'ನಾನು ನಂದಿನಿ, ಸಿಎ ಮಾಡೀನಿ..' 19 ವರ್ಷಕ್ಕೇ 1ನೇ ರ್ಯಾಂಕ್ ಜೊತೆ ಸಿಎ ಪಾಸ್ ಮಾಡಿ ದಾಖಲೆ ಗಳಿಸಿದ ಪೋರಿ

First Published | Jul 1, 2024, 3:06 PM IST

ಜಗತ್ತಿನ ಅತಿ ಚಿಕ್ಕ ವಯಸ್ಸಿನ ಚಾರ್ಟೆಡ್ ಅಕೌಂಟೆಂಟ್ ಈಕೆ. 19ನೇ ವರ್ಷಕ್ಕೇ ಸಿಎ ಪಾಸ್ ಮಾಡಿದ ನಂದಿನಿ ಅಗರ್ವಾಲ್ ..

ಈಕೆ ಚೋಟಾ ಪ್ಯಾಕೆಟ್ ಬಡಾ ಧಮಾಕಾ, ಬ್ಯೂಟಿ ವಿತ್ ಬ್ರೇನ್, ಸಣ್ಣ ವಯಸ್ಸಲ್ಲೇ ಸಿಎ ಪಾಸ್ ಮಾಡಿ- ಅದೂ ಆಲ್ ಇಂಡಿಯಾ 1ನೇ ರ್ಯಾಂಕ್ ಜೊತೆಗೆ ಸಾಧನೆ ಮೆರೆದಿದ್ದಾಳೆ. 

ತನ್ನ ಗೆಳೆಯರಲ್ಲಿ ಹೆಚ್ಚಿನವರು ಕಾಲೇಜು ಪ್ರವೇಶವನ್ನು ಬಯಸುತ್ತಿರುವ ವಯಸ್ಸಿನಲ್ಲಿ, ಮಧ್ಯಪ್ರದೇಶದ ಮೊರೆನಾದ 19 ವರ್ಷದ ನಂದಿನಿ ಅಗರವಾಲ್ ವಿಶ್ವದ ಅತ್ಯಂತ ಕಿರಿಯ ಮಹಿಳಾ ಚಾರ್ಟರ್ಡ್ ಅಕೌಂಟೆಂಟ್ (CA) ಆಗಿ ಗಿನ್ನೆಸ್ ದಾಖಲೆ ಪುಸ್ತಕ ಸೇರಿದ್ದಾಳೆ. 

Latest Videos


ಬಹಳ ಬುದ್ಧಿವಂತೆ ಮತ್ತು ಶ್ರದ್ಧಾವಂತ ವಿದ್ಯಾರ್ಥಿಯಾದ ನಂದಿನಿಯನ್ನು ಗುರುತಿಸಿದ ಶಾಲೆಯು ಆಕೆಗೆ ಎರಡು ತರಗತಿಗಳನ್ನು ಸ್ಕಿಪ್ ಮಾಡಲು ಅವಕಾಶ ನೀಡಿತು. ಪರಿಣಾಮವಾಗಿ 13 ವರ್ಷಕ್ಕೇ 10ನೇ ತರಗತಿ ಪಾಸ್ ಮಾಡಿಕೊಂಡಿದ್ದಳು ನಂದಿನಿ. 

15ನೇ ವಯಸ್ಸಿನಲ್ಲಿ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂದಿನಿ, ಕಿರಿಯ ಸಿಎ ಆಗುವತ್ತ ತನ್ನ ದೃಷ್ಟಿಯನ್ನು ಹೊಂದಿದ್ದಳು.

ಆದಾಗ್ಯೂ, ಅವಳ ಚಿಕ್ಕ ವಯಸ್ಸು ಸವಾಲುಗಳನ್ನು ಒಡ್ಡಿತು, ವಿಶೇಷವಾಗಿ ಅವಳ ಶಿಷ್ಯವೃತ್ತಿಯ ಸಮಯದಲ್ಲಿ. ಹೌದು, ವಯಸ್ಸಿನ ಕಾರಣದಿಂದ ಅನೇಕ ಸಂಸ್ಥೆಗಳು ಆಕೆಯನ್ನು ಅಪ್ರೆಂಟೀಸ್ ಆಗಿ ಸೇರಿಸಿಕೊಳ್ಳಲು ಸಿದ್ಧವಿರಲಿಲ್ಲ. 

ಈ ಅಡಚಣೆಯ ನಡುವೆಯೂ ನಂದಿನಿ ಎದೆಗುಂದದೆ ತನ್ನ ಗುರಿಯನ್ನು ಮುಂದುವರಿಸಿದಳು. 2021ರಲ್ಲಿ, 19ನೇ ವಯಸ್ಸಿನಲ್ಲಿ, ನಂದಿನಿ ಅಗರವಾಲ್ CA ಅಂತಿಮ ಪರೀಕ್ಷೆಯಲ್ಲಿ 800ರಲ್ಲಿ 614 (76.75%) ಅಂಕಗಳೊಂದಿಗೆ ಅಖಿಲ ಭಾರತ 1 ರ್ಯಾಂಕ್ ಗಳಿಸಿದಳು. 

ಆಕೆಯ ಫಲಿತಾಂಶವನ್ನು ಪ್ರಕಟಿಸಿದಾಗ ಅವಳು, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ವಿಶ್ವದ ಅತ್ಯಂತ ಕಿರಿಯ ಮಹಿಳಾ ಚಾರ್ಟರ್ಡ್ ಅಕೌಂಟೆಂಟ್ ಎಂಬ ಬಿರುದನ್ನು ಗಳಿಸಿದಳು.

ನಂದಿನಿಯ ಅಣ್ಣ ಆಕೆಯ ಪಯಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ. ಆತನೂ ಸಿಎ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದುದರಿಂದ ಅವಳು ಎದುರಿಸಿದ ಸವಾಲುಗಳನ್ನು ಅರ್ಥ ಮಾಡಿಕೊಂಡು ಅಮೂಲ್ಯವಾದ ಮಾರ್ಗದರ್ಶನ ನೀಡಿದ. 

ಅಂತಿಮ ಮೆರಿಟ್ ಪಟ್ಟಿಯಲ್ಲಿ ನಂದಿನಿ ಪ್ರಥಮ ಸ್ಥಾನ ಪಡೆದರೆ, ಆಕೆಯ ಸಹೋದರ ಅದೇ ಪರೀಕ್ಷೆಯಲ್ಲಿ 18ನೇ ಸ್ಥಾನ ಗಳಿಸಿದ್ದಾನೆ.

click me!