ಗರ್ಭಾವಸ್ಥೆಯಲ್ಲಿ ತಲೆನೋವು ಕಾಡೋದು ಯಾಕೆ ಗೊತ್ತಾ?

First Published | Feb 21, 2023, 5:46 PM IST

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ವಿವಿಧ ಸಮಸ್ಯೆಗಳು ಕಾಡುತ್ತವೆ. ಕೆಲವರಿಗೆ ಮಾರ್ನಿಂಗ್ ಸಿಕ್ ನೆಸ್ ಆದ್ರೆ, ಇನ್ನೂ ಕೆಲವರಿಗೆ ವೀಕ್ ನೆಸ್, ಮತ್ತೆ ಕೆಲವರಿಗೆ ತಲೆನೋವು ಇತ್ಯಾದಿ. ಆದ್ರೆ ಯಾಕೆ ಹೀಗೆ ಸಂಭವಿಸುತ್ತೆ ಅನ್ನೋದು ನಿಮಗೆ ಗೊತ್ತಾ? ಇಲ್ಲಿ ಕೇಳಿ ಕಾರಣ

ಗರ್ಭಾವಸ್ಥೆಯಲ್ಲಿ ತಲೆನೋವಿಗೆ ಹಲವು ಕಾರಣಗಳಿರಬಹುದು : (headache during pregnancy)
ತಲೆನೋವಿನ ಸಮಸ್ಯೆ ಸಾಮಾನ್ಯವಾಗಿ ಗರ್ಭಧಾರಣೆಯ ಮೊದಲ ಅಥವಾ ಎರಡನೇ ತ್ರೈಮಾಸಿಕದಲ್ಲಿ ಪ್ರಾರಂಭವಾಗುತ್ತದೆ. ಇದರ ಹಿಂದೆ ಅನೇಕ ಕಾರಣಗಳಿರಬಹುದು. ಅವುಗಳನ್ನು ತಿಳಿದುಕೊಂಡು ಎಚ್ಚರ ವಹಿಸಿದ್ರೆ, ಸಮಸ್ಯೆ ನಿವಾರಣೆಯಾಗಬಹುದು.
 

ನಿದ್ರೆಯ ಕೊರತೆ (sleeplessness)
ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ ಮತ್ತು ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಮಾಡದಿದ್ದರೆ, ತಲೆನೋವಿನ ಸಮಸ್ಯೆ ಕಾಡಬಹುದು. ಈ ಸಮಸ್ಯೆ ತಪ್ಪಿಸಲು ದಿನದಲ್ಲಿ ಕನಿಷ್ಟ ಎಂಟು ಗಂಟೆಗಳ ಕಾಲ ನಿದ್ದೆ ಮಾಡೋದನ್ನು ಮರೆಯಬೇಡಿ. 

Tap to resize

ನಿರ್ಜಲೀಕರಣ (Dehydration)
ಗರ್ಭಿಣಿಯಾಗಿದ್ದಾಗ ಮಾರ್ನಿಂಗ್ ಸಿಕ್ ನೆಸ್ ಸಾಮಾನ್ಯವಾಗುತ್ತದೆ, ಇದರಿಂದ ಪದೇ ಪದೇ ವಾಕರಿಕೆ, ವಾಂತಿ ಉಂಟಾಗುತ್ತೆ. ಆಗಾಗ್ಗೆ ವಾಂತಿ ಮಾಡುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ, ಇದು ತಲೆನೋವಿಗೆ ಕಾರಣವಾಗುತ್ತದೆ.

ಬಹಳ ಸಮಯದವರೆಗೆ ಹಸಿವಿನಿಂದ ಇರುವುದು
ಗರ್ಭಿಣಿ ಮಹಿಳೆ ದೀರ್ಘಕಾಲದವರೆಗೆ ಖಾಲಿ ಹೊಟ್ಟೆಯಲ್ಲಿ ಇದ್ದರೆ, ಅವಳ ರಕ್ತದಲ್ಲಿನ ಸಕ್ಕರೆ ಮಟ್ಟ (blood sugar level) ಕುಸಿಯಲು ಪ್ರಾರಂಭಿಸುತ್ತದೆ, ಇದು ತಲೆನೋವು ಅಥವಾ ತಲೆತಿರುಗುವಿಕೆಗೆ ಕಾರಣವಾಗುತ್ತದೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಊಟ ಮಾಡೋದನ್ನು ರೂಢಿಸಿಕೊಳ್ಳೋದು ಬೆಸ್ಟ್. 

ಅಧಿಕ ರಕ್ತದೊತ್ತಡ (High blood pressure)
ಗರ್ಭಧಾರಣೆಯ ಮೂರನೇ ತಿಂಗಳ ನಂತರ ಅಧಿಕ ರಕ್ತದೊತ್ತಡವು ಸಾಮಾನ್ಯವಾಗುತ್ತದೆ. ಇದರಿಂದಾಗಿ ಮಸುಕಾದ ದೃಷ್ಟಿ ಮತ್ತು ತಲೆನೋವಿಗೆ ಕಾರಣವಾಗುತ್ತದೆ. ಹಾಗಾಗಿ ರಕ್ತದೊತ್ತಡ ನಿಯಂತ್ರಣದಲ್ಲಿಡುವುದನ್ನು ಮರೆಯಬೇಡಿ. 

ಮೈಗ್ರೇನ್ (Migrain)
ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಮೈಗ್ರೇನ್ ಸಮಸ್ಯೆಗಳು ಸಾಕಷ್ಟು ಸಾಮಾನ್ಯವಾಗಿದೆ. ಇದು ತಲೆನೋವು ಮತ್ತು ಮಸುಕಾದ ದೃಷ್ಟಿಗೆ ಕಾರಣವಾಗುತ್ತದೆ. ಹಾಗಾಗಿ ಮೈಗ್ರೇನ್ ಸಮಸ್ಯೆಗೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮವಾಗಿದೆ. 
 

ಪೌಷ್ಠಿಕಾಂಶದ ಕೊರತೆ (Nutritional deficiency)
ಗರ್ಭಾವಸ್ಥೆಯಲ್ಲಿ ಸೇವಿಸುವ ಆಹಾರದಿಂದ ಬರುವ ಪೋಷಕಾಂಶಗಳು ಮಗುವಿನ ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ದೇಹಕ್ಕೆ ಸಾಕಷ್ಟು ಪೌಷ್ಠಿಕಾಂಶವನ್ನು ನೀಡುತ್ತದೆ ಮತ್ತು ತಲೆನೋವಿಗೆ ಕಾರಣವಾಗುತ್ತದೆ. 

ಒತ್ತಡ (stress)
ಗರ್ಭಿಣಿ ಮಹಿಳೆಯರು ಎಲ್ಲಾ ವಿಷಯದ ಬಗ್ಗೆ ಈ ಸಮಯದಲ್ಲಿ ಹೆಚ್ಚು ಚಿಂತಿತರಾಗುತ್ತಾರೆ. ಮಗು ಸರಿಯಾಗಿ ಬೆಳೆಯುತ್ತಿದೆಯೋ ಏನೋ? ಡೆಲಿವರಿ ಸರಿಯಾಗಿ ಆಗುತ್ತದೆಯೋ ಇಲ್ವೋ? ಹೀಗೆ ಗರ್ಭಿಣಿಯರು ಅನೇಕ ವಿಷಯಗಳ ಬಗ್ಗೆ ಒತ್ತಡ ಮತ್ತು ಉದ್ವೇಗವನ್ನು ಹೆಚ್ಚಿಸುತ್ತಾರೆ, ಇದು ತಲೆನೋವಿಗೆ ಕಾರಣವಾಗುತ್ತದೆ. 

ಹಾರ್ಮೋನುಗಳ ಬದಲಾವಣೆಗಳು (hormonal imbalance)
ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಅನೇಕ ಹಾರ್ಮೋನುಗಳ ಬದಲಾವಣೆಗಳಾಗುತ್ತವೆ. ಇದು ಸಾಮಾನ್ಯ ಕೂಡ ಆಗಿದೆ. ಇವುಗಳು ತಲೆನೋವನ್ನು ಸಹ ಪ್ರಚೋದಿಸಬಹುದು. ಕಡಿಮೆ ತಲೆನೋವು ಇದ್ದರೆ, ಅದನ್ನು ವಿಶ್ರಾಂತಿ ಪಡೆಯುವ ಮೂಲಕ ಅಥವಾ ಮನೆಮದ್ದುಗಳನ್ನು ಬಳಸುವ ಮೂಲಕ ಪರಿಹರಿಸಿ. ವಿಪರೀತ ತಲೆನೋವು ಕಂಡು ಬಂದರೆ ವೈದ್ಯರ ಬಳಿ ಸಲಹೆ ಪಡೆಯಿರಿ. 
 

Latest Videos

click me!