ಹಾಸಿಗೆಯನ್ನು ಕ್ಲೀನ್ ಮಾಡಲು ಇಲ್ಲಿವೆ ಸಖತ್ ಸಿಂಪಲ್ ಟಿಪ್ಸ್

Suvarna News   | Asianet News
Published : Feb 13, 2021, 08:52 AM ISTUpdated : Feb 13, 2021, 09:09 AM IST

ಕ್ಲೀನ್ ಆಗಿರುವ, ತೊಳೆದ ಬೆಡ್ ಶೀಟ್ಸ್ ಮೇಲೆ ಮಲಗುವ ಅದ್ಭುತ ಭಾವನೆ ನಮಗೆಲ್ಲರಿಗೂ ತಿಳಿದಿದೆ. ಯಾರನ್ನೂ ಸಂತೋಷಪಡಿಸಲು ಸ್ವಚ್ಛ ಮತ್ತು ಆರಾಮದಾಯಕವಾದ ಹಾಸಿಗೆ ಸಾಕು. ಆದರೆ, ಅನೇಕ ಜನರು ತಮ್ಮ ಹಾಸಿಗೆಯನ್ನು ಎಂದಿಗೂ ಸ್ವಚ್ಛಗೊಳಿಸುವುದಿಲ್ಲ. ಹಾಸಿಗೆಯನ್ನು ಸ್ವಚ್ಚಗೊಳಿಸದಿದ್ದರೆ ಏನೂ ಆಗುವುದಿಲ್ಲ ಎಂದು ಯೋಚಿಸಿರಬಹುದು. ಆದರೆ ಬೆಡ್ ಶೀಟ್‌ನಂತೆ ಹಾಸಿಗೆಯನ್ನು ಸಹ ವಾಶ್ ಮಾಡಬೇಕಾಗಿರುವುದು ತುಂಬಾ ಮುಖ್ಯ. ವರ್ಷಕ್ಕೆ ಎರಡು ಬಾರಿಯಾದರೂ ಹಾಸಿಗೆ ತೊಳೆಯಲು ಮರೆಯದಿರಿ.

PREV
110
ಹಾಸಿಗೆಯನ್ನು ಕ್ಲೀನ್ ಮಾಡಲು ಇಲ್ಲಿವೆ ಸಖತ್ ಸಿಂಪಲ್ ಟಿಪ್ಸ್

ಮನುಷ್ಯರು ಗಂಟೆಗೆ ಎಷ್ಟು ಚರ್ಮ ಕೋಶಗಳನ್ನು ಕಳೆದುಕೊಳ್ಳುತ್ತಾರೆ ಎಂಬುದರ ಕುರಿತು ಎಂದಾದರೂ ಯೋಚಿಸಿದ್ದೀರಾ? ಪ್ರತಿ ಗಂಟೆಗೆ ಲಕ್ಷಾಂತರ ಚರ್ಮ ಕೋಶಗಳನ್ನು ಕಳೆದುಕೊಳ್ಳುತ್ತಾರೆ! ಈ ಚರ್ಮದ ಕೋಶಗಳು ಸಾಮಾನ್ಯವಾಗಿ ಹಾಸಿಗೆಯ ಮೇಲ್ಮೈಯಲ್ಲಿ ಉಳಿಯುತ್ತವೆ, ಆದರೆ ಅವುಗಳಲ್ಲಿ ಕೆಲವು ಹಾಸಿಗೆಯ ಎಳೆಗಳಲ್ಲಿ ಬೆರೆತು  ಬೆವರಿನೊಂದಿಗೆ ಬೆರೆಯುತ್ತವೆ.

210

ಚರ್ಮದ ಕೋಶಗಳು ಹಾಸಿಗೆಯನ್ನು ಬೇಗನೆ ಸೇರಿಕೊಳ್ಳುತ್ತವೆ. ಆದುದರಿಂದ ಹಾಸಿಗೆಯನ್ನು ಸ್ಚಚ್ಚವಾಗಿಟ್ಟುಕೊಳ್ಳುವುದು ಮುಖ್ಯ. ಇಲ್ಲವಾದರೆ ಚರ್ಮಕೋಶಗಳು ಸೇರಿ ಕೊಳಕನ್ನುಂಟು ಮಾಡುತ್ತವೆ. 

310

ಧೂಳಿನ ಅಲರ್ಜಿಯನ್ನು ಹೊಂದಿರುವ ಜನರಿಗೆ, ಇದರಿಂದ ಅಲರ್ಜಿ ಹೆಚ್ಚುತ್ತದೆ. ಅಂತಹ ಜನರು ಆಗಾಗ್ಗೆ ಹಾಸಿಗೆ ಸ್ವಚ್ಛಗೊಳಿಸುವುದು ಮುಖ್ಯ. ವಿಶೇಷವಾಗಿ ಧೂಳಿನ ಹುಳಗಳು ಚರ್ಮದ ಕೋಶಗಳನ್ನು ಬಹಳ ಇಷ್ಟಪಡುತ್ತವೆ ಎಂದು ತಿಳಿದುಬಂದಿದೆ. ಬೆಳಿಗ್ಗೆ ಉಸಿರುಕಟ್ಟಿಕೊಳ್ಳುವ, ರನ್ನಿಂಗ್ ಅಥವಾ ಇಚ್ಚಿ ಮೂಗಿನ ಸಮಸ್ಯೆಯನ್ನು ಎದುರಿಸುತ್ತೀರಾ? ಇದಕ್ಕೆಲ್ಲಾ ಕಾರಣ ಹಾಸಿಗೆಯಲ್ಲಿ ಸೇರಿಕೊಂಡಿರುವ ಧೂಳು. 

410

ಪ್ರತಿ 10 ವರ್ಷಗಳಿಗೊಮ್ಮೆ ಹಾಸಿಗೆಗಳು ತೂಕದಲ್ಲಿ ದ್ವಿಗುಣಗೊಳ್ಳುತ್ತವೆ
ಈ ಬಗ್ಗೆ ಯಾರೂ ಎಂದಿಗೂ ಯೋಚಿಸಿರಲಾರರು, ಆದರೆ ಇದು ಪ್ರತಿ 10 ವರ್ಷಗಳಿಗೊಮ್ಮೆ ಹಾಸಿಗೆ ತೂಕವನ್ನು ದ್ವಿಗುಣಗೊಳಿಸುತ್ತದೆ.  ಹಾಸಿಗೆ ಈಗಾಗಲೇ ಅದರ ತೂಕವನ್ನು ದ್ವಿಗುಣಗೊಳಿಸಿರಬಹುದು. ಇದಕ್ಕೆ ಕಾರಣ ಏನು ಗೊತ್ತಾ? 

510

ಬೆಡ್ ಭಾರವಾಗಲು ಕಾರಣ ಏನೆಂದರೆ ಮೊದಲನೆಯದಾಗಿ, ಮನುಷ್ಯನ ಕೂದಲು, ಚರ್ಮದ ಕೋಶಗಳು, ಬ್ಯಾಕ್ಟೀರಿಯಾ, ಧೂಳು ಮತ್ತು ಮನೆಯ ಧೂಳಿನ ಕಣಗಳು ಹಾಸಿಗೆಯಲ್ಲಿ ಸಂಗ್ರಹವಾಗುತ್ತದೆ. ಇದಕ್ಕೆ ಚಿಂತಿಸಬೇಡಿ. ಹಾಸಿಗೆಯನ್ನು ಸ್ವಚ್ಛಗೊಳಿಸುವುದು ಕಷ್ಟವೇನಲ್ಲ ಮತ್ತು  ಅದನ್ನು ಸುಲಭವಾಗಿ ಮಾಡಬಹುದು.

610

ಈ ಮೂರು ಹಂತಗಳೊಂದಿಗೆ, ಹಾಸಿಗೆಯನ್ನು ತ್ವರಿತವಾಗಿ ಮತ್ತು ಸುಲಭವಾಗಿ ಸ್ವಚ್ಛಗೊಳಿಸಿ. ಇದಕ್ಕೆ ಬೇಕಾಗಿರುವುದು: ಅಡಿಗೆ ಸೋಡಾ, ವ್ಯಾಕ್ಯೂಮ್ ಕ್ಲೀನರ್, ಒದ್ದೆಯಾದ ಬಟ್ಟೆ.
 
710

ಹಂತ 1
ಹಾಸಿಗೆಯನ್ನು ಸಂಪೂರ್ಣವಾಗಿ ವಾಕ್ಯುಮಿಂಗ್ ಗೊಳಿಸುವ ಮೂಲಕ ಪ್ರಾರಂಭಿಸಿ. ಇದು ಹಾಸಿಗೆಯ ಮೇಲಿರುವ ಧೂಳು ಮತ್ತು ಕೊಳೆಯನ್ನು ನಿವಾರಿಸುತ್ತದೆ. ಹಾಸಿಗೆ ಮೇಲೆ ಬಳಸುವ ಮೊದಲು ವ್ಯಾಕ್ಯೂಮ್ ಕ್ಲೀನರ್ ಸ್ವಚ್ಛವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ, ಹಾಸಿಗೆ ಕೊಳಕಾಗುತ್ತದೆ.
 
810

ಹಂತ 2
ಅಡಿಗೆ ಸೋಡಾ ಆ ಎಲ್ಲಾ ಅಸಹ್ಯ ವಾಸನೆಯನ್ನು ತೊಡೆದುಹಾಕುತ್ತದೆ, ಮತ್ತು ಇದು ಪ್ರತಿ ಸೂಪರ್ ಮಾರ್ಕೆಟ್‌ಗಳಲ್ಲಿ ಲಭ್ಯವಿದೆ! ಅಡಿಗೆ ಸೋಡಾ ಮ್ಯಾಜಿಕ್ ಮಾಡುತ್ತದೆ. ವಾಸನೆ, ತೇವಾಂಶ ಮತ್ತು ಕೊಳೆಯನ್ನು ಹೊರಹಾಕುತ್ತದೆ ಮತ್ತು  ಹಾಸಿಗೆಯನ್ನು ತಾಜಾ ಮತ್ತು ಸ್ವಚ್ಛವಾಗಿಡುತ್ತದೆ.

910

ಹಂತ 3
ಒದ್ದೆಯಾದ ಬಟ್ಟೆಯಿಂದ ಹಾಸಿಗೆಯಿಂದ ಕಲೆಗಳನ್ನು ತೆಗೆದುಹಾಕಿ. ಅಡುಗೆ ಸೋಡಾ, ನೀರು ಮತ್ತು ಉಪ್ಪಿನ ಮಿಶ್ರಣವನ್ನು ಕಲೆಗಳ ಮೇಲೆ ಹರಡಿ 30 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ತಣ್ಣನೆಯ ನೀರಿನಲ್ಲಿ ನೆನೆಸಿದ ಬಟ್ಟೆಯಿಂದ ಒರೆಸಿಕೊಳ್ಳಿ.

1010

ಈ ಹಂತಗಳು ದಿಂಬುಗಳಿಗೆ ಸಹ ಮಾಡಬಹುದು. ಮೇಲೆ ತಿಳಿಸಿದ ಸಲಹೆಗಳು ಹಾಸಿಗೆಯನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ವರ್ಷಕ್ಕೆ ಎರಡು ಬಾರಿ ಇದನ್ನು ಮಾಡುತ್ತಿದ್ದರೆ, ಹಾಸಿಗೆ ತುಂಬಾ ಕ್ಲೀನ್ ಮತ್ತು ಸುಂದರವಾಗಿರುತ್ತದೆ. 

click me!

Recommended Stories