ಸ್ಟಿಲ್ ಬರ್ತ್ ತಪ್ಪಿಸಲು ಇಂದಿನಿಂದ ಈ ಕೆಲ್ಸ ಮರೆಯದೆ ಮಾಡಿ

First Published | Feb 24, 2023, 5:35 PM IST

ತಾಯಿಯಾಗೋದು ಒಂದು ಸುಂದರ ಅನುಭವ. ಆದರೆ ಅನೇಕ ಶಿಶುಗಳು ತಾಯಿಯ ಗರ್ಭದಲ್ಲಿ ಸಾಯುತ್ತವೆ ಅಥವಾ ಹೆರಿಗೆಯ ಸಮಯದಲ್ಲಿ ಸತ್ತು ಜನಿಸುತ್ತವೆ. ಇದನ್ನು ಸ್ಟಿಲ್ ಬರ್ತ್ ಎಂದು ಕರೆಯಲಾಗುತ್ತೆ.ಇದರ ಬಗ್ಗೆ ಹೆಚ್ಚು ತಿಳಿಯೋದು ಮುಖ್ಯ. ಹಾಗಾಗಿ ಹೆಚ್ಚಿನ ಮಾಹಿತಿಗೆ ಮುಂದೆ ಓದಿ.   

ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ, ಗರ್ಭಧಾರಣೆಯ(Pregnancy) 24 ನೇ ವಾರದ ನಂತರ ಮಗು ಗರ್ಭದಲ್ಲಿ ಸತ್ತಾಗ, ಈ ಸ್ಥಿತಿಯನ್ನು ಸ್ಟಿಲ್ ಬರ್ತ್ ಕರೆಯಲಾಗುತ್ತೆ. ಹೆರಿಗೆ ಸಮಯದಲ್ಲಿ ಅಥವಾ ಅದಕ್ಕಿಂತ ಮೊದಲು ಮಗುವಿನ ಮರಣವನ್ನು ಸ್ಟಿಲ್ ಬರ್ತ್ ಎಂದು ಸಹ ಕರೆಯಲಾಗುತ್ತೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, 175 ಜನನಗಳಲ್ಲಿ 1 ಶಿಶು ಸ್ಟಿಲ್ ಬರ್ತ್ ಆಗುತ್ತೆ. ಕಳೆದ 30 ವರ್ಷಗಳಲ್ಲಿ ವೈದ್ಯಕೀಯ ತಂತ್ರಜ್ಞಾನದ ಪ್ರಗತಿಯಿಂದಾಗಿ, ಪ್ರಸವಪೂರ್ವ ಆರೈಕೆ ಸುಧಾರಿಸಿದೆ, ಇದು ಸ್ಟಿಲ್ ಬರ್ತ್ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಅವುಗಳ ಬಗ್ಗೆ ತಿಳಿಯೋಣ.

ವೈದ್ಯರು ಏನು ಹೇಳುತ್ತಾರೆ?
ಹೆರಿಗೆಯ(Delivery) ಅಪಾಯವನ್ನು ಕಡಿಮೆ ಮಾಡಲು, ತಾಯಿಯ ವಯಸ್ಸು, ತೂಕ, ಬಿಎಂಐ, ಯಾವುದೇ ಆನುವಂಶಿಕ ಕಾಯಿಲೆ, ಕುಟುಂಬದ ಇತಿಹಾಸ, ವೈದ್ಯಕೀಯ ಅಸ್ವಸ್ಥತೆ ಮತ್ತು ಜೀವನಶೈಲಿಯಂತಹ ಅಪಾಯದ ಅಂಶಗಳನ್ನು ಒಳಗೊಂಡಿರುವ ಬಹುಮುಖಿ ವಿಧಾನದ ಅಗತ್ಯವಿದೆ ಎಂದು ವೈದ್ಯರು ಹೇಳುತ್ತಾರೆ. ಈ ಅಂಶಗಳನ್ನು ಗುರುತಿಸೋದು ಮತ್ತು ಅವುಗಳನ್ನು ನಿವಾರಿಸೋದು ಮುಖ್ಯ.

Tap to resize

ಸ್ಟಿಲ್ ಬರ್ತ್(Still birth) ಕಡಿಮೆಯಾಗಿದೆ
ಸ್ಟಿಲ್ ಬರ್ತ್ ಕಡಿಮೆಯಾಗಿದೆ ಮತ್ತು ಆರೋಗ್ಯಕರ ಗರ್ಭಧಾರಣೆ ಮತ್ತು ಸುರಕ್ಷಿತ ಹೆರಿಗೆಗಾಗಿ ಸಮಾಜವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಡಾಕ್ಟರ್ ಹೇಳುತ್ತಾರೆ. ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಕಾನ್ಸಂಟ್ರೇಶನ್ ಕೊಡೊ ಮೂಲಕ ಮತ್ತು ಸ್ಟಿಲ್ ಬರ್ತ್ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದುವ ಮೂಲಕ ನಾವು ಈ ದಿಕ್ಕಿನಲ್ಲಿ ಯಶಸ್ವಿಯಾಗಬಹುದು.

ಅಂಟಿ ನೆಟಲ್ ಅಪಾಯಿಂಟ್ ಮೆಂಟ್(Antenatal Appointment) ತೆಗೆದುಕೊಳ್ಳಬೇಕು
ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ, ಗರ್ಭಿಣಿಯರು ತಮ್ಮ ಡೆಲಿವರಿಗೂ ಮೊದಲು ವೈದ್ಯರನ್ನು ಭೇಟಿಯಾಗೋದನ್ನು ತಪ್ಪಿಸಿಕೊಳ್ಳಬಾರದು. ಕೆಲವು ಪರೀಕ್ಷೆಗಳಿವೆ, ಅವುಗಳ ಸಹಾಯದಿಂದ ನಿರ್ದಿಷ್ಟ ಸಮಯದಲ್ಲಿ ಸಮಸ್ಯೆಯನ್ನು ಕಂಡುಹಿಡಿಯಬಹುದು. ಗರ್ಭದಲ್ಲಿ ನಿಮ್ಮ ಮಗು ಎಷ್ಟು ಸುರಕ್ಷಿತವಾಗಿದೆ ಎಂದು ತಿಳಿಯಲು ಇದು ನಿಮಗೆ ಅನುವು ಮಾಡಿಕೊಡುತ್ತೆ.

ಆಕ್ಟಿವ್(Active) ಆಗಿರಿ 
ಗರ್ಭಿಣಿಯರು ಅನಾರೋಗ್ಯಕರ ಆಹಾರ ಸೇವನೆಯಿಂದ ದೂರವಿರಬೇಕು ಮತ್ತು ಸಕ್ರಿಯವಾಗಿರಲು ಪ್ರಯತ್ನಿಸಬೇಕು. ಅಧಿಕ ತೂಕ ಅಥವಾ ಬೊಜ್ಜು ಗರ್ಭಾವಸ್ಥೆಯಲ್ಲಿ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತೆ . ಗರ್ಭಧಾರಣೆಯ ಸಮಯದಲ್ಲಿ ತೂಕ ಇಳಿಸುವ ಆಹಾರ ತೆಗೆದುಕೊಳ್ಳೋದಲ್ಲ, ಆದರೆ ನೀವು ಈಗಾಗಲೇ ಅಧಿಕ ತೂಕ ಹೊಂದಿದ್ದರೆ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿ.

ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ, ಗರ್ಭಧಾರಣೆಯ 28 ನೇ ವಾರದ ನಂತರ ಬೆನ್ನಿನ ಮೇಲೆ ಮಲಗೋದು(Sleep) ಸ್ಟಿಲ್ ಬರ್ತ್ ಅಪಾಯವನ್ನು ದ್ವಿಗುಣಗೊಳಿಸುತ್ತೆ. ಬೆನ್ನಿನ ಮೇಲೆ ಮಲಗಿದಾಗ ಮಗುವಿಗೆ ರಕ್ತ ಮತ್ತು ಆಮ್ಲಜನಕದ ಹರಿವು ಅಡ್ಡಿಯಾಗುತ್ತೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ನೀವು ಒಂದು ಸೈಡ್ ಮಲಗೋದು ಉತ್ತಮ.
 

ಸಿಗರೇಟ್ ಮತ್ತು ಆಲ್ಕೋಹಾಲ್(Alcohol) ನಿಂದ ದೂರವಿರಿ
ನೀವು ಆಲ್ಕೋಹಾಲ್ ಅಥವಾ ಸಿಗರೇಟು ಸೇವಿಸುವವರಾದ್ರೆ, ಅದನ್ನು ತಕ್ಷಣ ನಿಲ್ಲಿಸಿ. ಧೂಮಪಾನ ಮಾಡುವ ವ್ಯಕ್ತಿಯೊಂದಿಗೆ ಅಥವಾ ಸುತ್ತಲೂ ವಾಸಿಸೋದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹಾನಿ ಮಾಡುತ್ತೆ. ಆದ್ದರಿಂದ ಸಾಧ್ಯವಾದಷ್ಟು ಧೂಮಪಾನದಿಂದ ದೂರವಿರಲು ಪ್ರಯತ್ನಿಸಿ.

ಗರ್ಭಾವಸ್ಥೆಯಲ್ಲಿ ಆಲ್ಕೋಹಾಲ್ ಅಥವಾ ಸಿಗರೇಟುಗಳನ್ನು(Cigeratte) ತ್ಯಜಿಸಲು ನಿಮಗೆ ತೊಂದರೆ ಇದ್ದರೆ, ನೀವು ವೃತ್ತಿಪರರ ಸಹಾಯ ಸಹ ತೆಗೆದುಕೊಳ್ಳಬಹುದು. ಈ ಎರಡೂ ವಿಷಯಗಳು ನಿಮಗೆ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ ಕೆಟ್ಟದ್ದು ಎಂಬುದನ್ನು ನೆನಪಿಡಿ.

Latest Videos

click me!