ತುಂಬಾ ಬಿಗಿಯಾದ ಬ್ರಾ ಧರಿಸಿದ್ರೆ ಗಂಭೀರ ಅನಾರೋಗ್ಯ ಕಾಡುತ್ತೆ!

First Published | Nov 17, 2022, 3:54 PM IST

ಅನೇಕ ಬಾರಿ, ತಮ್ಮನ್ನು ಹೆಚ್ಚು ಫಿಟ್ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಲು, ಮಹಿಳೆಯರು ಬಿಗಿಯಾದ ಮತ್ತು ಸಣ್ಣ ಕಪ್ ಬ್ರಾ ಖರೀದಿಸುತ್ತಾರೆ. ಆದರೆ, ಅವರು ಇಂತಹ ಟೈಟ್ ಬ್ರಾ ದರಿಸೋದ್ರಿಂದ ಅನಾನುಕೂಲತೆಯನ್ನು ಅನುಭವಿಸೋದು ಮಾತ್ರವಲ್ಲದೆ ಅನೇಕ ಸಮಸ್ಯೆಗಳನ್ನು ಸಹ ಹೊಂದುತ್ತಾರೆ. ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಮುಂದೆ ಓದಿ.  
 

ಯಾವುದೇ ಹಬ್ಬವಾಗಿರಲಿ ಅಥವಾ ಯಾವುದೇ ಸಂದರ್ಭವಾಗಿರಲಿ, ಮಹಿಳೆಯರು ತಮ್ಮ ಫ್ಯಾಷನ್ ಬಗ್ಗೆ ಮತ್ತು ತಾವು ಏನನ್ನು ಹೇಗೆ ಧರಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಮ್ಯಾಚಿಂಗ್ ಏನು ಧರಿಸಬೇಕು, ಇದರೊಂದಿಗೆ, ಅವರು ತಮ್ಮ ಶೇಪ್ ಬಗ್ಗೆ ಸಹ ತುಂಬಾ ಕಾಳಜಿ ವಹಿಸುತ್ತಾರೆ, ಹಾಗಾಗಿ ಬ್ರಾದಲ್ಲಿ ಅವರ ಆಯ್ಕೆ ಸಾಕಷ್ಟು ವಿಭಿನ್ನವಾಗಿರುತ್ತೆ.ಆದರೆ ಆಯ್ಕೆ ಮಾಡುವಾಗ ನಿಮ್ಮ ಸೈಜ್ ಗೆ ಸರಿಯಾಗಿರುವ ಬ್ರಾ(Bra) ಆಯ್ಕೆ ಮಾಡೋದು ಉತ್ತಮ. ಸಣ್ಣ ಸೈಜ್ ನ ಬ್ರಾ ಖರೀದಿಸಿದರೆ ಇದರಿಂದ ಮುಂದೆ ಹಲವಾರು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಅನೇಕ ಬಾರಿ ತಮ್ಮನ್ನು ಹೆಚ್ಚು ಫಿಟ್ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಲು, ಮಹಿಳೆಯರು ಬಿಗಿಯಾದ ಮತ್ತು ಸಣ್ಣ ಕಪ್ ಬ್ರಾಗಳನ್ನು ಖರೀದಿಸುತ್ತಾರೆ, ಹಾಗಾಗಿ, ಅವರು ಆನ್ ಕಂಫರ್ಟಬಲ್ (Uncomfortable) ಭಾವನೆಯನ್ನು ಅನುಭವಿಸೋದಲ್ಲದೆ ಅನೇಕ ಸಮಸ್ಯೆಗಳನ್ನು ಸಹ ಹೊಂದಿರುತ್ತಾರೆ. ಬಿಗಿಯಾದ ಬ್ರಾ ಧರಿಸುವ ಮಹಿಳೆಯರು ಅನೇಕ ರೀತಿಯಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಹೊಂದುತ್ತಾರೆ. ಈ ಕಾರಣದಿಂದಾಗಿ, ಅವರು ಬೆನ್ನು ನೋವು, ಉಸಿರುಗಟ್ಟುವಿಕೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.

Tap to resize

ತುರಿಕೆ (Itching) ಮತ್ತು ಕಿರಿಕಿರಿ:

ಬಿಗಿಯಾದ ಬ್ರಾ ಧರಿಸುವುದರಿಂದ ಯಾವೆಲ್ಲಾ  ಸಮಸ್ಯೆಗಳು ಉಂಟಾಗಬಹುದು ಎಂದು ತಿಳಿಯೋಣ.

ಬಿಗಿಯಾದ ಬ್ರಾ ಧರಿಸೋದರಿಂದ ಗಾಳಿ ಹಾದುಹೋಗೋದಿಲ್ಲ. ಇದು ದೇಹದಲ್ಲಿ ದದ್ದುಗಳಿಗೆ ಕಾರಣವಾಗುತ್ತೆ. ತುರಿಕೆ ಪ್ರಾರಂಭವಾಗುತ್ತೆ. ಇಷ್ಟೇ ಅಲ್ಲ, ಚರ್ಮದ ಮೇಲ್ಮೈಯಲ್ಲಿ ಸೋಂಕಿನ ಅಪಾಯ ಉಂಟಾಗುವ ಸಾಧ್ಯತೆ ಇದೆ. ಬಿಗಿಯಾದ ಫಿಟ್ಟಿಂಗ್ ಬ್ರಾ  ನಿಮ್ಮನ್ನು ಹೆಚ್ಚು ತೊಂದರೆಗೆ ಸಿಲುಕಿಸಬಹುದು.
 

ಅಸಿಡಿಟಿ(Acidity) ಸಮಸ್ಯೆ:

ಬಿಗಿಯಾದ ಬ್ರಾ ಧರಿಸಿದಾಗ, ಅದು ಚರ್ಮಕ್ಕೆ ಸಮಸ್ಯೆಯಾಗಿ ಪರಿಣಮಿಸೋದು ಮಾತ್ರವಲ್ಲದೆ ದೇಹದ ಅನೇಕ ಭಾಗಗಳ ಮೇಲೂ ಪರಿಣಾಮ ಬೀರುತ್ತೆ. ಬ್ರಾದ ಕೆಳಗಿನ ಪಟ್ಟಿಯು ಆಗಾಗ್ಗೆ ಶ್ವಾಸಕೋಶದ (Lungs) ಕೆಳಭಾಗವನ್ನು ತಲುಪುತ್ತೆ, ಅಲ್ಲಿ ಮತ್ತು ಹೊಟ್ಟೆಯ ಭಾಗಕ್ಕೂ ನಿಯಮಿತ ಒತ್ತಡವಿರುತ್ತೆ. ಈ ಕಾರಣದಿಂದಾಗಿ, ಹೊಟ್ಟೆಯಲ್ಲಿ ರೂಪುಗೊಂಡ ಆಸಿಡ್ ಮೇಲ್ಮುಖವಾಗಿ ಬರುತ್ತೆ. ಹಾಗಾಗಿ ಅಸಿಡಿಟಿ, ಹಾರ್ಟ್ ಬರ್ನಿಂಗ್ (Heart Burning), ಹುಳಿ ತೇಗು ಮೊದಲಾದ ಸಮಸ್ಯೆ ಉಂಟಾಗಬಹುದು.

ಸ್ತನ ನೋವು(Breast pain):

ಫಿಟ್ಟಿಂಗ್  ಮತ್ತು ಸಣ್ಣ ಗಾತ್ರದ ಬ್ರಾಗಳನ್ನು ಧರಿಸುವಾಗ  ಸ್ತನ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತೆ. ಸ್ತನಗಳಲ್ಲಿ ನೋವು ಪ್ರಾರಂಭವಾಗಬಹುದು. ಸ್ತನಗಳು ಭಾರವಾಗಿರುವ ಜನರಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುವ ಸಾಧ್ಯತೆ ಇದೆ. ಆದುದರಿಂದ ಇಂತಹ ಬ್ರಾಗಳನ್ನು ಅವಾಯ್ಡ್ ಮಾಡೋದು ಉತ್ತಮ. .

ಬೆನ್ನುನೋವು (Back pain):

ದೊಡ್ಡ ಸ್ತನ ಹೊಂದಿರುವ ಮತ್ತು ಗಾತ್ರ ಹಾಗೂ ಶೇಪ್ ಕಾಪಾಡಿಕೊಳ್ಳಲು ಸಣ್ಣ ಗಾತ್ರದ ಬ್ರಾಗಳನ್ನು ಬಲವಂತವಾಗಿ ಧರಿಸುವ ಮಹಿಳೆಯರು ಬೆನ್ನು ನೋವಿನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಅಷ್ಟೇ ಅಲ್ಲ ತುಂಬಾ ಬಿಗಿಯಾದ ಬ್ರಾಗಳನ್ನು ಧರಿಸುವ ಮೂಲಕ ರಕ್ತ ಪರಿಚಲನೆಯ ಮೇಲೂ ಪರಿಣಾಮ ಬೀರಬಹುದು.

ಫಿಗರ್ (Figure) ಹಾಳಾಗೋ ಸಾಧ್ಯತೆ:

ಬ್ರಾವನ್ನು ಸ್ತನಗಳನ್ನು ಮೇಲೆತ್ತಲು ಮತ್ತು ಬೆಂಬಲವನ್ನು ಒದಗಿಸಲು ಸಹಾಯ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಆದರೆ ನೀವು ತಪ್ಪು ಸೈಜ್ ಧರಿಸಿದ್ರೆ, ಅದು ಇದಕ್ಕೆ ತದ್ವಿರುದ್ಧವಾಗಿ ಕಾರ್ಯ ನಿರ್ವಹಿಸಬಹುದು. ಇದರಿಂದ ಫಿಗರ್ ಹಾಳಾಗುವ ಸಾಧ್ಯತೆ ಇದೆ. ಹಾಗಾಗಿ ಟೈಟ್ ಬ್ರಾ ಧರಿಸೋದ್ರಿಂದ ಆರೋಗ್ಯಕ್ಕೆ ಅಪಾಯ ಹೆಚ್ಚು, ಹುಷಾರ್! 

Latest Videos

click me!