ಯೋನಿಯ ಆರೋಗ್ಯಕ್ಕೆ ಸಂಬಂಧಿಸಿದ ಈ ತಪ್ಪು ಮಾಡ್ಬೇಡಿ

First Published | Nov 18, 2022, 4:12 PM IST

ನಮ್ಮ ದೇಹದ ಪ್ರತಿಯೊಂದು ಭಾಗಗಳನ್ನು ನಾವು ನೊಡಿಕೊಳ್ಳುವಂತೆ ಯೋನಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ವಜೈನಾ ಆರೋಗ್ಯವಾಗಿದ್ದರೆ, ನೀವು ಹಲವಾರು ಸಮಸ್ಯೆಗಳನ್ನು ತಪ್ಪಿಸಬಹುದು. ನಿಮ್ಮ ಯೋನಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನೀವು ಬಯಸಿದರೆ, ನೀವು ಕೆಲವು ತಪ್ಪುಗಳನ್ನು ತಪ್ಪಿಸಬೇಕು. 

ಹೆಚ್ಚಿನ ಮಹಿಳೆಯರು ಒಂದು ಹಂತದಲ್ಲಿ ಯೋನಿ ಸೋಂಕಿನಿಂದ ಬಳಲುತ್ತಿದ್ದಾರೆ. ಯೋನಿ ಸೋಂಕಿನ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದು, ಮಹಿಳೆಯರಿಗೆ ಸ್ವಚ್ಛತೆಗೆ ಸಂಬಂಧಿಸಿದ ಸಾಕಷ್ಟು ಮಾಹಿತಿ ಇಲ್ಲದಿರುವುದು. ಯೋನಿ ಆರೋಗ್ಯ (vaginal health) ರಕ್ಷಣೆಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಸರಿಯಾದ ಮಾಹಿತಿ ಇಲ್ಲದಿದ್ದಾಗ, ಅವರು ಕೆಲವು ತಪ್ಪುಗಳನ್ನು ಮಾಡುತ್ತಾರೆ ಮತ್ತು ಇದು ಅವರ ಯೋನಿಯನ್ನು ಹಾನಿಗೊಳಿಸುತ್ತೆ.

ನಿಜವಾಗಿ ಹೇಳಬೇಕಂದ್ರೆ, ಸೋಂಕಿನಿಂದ ನಿಮ್ಮನ್ನು ರಕ್ಷಿಸಲು ಬ್ಯಾಕ್ಟೀರಿಯಾ (bacteria) ಉತ್ಪಾದಿಸುವ ಮೂಲಕ ಯೋನಿ ತನ್ನನ್ನು ತಾನೇ ಸ್ವಚ್ಛಗೊಳಿಸುತ್ತದೆ. ಇದರ ಹೊರತಾಗಿಯೂ, ನಮ್ಮ ಕೆಲವು ತಪ್ಪುಗಳು ಮತ್ತು ಅಭ್ಯಾಸಗಳು ಯೋನಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ, ಇದರಿಂದಾಗಿ ಮುಂದೆ ಸೋಂಕಿಗೆ ಕಾರಣವಾಗಬಹುದು. ಆದ್ದರಿಂದ, ದೇಹದ ಇತರ ಭಾಗಗಳಂತೆ, ಯೋನಿಯನ್ನು ಸಹ ಸಂಪೂರ್ಣವಾಗಿ ನೋಡಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ಆದ್ದರಿಂದ ಯೋನಿ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ತಪ್ಪು ಕಲ್ಪನೆಗಳ ಬಗ್ಗೆ ಇಂದು ಈ ಲೇಖನದಲ್ಲಿ ತಿಳಿಯೋಣ.

Tap to resize

ಯೋನಿಯ ಒಳಗಿನಿಂದ ಸ್ವಚ್ಛಗೊಳಿಸುವುದು

ಯೋನಿಯ ಶುಚಿತ್ವಕ್ಕೆ (vaginal hygine) ಗಮನ ಹರಿಸಬೇಕು ಎಂಬುದು ನಿಜ. ಆದರೆ ಇದರರ್ಥ ನೀವು ಯೋನಿಯ ಒಳಗಿನಿಂದ ಸ್ವಚ್ಛಗೊಳಿಸುತ್ತೀರಿ ಎಂದಲ್ಲ. ಯೋನಿಯನ್ನು ಒಳಗಿನಿಂದ ಸ್ವಚ್ಛಗೊಳಿಸಲು ನೀವು ಸಾಬೂನು ಅಥವಾ ಇತರ ಯಾವುದೇ ಉತ್ಪನ್ನ ಬಳಸುವ ಅಗತ್ಯವಿಲ್ಲ. ಹಾಗೆ ಮಾಡೋದ್ರಿಂದ ಯೋನಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ನೀವು ಇದನ್ನು ಮಾಡಿದಾಗ, ಉತ್ತಮ ಬ್ಯಾಕ್ಟೀರಿಯಾಗಳು ನಷ್ಟವಾಗುತ್ತವೆ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ಅತಿಯಾದ ಬೆಳವಣಿಗೆಯಿಂದಾಗಿ ಸೋಂಕಿನ ಅಪಾಯ ಹೆಚ್ಚಾಗುತ್ತದೆ.  

ತುರಿಕೆಯನ್ನು ಅವಾಯ್ಡ್ ಮಾಡಬೇಡಿ

ಯೋನಿಯ ಆರೋಗ್ಯದ ವಿಷಯಕ್ಕೆ ಬಂದಾಗ, ಕೆಲವು ಚಿಹ್ನೆಗಳನ್ನು ನಿರ್ಲಕ್ಷಿಸುವುದು ಅತಿದೊಡ್ಡ ತಪ್ಪು. ನೀವು ನಿರಂತರವಾಗಿ ತುರಿಕೆ (vaginal infection) ಅನುಭವಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಯೋನಿಯಲ್ಲಿ ತುರಿಕೆಯು ಅನೇಕ ವಿಷಯಗಳಿಂದ ಉಂಟಾಗಬಹುದು. ಆದ್ದರಿಂದ, ನೀವು ನಿರಂತರವಾಗಿ ತುರಿಕೆ ಸಮಸ್ಯೆ ಹೊಂದಿದ್ದರೆ, ಖಂಡಿತವಾಗಿಯೂ ಒಮ್ಮೆ ವೈದ್ಯರನ್ನು ಭೇಟಿ ಮಾಡಿ.

ಬೆವರುವ ಬಟ್ಟೆ ಧರಿಸೋದನ್ನು ಅವಾಯ್ಡ್ ಮಾಡಿ

ಒಳ ಉಡುಪುಗಳು ಯೋನಿ ಆರೋಗ್ಯದ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ. ನೀವು ದೀರ್ಘಕಾಲದವರೆಗೆ ಬಿಗಿಯಾದ ಮತ್ತು ಬೆವರುವ ಒಳ ಉಡುಪು (sweating innerwear) ಧರಿಸಿದ್ರೆ, ಅದು ಶಿಲೀಂಧ್ರ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಬೆಚ್ಚಗಿನ ಮತ್ತು ತೇವಾಂಶದ ವಾತಾವರಣದಲ್ಲಿ ಯೀಸ್ಟ್ ಬೆಳೆಯುವುದರಿಂದ, ಬೆವರುವ ಬಟ್ಟೆಗಳಲ್ಲಿ ಬೆಳೆಯುವ ಅಪಾಯ ಹೆಚ್ಚಿದೆ. 

ವಿವಿಧ ಪ್ರಯೋಗಗಳನ್ನು ಮಾಡೋದು

ಇತ್ತೀಚಿಗೆ ಯೋನಿ ಆರೋಗ್ಯ ಮತ್ತು ಆರೈಕೆಗೆ ಸಂಬಂಧಿಸಿದ ವಿವಿಧ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇಷ್ಟೇ ಅಲ್ಲ, ಪ್ರತಿದಿನ ಅನೇಕ ರೀತಿಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆದರೆ ನೀವು ಸಾಕಷ್ಟು ಮಾಹಿತಿಯಿಲ್ಲದೆ ಈ ಇತ್ತೀಚಿನ ಉತ್ಪನ್ನಗಳನ್ನು ಬಳಸೋದು ತಪ್ಪು. ಇದು ಯೋನಿಗೆ ತುಂಬಾ ಮಾರಣಾಂತಿಕ. ನೀವು ಉತ್ಪನ್ನವನ್ನು ಬಳಸಲು ಬಯಸಿದರೆ, ಮೊದಲು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ.

ನೀವೇ ಔಷಧಿ ತೆಗೆದುಕೊಳ್ಳಬೇಡಿ

ಕೆಲವೊಮ್ಮೆ ಮಹಿಳೆಗೆ ಯೋನಿಗೆ ಸಂಬಂಧಿಸಿದ ಸಮಸ್ಯೆ ಇರುತ್ತೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಮಹಿಳೆಯರು ವೈದ್ಯರ ಸಹಾಯ ತೆಗೆದುಕೊಳ್ಳುವ ಬದಲು ತಮ್ಮನ್ನು ತಾವು ಚಿಕಿತ್ಸೆ ಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ಮಹಿಳೆಯರು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳನ್ನು ಬಳಸುತ್ತಾರೆ.  ಕೆಲವೊಮ್ಮೆ ಮನೆಮದ್ದುಗಳನ್ನು ಬಳಸಿ ಚಿಕಿತ್ಸೆ ಪಡೆಯುತ್ತಾರೆ.. ಆದ್ರೆ, ಹಾಗೆ ಮಾಡುವುದು ಸರಿಯಲ್ಲ. ಯೋನಿಗೆ ಸಂಬಂಧಿಸಿದ ಸಾಕಷ್ಟು ಮಾಹಿತಿಯ ಕೊರತೆಯಿಂದಾಗಿ, ಈ ಮನೆಮದ್ದುಗಳು ನಿಮಗೆ ಹೆಚ್ಚು ಹಾನಿಯನ್ನುಂಟು ಮಾಡೋ ಚಾನ್ಸ್ ಇದೆ..
 

Latest Videos

click me!