ಭಾರತೀಯ ಬಿಲಿಯನೇರ್‌ನ ಸೊಸೆ, ಜರ್ಮನ್‌ನಲ್ಲಿ ದಿನಕ್ಕೆ ಕೋಟಿ ಕೋಟಿ ಗಳಿಸುವ ಬೃಹತ್ ಉದ್ಯಮಿ!

First Published | Nov 5, 2023, 1:08 PM IST

ಭಾರತೀಯ ಬಿಲಿಯನೇರ್ ಉದ್ಯಮಿ ಲಕ್ಷ್ಮಿ ಮಿತ್ತಲ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಕೋಟಿ ಕೋಟಿ ಗಳಿಸುವ ಈ ಉದ್ಯಮಿ 2005ರಲ್ಲಿ, ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರು. ಲಕ್ಷ್ಮೀ ಮಿತ್ತಲ್ ಅವರಂತೆಯೇ ಅವ್ರ ಸೊಸೆ ಕೂಡಾ ಯಶಸ್ವೀ ಉದ್ಯಮಿ ಅನ್ನೋದು ನಿಮ್ಗೆ ಗೊತ್ತಿದ್ಯಾ?

ಭಾರತೀಯ ಬಿಲಿಯನೇರ್ ಉದ್ಯಮಿ ಲಕ್ಷ್ಮಿ ಮಿತ್ತಲ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇವರ ಸೊಸೆ ಮೇಘಾ ಮಿತ್ತಲ್‌. ಫೋರ್ಬ್ಸ್ ಪ್ರಕಾರ ಮೇಘಾ ಮಿತ್ತಲ್‌, 1,24,280 ಕೋಟಿ ರೂಪಾಯಿಗಳ  ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಲಕ್ಷ್ಮಿ ಮಿತ್ತಲ್‌ ಮಗ ಆದಿತ್ಯ ಮಿತ್ತಲ್, ಮೇಘಾ ಅವರನ್ನು ವಿವಾಹವಾದರು. ಆದಿತ್ಯ ಮಿತ್ತಲ್‌, ಆರ್ಸೆಲರ್ ಮಿತ್ತಲ್‌ನ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO). ಆದಿತ್ಯ-ಮೇಘಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

Tap to resize

ಕೋಲ್ಕತ್ತಾದಲ್ಲಿ ಜನಿಸಿದ ಮೇಘಾ, ವಾರ್ಟನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಹಣಕಾಸು ಮತ್ತು ನಿರ್ವಹಣೆಯಲ್ಲಿ ಪದವಿ ಪಡೆದಿದ್ದಾರೆ. ವಾರ್ಟನ್ ಶಾಲೆಯ ಸಲಹೆಗಾರರ ಮಂಡಳಿಯ ಸದಸ್ಯರೂ ಆಗಿದ್ದಾರೆ.

ಹೈದರಾಬಾದ್ ಪಬ್ಲಿಕ್ ಸ್ಕೂಲ್‌ನಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಪದವಿಯ ನಂತರ, ಅವರು ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ಸಂಶೋಧನಾ ವಿಭಾಗದಲ್ಲಿ ವಿಶ್ಲೇಷಕರಾಗಿ ಸೇರಿದರು. 

ಒಂದು ವರ್ಷದ ನಂತರ ಮೇಘಾ ಕಂಪನಿ ತೊರೆದರು. 2003 ರಲ್ಲಿ, ಅವರು ಲಂಡನ್‌ನ ಇಂಚ್‌ಬಾಲ್ಡ್ ಸ್ಕೂಲ್ ಆಫ್ ಡಿಸೈನ್‌ನಲ್ಲಿ ಆರ್ಕಿಟೆಕ್ಚರಲ್ ಇಂಟೀರಿಯರ್ ಡಿಸೈನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

ಮೇಘಾ ಮಿತ್ತಲ್, ಫ್ಯಾಷನ್ ಉದ್ಯಮಿಯಾಗಿದ್ದು ಜರ್ಮನ್ ಫ್ಯಾಷನ್ ಐಷಾರಾಮಿ ಬ್ರಾಂಡ್ ಎಸ್ಕಾಡಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈ ಹಿಂದೆ ಹೂಡಿಕೆ ಸಂಶೋಧನೆಯಲ್ಲಿ ಗೋಲ್ಡ್ಮನ್ ಸ್ಯಾಚ್ಸ್‌ನಲ್ಲಿ ಕೆಲಸ ಮಾಡಿದರು.

2009ರಲ್ಲಿ, ಎಸ್ಕಾಡಾವನ್ನು ವಹಿಸಿಕೊಂಡರು. ಕಂಪನಿಯನ್ನು ಆಧುನಿಕ ಐಷಾರಾಮಿ ಮತ್ತು ಲೈಫ್‌ಸ್ಟೈಲ್‌ ಬ್ರ್ಯಾಂಡ್ ಆಗಿ ಮರು-ಸ್ಥಾಪಿಸಿದರು. ಮೇಘಾ ಮತ್ತು ಅವರ ಪತಿ ಆದಿತ್ಯ, ಭಾರತ ಮತ್ತು ಯುಕೆ ಎರಡರಲ್ಲೂ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಪರೋಪಕಾರಿ ಕಾರಣಗಳಿಗೆ ಸಕ್ರಿಯವಾಗಿ ದಾನ ಮಾಡುತ್ತಾರೆ.

ಮೇಘಾ ಹೈದರಾಬಾದ್‌ನ ಮಹೇಂದ್ರ ಕುಮಾರ್ ಪಟೋಡಿಯಾ ಅವರ ಪುತ್ರಿ. ಅವರು ಎಕ್ಸಿಕ್. GTN ಇಂಡಸ್ಟ್ರೀಸ್‌ನಲ್ಲಿ ಅಧ್ಯಕ್ಷರು, CEO ಮತ್ತು MD. GTN ಇಂಡಸ್ಟ್ರೀಸ್ ಲಿಮಿಟೆಡ್ ಭಾರತದಲ್ಲಿ ಹತ್ತಿ ನೂಲಿನ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿದೆ. 

Latest Videos

click me!