಅವರೊಂದಿಗೆ 4 BHK ಫ್ಲಾಟ್ ಅನ್ನು ಹಂಚಿಕೊಂಡಿದ್ದಾರೆ, ಇದರ ಮೌಲ್ಯ 100 ಕೋಟಿ ರೂ.

1111

ಐಷಾರಾಮಿ ಕಾರುಗಳ ದೊಡ್ಡ ಸಂಗ್ರಹವೇ ನಯನತಾರಾ ಬಳಿಯಿದೆ. ದುಬಾರಿ ಕಾರು BMW 7, 1.76 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. 1 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ GLS350D ಹೊಂದಿದ್ದಾರೆ. ವಿಶಿಷ್ಟವಾದ BMW 5 ಸಹ ಇವರ ಕಾರ್ ಕಲೆಕ್ಷನ್‌ನಲ್ಲಿ ಒಂದಾಗಿದೆ. ಇತ್ತೀಚಿಗೆ ನಯನತಾರಾಗೆ ಪತಿ ಬರೋಬ್ಬರಿ 3.4 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಮೌಲ್ಯದ ಐಷಾರಾಮಿ ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.

Read more Photos on
click me!

Recommended Stories