ಅತೀ ಕಿರಿಯ ವಯಸ್ಸಲ್ಲಿ ಬರೋಬ್ಬರಿ 2602 ಕೋಟಿ ಸಂಸ್ಥೆಯ ಒಡತಿ ಅವನಿ ದಾವ್ಡಾ; ಟಾಟಾ ಜೊತೆ ಇರೋ ಸಂಬಂಧವೇನು?

Published : Dec 03, 2023, 02:36 PM IST

ಅತ್ಯಂತ ಕಿರಿಯ ವಯಸ್ಸಿನಲ್ಲಿ, ಟಾಟಾ ಗ್ರೂಪ್‌ನ ಉನ್ನತ ಸ್ಥಾನಕ್ಕೇರಿರುವವರಲ್ಲಿ ಒಬ್ಬರು ಅವನಿ ದಾವ್ಡಾ.ಕಾರ್ಪೊರೇಟ್ ಜಾಬ್‌ನಿಂದ ಆರಂಭಗೊಂಡು, ಟಾಟಾ ಸ್ಟಾರ್‌ಬಕ್ಸ್‌ನಿಂದ 2602 ಕೋಟಿ ರೂ. ಕಂಪನಿಯ ಡೈರೆಕ್ಟರ್ ಆಗುವ ಮೂಲಕ ಟಾಟಾ ಗ್ರೂಪ್‌ಗೆ ಕೋಟಿಗಟ್ಟಲೆ ಲಾಭ ತಂದುಕೊಟ್ಟಿದ್ದಾರೆ.

PREV
18
ಅತೀ ಕಿರಿಯ ವಯಸ್ಸಲ್ಲಿ ಬರೋಬ್ಬರಿ 2602 ಕೋಟಿ ಸಂಸ್ಥೆಯ ಒಡತಿ ಅವನಿ ದಾವ್ಡಾ; ಟಾಟಾ ಜೊತೆ ಇರೋ ಸಂಬಂಧವೇನು?

ಭಾರತದಲ್ಲಿನ ಅತಿದೊಡ್ಡ ಸಂಘಟಿತ ಸಂಸ್ಥೆಯಾದ ಟಾಟಾ, ಸಿಇಒಗಳು ಮತ್ತು ಅನುಭವಿ ಕಾರ್ಯನಿರ್ವಾಹಕರನ್ನು ನಾಯಕತ್ವದ ಸ್ಥಾನಗಳಲ್ಲಿ ಹೊಂದಿದೆ. ಹೀಗಾಗಿ ಟಾಟಾ ಉದ್ಯಮ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಹೋಗುತ್ತಿದೆ. ಕೋಟಿ ಕೋಟಿ ಲಾಭವನ್ನು ಗಳಿಸುತ್ತಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ, ಟಾಟಾ ಗ್ರೂಪ್‌ನ ಉನ್ನತ ಸ್ಥಾನಕ್ಕೇರಿರುವವರಲ್ಲಿ ಒಬ್ಬರು ಅವನಿ ದಾವ್ಡಾ.

28

ಅತ್ಯಂತ ಕಿರಿಯ ವಯಸ್ಸಿನಲ್ಲಿ, ಟಾಟಾ ಗ್ರೂಪ್‌ನ ಸಿಇಒ ಸ್ಥಾನದಲ್ಲಿರುವವರು ಅವನಿ ದಾವ್ಡಾ. ಈ ಹಿಂದೆ ಟಾಟಾ ಸ್ಟಾರ್‌ಬಕ್ಸ್‌ನ ಸಿಇಒ ಆಗಿ 2023ರಲ್ಲಿ ಕಂಪನಿಯು ರೂ 1000 ಕೋಟಿ ಆದಾಯದ ಮಿತಿಯನ್ನು ದಾಟಿದಾಗ ವ್ಯವಹಾರದಲ್ಲಿ ದಾಖಲೆಯನ್ನು ಸಾಧಿಸಿದರು.

38

ಕಾರ್ಪೊರೇಟ್ ಜಾಬ್‌ನಿಂದ ಆರಂಭಗೊಂಡು, ಟಾಟಾ ಸ್ಟಾರ್‌ಬಕ್ಸ್‌ನಿಂದ 2602 ಕೋಟಿ ರೂ. ಕಂಪನಿಯ ಡೈರೆಕ್ಟರ್‌ ಆಗುವ ವರೆಗೆ ಅವರ ಜೀವನದ ಬಗ್ಗೆ ತಿಳಿಯೋಣ.

48

ಮುಂಬೈ ಮೂಲದವರಾದ ಅವನಿ ದಾವ್ಡಾ ಪ್ರತಿಷ್ಠಿತ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜಿನಲ್ಲಿ ಪದವಿ ಪಡೆದರು. ಗೌರವಾನ್ವಿತ ನರ್ಸೀ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

58

ಅವನಿ ದಾವ್ಡಾ ಅವರು 2002ರಲ್ಲಿ ಟಾಟಾ ಅಡ್ಮಿನಿಸ್ಟ್ರೇಟಿವ್ ಸರ್ವೀಸಸ್ (TAS)ಗೆ ಅರ್ಜಿ ಸಲ್ಲಿಸುವ ಮೂಲಕ ತಮ್ಮ ಔದ್ಯೋಗಿಕ ಜೀವನ ಆರಂಭಿಸಿದರು.. ತಾಜ್ ಹೋಟೆಲ್ಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದಿ ಇಂಡಿಯನ್ ಹೋಟೆಲ್ಸ್ ಕಂಪನಿ ಮತ್ತು ಇನ್ಫಿನಿಟಿ ರಿಟೇಲ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುವ ಹೆಚ್ಚು ಅನುಭವವನ್ನು ಪಡೆದುಕೊಂಡರು. 

68

ಅವನಿ ದಾವ್ಡಾ ಅವರಿಗೆ ಆರ್.ಕೆ. ಕೃಷ್ಣ ಕುಮಾರ್ ಎಂಬ ನಿಷ್ಠಾವಂತ ಟಾಟಾ ಉದ್ಯೋಗಿ ಮಾರ್ಗದರ್ಶನ ನೀಡಿದರು. ಅವನಿಯವರ ಸಾಮರ್ಥ್ಯ ಮತ್ತು ಅಸಾಧಾರಣ ಜ್ಞಾನದಿಂದ ಪ್ರೇರಿತರಾದ ಕುಮಾರ್ ಅವರು ಟಾಟಾ ಗ್ಲೋಬಲ್ ಬೆವರೇಜಸ್ ಲಿಮಿಟೆಡ್ ಮತ್ತು ಸ್ಟಾರ್‌ಬಕ್ಸ್ ಕಾಫಿ ಕಂಪನಿಯ ನಡುವಿನ ಪ್ರಮುಖ ಸಹಯೋಗವನ್ನು ಮುನ್ನಡೆಸಲು ಅವನಿ ದಾವ್ಡಾ ಅವರನ್ನು ಆಯ್ಕೆ ಮಾಡಿದರು.

78

ಟಾಟಾ ಸ್ಟಾರ್‌ಬಕ್ಸ್‌ನ CEO ಆಗಿ ಸೇವೆ ಸಲ್ಲಿಸಿದ ನಂತರ, ಅವನಿ ದಾವ್ಡಾ, ಗೋದ್ರೇಜ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವಿಭಾಗವಾದ ಗೋದ್ರೇಜ್ ನೇಚರ್ಸ್ ಬಾಸ್ಕೆಟ್ ಲಿಮಿಟೆಡ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದರು. 2016 ರಿಂದ ಅವರು ಕಂಪನಿಗೆ ಸಾಕಷ್ಟು ಲಾಭವನ್ನು ತಂದುಕೊಟ್ಟಿದ್ದಾರೆ.

88

ಪ್ರಸ್ತುತ ಬ್ರೈನ್ ಅಡ್ವೈಸರಿ ನೆಟ್‌ವರ್ಕ್‌ನ ಕಾರ್ಯತಂತ್ರದ ಸಲಹೆಗಾರರಾಗಿ ಮತ್ತು ಮಹೀಂದ್ರ ಲಾಜಿಸ್ಟಿಕ್ಸ್‌ನ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೃಢಸಂಕಲ್ಪ, ಕಾರ್ಯಕ್ಷಮತೆಯ ಬದ್ಧತೆ, ಲೀಡರ್‌ಶಿಪ್ ಗುಣದಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅವನಿ ದಾವ್ಡಾ ಉತ್ತಮ ಉದಾಹರಣೆ.

click me!

Recommended Stories